ಸುರಪುರ: ನನಗೆ ನಾಡಿನ ಎಲ್ಲಾ ಊರುಗಳಿಗಿಂತ ಸುರಪುರವೆಂದರೆ ಅಚ್ಚುಮೆಚ್ಚು ಅತೀವ ಸಂತೋಷವಾದಾಗ ಮತ್ತು ಅತೀವ ದುಖಃವಾದಾಗ ಮೊದಲು ನೆನಪಾಗುವ ಊರೆಂದರೆ ಅದು ಸುರಪುರ ಎಂದು ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡಿರುವ ಡಾ: ರಂಗರಾಜ ವನದುರ್ಗ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ,ನನಗೆ ಅನೇಕ ಸಂಕಟಗಳೂ ಬಂದಿವೆ ಆದರೆ ಆ ಸಂಕಟಗಳು ಇಲ್ಲಿ ಅರಸು ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು ಗುಂಡೇಟಿನಿಂದ ಪಟ್ಟಾಗಿನ ನೋವಿನಮುಂದೆ ಏನೆನು ಅಲ್ಲ ಎಂದು ಭಾವುಕತೆಯಿಂದ ನುಡಿದರು.ಹತ್ತು ವರ್ಷ ವಿವಿಧ ವಿವಿಗಳಲ್ಲಿ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದೆ.ಈಗ ನನ್ನ ಸೇವೆಯನ್ನು ಪರಿಗಣಿಸಿ ಆಯೋಗದ ಸದಸ್ಯನಾಗಿಸಲಾಗಿದೆ,ಹುದ್ದೆಗೆ ನ್ಯಾಯ ಸಲ್ಲಿಸುವ ಜೊತೆಗೆ ನಮ್ಮ ತನವನ್ನು ನಾನು ಉಳಿಸಿಕೊಂಡು ಸೇವೆ ಮಾಡುವುದಾಗಿ ಹಾಗು ಈ ಭಾಗದ ಅಭ್ಯಾರ್ಥಿಗಳಿಗೆ ನ್ಯಾಯ ಸಲ್ಲಿಸುವುದಾಗಿ ಭರವಸೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿ,ನಮ್ಮ ಕಲ್ಯಾಣ ಕರ್ನಾಟಕ ಭಾಗದ ಒಬ್ಬ ವ್ಯಕ್ತಿ ಇಂದು ಲೋಕಸೇವಾ ಆಯೋಗದ ಸದಸ್ಯನಾಗಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ,ರಂಗರಾಜ ಅವರು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಮೋಘವಾದ ಸೇವೆಯನ್ನು ಸಲ್ಲಿಸಿದ್ದಾರೆ ಅವರ ಸೇವೆಯನ್ನು ಪರಿಗಣಿಸಿ ಇಂದು ಆಯೋಗದ ಸದಸ್ಯ ಹುದ್ದೆ ಒಲಿದಿದ್ದು ಎಲ್ಲರಿಗೂ ಖುಷಿಯ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಂಘ ಮತ್ತು ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಪ್ರಾಸ್ತಾವಿಕವಾಗಿ ಉಪನ್ಯಾಸಕ ಡಾ. ಉಪೇಂದ್ರ ನಾಯಕ ಸುಬೇದಾರ ಹಾಗು ಉರ್ದು ಸಾಹಿತಿ ಇಕ್ಬಾಲ್ ರಾಹಿ,ಬಸವರಾಜ ಜಮದ್ರಖಾನಿ ಮಾತನಾಡಿದರು.ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ನಿರೂಪಿಸಿದರು.ರಾಜಶೇಖರ ದೇಸಾಯಿ ಸ್ವಾಗತಿಸಿದರು,ಎಪಿಎಫ್ ನ ಅನ್ವರ ಜಮಾದಾರ ವಂದಿಸಿದರು.ಕಾರ್ಯಕ್ರಮದಲ್ಲಿ ನಬಿಲಾಲ ಮಕಾಂದಾರ,ಶಿವಕುಮಾರ ಮಸ್ಕಿ,ಕನಕಪ್ಪ ವಾಗಣಗೇರಾ,ದೇವು ಹೆಬ್ಬಾಳ,ನಾಗೇಶ,ಸಂಪತ್ ಕುಮಾರ,ಬಿ.ಆರ್.ಪೊಲೀಸ್ ಪಾಟೀಲ್,ರಾಘವೇಂದ್ರ ಭಕ್ರಿ,ಜಯಲಲಿತಾ ಪಾಟೀಲ್,ಗೀತಾರಾಣಿ,ಹಸಿನಾ ಬಾನು,ವಿನೋದ್ ಕುಮಾರ ಸೇರಿದಂತೆ ಅನೇಕರಿದ್ದರು.