ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ೮ ರಂದು ಜಲ ಜಾಗೃತಿ ಸಮಾವೇಶ

0
41

ಕಲಬುರಗಿ: ವಾಟರ್ ಮ್ಯಾನ್ ಆಫ್ ಇಂಡಿಯಾ ಎಂದು ಜನಪ್ರೀಯವಾಗಿರುವ ಮ್ಯಾಗಸೆಸ್ಸೆ ಪ್ರಶಸ್ತಿ ವಿಜೇತ ರಾಜೇಂದ್ರಸಿಂಗ್ ಅವರು ಭಾನುವಾರ ೮ ರಂದು ಕಲಬುರಗಿ ನಗರದ ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಜಲ ಸಾಕ್ಷರತಾ ಸಮಾವೇಶದಲ್ಲಿ ಜಲ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಜಲ ಸಾಕ್ಷರತಾ ಸಮಾವೇಶವನ್ನು ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿ, ರಾಷ್ಟೀಯ ಸೇವಾ ಯೋಜನೆ ಕೋಶ, ಗುಲಬರ್ಗಾ ವಿಶ್ವವಿದ್ಯಾಲಯ, ಜಲ ಸಮಿತಿಗಳ ಒಕ್ಕೂಟ, ಜಲ ಜಾಗೃತಿ ಅಭಿಯಾನ ವೇದಿಕೆ, ಥ್ರೀಜೆ ಕ್ಲಬ್ ಆಳಂದ, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೋಳ್ಳಲಾಗಿದೆ.
ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ, ಮಹಾದಾಸೋಹ ಪೀಠಾಧೀಪತಿಗಳು ಶರಣಬಸವೇಶ್ವರ ಸಂಸ್ಥಾನ, ಅಧ್ಯಕ್ಷರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಅಖಿಲ ಭಾರತ ಶಿವಾನುಭವ ಮಂಟಪ ಹಾಗೂ ವಿದ್ಯಾ ಭಂಡಾರಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರು ಪ್ರತಿಜ್ಞಾವಿಧಿ ಭೋಧಿಸಿ ಆಶೀರ್ವಚನ ನೀಡಲಿದ್ದಾರೆ. ಈ ಸಮಾವೇಶದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಗೌರವಾನ್ವಿತ ಅತಿಥಿಗಳಾಗಿರುವರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ನಿರಂಜನ ವ್ಹಿ.ನಿಷ್ಠಿ ಸಮಾವೇಶ ಉದ್ಘಾಟಿಸಲಿದ್ದಾರೆ.

Contact Your\'s Advertisement; 9902492681

ಈ ಜಲ ಜಾಗೃತಿ ಸಮಾವೇಶದಲ್ಲಿ ವಿಶೇಷ ಉಪನ್ಯಾಸ ನೀಡಲಿರುವ ಡಾ.ರಾಜೇಂದ್ರ ಸಿಂಗ್ ಅವರಲ್ಲದೆ ತೆಲಂಗಾಣ ಸರಕಾರದ ಜಲ ಸಂಪನ್ಮೂಲ ಅಭಿವೃಧಿ ನಿಗಮದ ಅಧ್ಯಕ್ಷರಾದ ಶ್ರೀ ಪ್ರಕಾಶರಾವ, ಧಾರವಾಡದ ಜಲ ಮತ್ತು ನೆಲ ನಿರ್ವಹಣ ಸಂಸ್ಥೆ ಕರ್ನಾಟಕ ಸರಕಾರದ ನಿರ್ದೇಶಕರಾದ ಶ್ರೀ ರಾಜೇಂದ್ರ ಪೊದ್ದಾರ ಹಾಗೂ ಇತರರು ಭಾಗವಹಿಸುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here