ತಾ.ಪಂ ಸದಸ್ಯನ ಮೇಲಿನ ಪ್ರಕರಣ ರದ್ದು ಪಡಿಸಿ ಸೂಕ್ತ ಭದ್ರತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ

0
161

ಕಲಬುರಗಿ: ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋವನ್ನು ಉದ್ದೇಶ ಪೂರ್ವಕವಾಗಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ತಿರುಚಿ ಪ್ರಸಾರ ಮಾಡಿರುವ ಹಾಗೂ ತಾಲೂಕ ಪಂಚಾಯತ ಸದಸ್ಯರಾದ ಶ್ರೀ ಮಲ್ಲನಗೌಡ ಪಾಟೀಲ ಇವರ ಮೇಲೆ ದಾಖಲಾದ ಪ್ರಕರಣ ರದ್ದುಗೊಳಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಶರಣಕುಮಾರ ಮೋದಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಗುರಮ್ಮ ನಿಂಗಣ್ಣಗೌಡ ಕುಳಕುಮಟಗಿ ಆತ್ಮಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಕಾರಣೀಭೂತರಾದವರಿಗೆ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿ ಪತ್ರ ನೀಡಲಾಯಿತು.

Contact Your\'s Advertisement; 9902492681

ನಾಗರಹಳ್ಳಿಯ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಭಾವಪೂರ್ಣ ಶೃಂದ್ಧಾಂಜಲಿ ಅರ್ಪಿಸಿ ತಾಲೂಕ ಪಂಚಾಯತ ಸದಸ್ಯರಾದ ಮಲ್ಲನಗೌಡ ಪಾಟೀಲ್ ಕುರಳಗೇರಾ ಇವರು ಮಾತನಾಡಿದ ವಿಡಿಯೋವನ್ನು ಯಾವುದೇ ಸಮುದಾಯದವರಿಗೆ ನಿಂದನೆಮಾಡಿರುವುದಿಲ್ಲ ಆದರೂ ಕೂಡಾ ಆ ವಿಡಿಯೋವನ್ನು ತಿರುಚಿ ತಮಗೆ ಅನುಕೂಲವಾಗುವಂತೆ ಬದಲಾವಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹರಿಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮಲ್ಲನಗೌಡ ಪಾಟೀಲ್ ಮಾತನಾಡುವ  ಸಮಯದಲ್ಲಿ ಯಡ್ರಾಮಿ ಠಾಣೆಯ ಪಿ.ಎಸ್.ಐ ಹಾಗೂ ಉಪ ತಹಸೀಲ್ಧಾರರು ಸ್ಥಳದಲ್ಲಿ ಇದ್ದರು ಎಂದು ತಿಳಿಸಿದ್ದಾರೆ.

ವಿಡಿಯೋ ನೋಡಿದ ಕೆಲವು ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ಧದಲ್ಲಿ ನಿಂದಿಸಿ, ಕರೆ ಮೂಲಕ ಜೀವಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೋಮುಗಲಭೆ ಶೃಷ್ಠಿ ಮಾಡುವ ರೀತಿಯಲ್ಲಿ ಅನ್ಯ ಸಮುದಾಯಗಳಿಗೆ ನಿಂದನೆ ಮಾಡುವುದೇ ಕೇಲವು ವ್ಯಕ್ತಿಗಳ ಕಾರ್ಯವಾಗಿದೆ ಇಂತಹ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮಜರುಗಿಸಿ ಪೋನ ಕರೆ ಮಾಡಿ ಜೀವಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮಲ್ಲನಗೌಡ ಪಾಟೀಲ ಕುರಳಗೇರಾ ಇವರ ಮೇಲೆ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಅಲ್ಲದೇ ಗುರಮ್ಮಳ ಸಾವಿಗೆ ಕಾರಣೀಭೂತರಾದವರನ್ನು 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ಮೃತ ಕುಟುಂಬಕ್ಕೆ 50 ಲಕ್ಷ ಪರಿಹಾರ ಹಾಗೂ ಭದ್ರತೆ ಒದಿಗಿಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದರು.

ಈ ಸಂದರ್ಭದಲ್ಲಿ ಯುವ ಘಟಕ ಗೌರವಾಧ್ಯಕ್ಷರಾದ ಎಮ್.ಎಸ್.ಪಾಟೀಲ ನರಿಬೋಳ, ಕಾರ್ಯಕಾರಿಣಿ ಸದಸ್ಯ ಡಾ.ಎಸ್.ಎಸ್.ಪಾಟೀಲ, ತಾತಾಗೌಡ ಎನ್.ಪಾಟೀಲ, ಮಂಜುನಾಥ ಅಂಕಲಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here