ಸುರಪುರ: ನಗರದ ರಂಗಂಪೇಟೆಯ ತಿಮ್ಮಾಪುರದ ಗುಡ್ಡದ ಮೇಲಿರುವ ದರ್ಗಾದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಹಜರತ್ ಮಹೆಬೂಬ ಸುಬಾನಿ ಹಾಗು ಹಜರತ್ ಸೈಯದ್ ಶಾಹ ಮೀರಾ ಕರೀಮೊದ್ದಿನ್ ಖಾದ್ರಿಯವರ ಉರುಸ್ ಡಿಸೆಂಬ್ ೮ ರಿಂದ ೧೦ ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಉರುಸ್ ಅಂಗವಾಗಿ ಡಿಸೆಂಬರ್ ೮ ರಂದು ರಾತ್ರಿ ೮ ಗಂಟೆಗೆ ಪೀಠಾಧಿಕಾರಿಗಳಾದ ಹಜರತ್ ಸೈಂiiದ್ ಮುಸ್ತಫಾ ಖಾದರಿ ಸಜ್ಜಾದ ನಶಿನರವರ ದಿವು ಸಾನಿಧ್ಯದಲ್ಲಿ ಜಾಮೀಯಾ ಮಸೀದಿಯಿಂದ ದರ್ಗಾವರೆಗೆ ಸಂದಲ ಮೆರವಣಿಗೆ ನಡೆಯಲಿದೆ ಮತ್ತು ಮದ್ಯ ರಾತ್ರಿ ದರ್ಗಾದಲ್ಲಿ ಗಂಧ ಲೇಪನ ಜರುಗಲಿದೆ.
೯ ರಂದು ಚಿರಾಗ ದೀಪಾರಾಧನೆ ನಡೆಯಲಿದ್ದು ಎಲ್ಲಾ ಜಾತಿ ಮತಗಳ ಸರ್ವ ಜನಾಂಗವೂ ಆಗಮಿಸಿ ದೇವರ ದರ್ಶನ ಪಡೆಯಲಿದ್ದಾರೆ. ೧೦ ರಂದು ಉರುಸ್ ಮುಕ್ತಾಯದ ಅಂಗವಾಗಿ ಸಾಯಂಕಾಲ ೪ ಗಂಟೆಗೆ ಜಿಯಾರತ್ ನಡೆಯಲಿದೆ. ಹಾಗು ರಾತ್ರಿ ೮ ಗಂಟೆಗೆ ತಿಮ್ಮಾಪುರದ ಬಡಾ ಬಜಾರದಲ್ಲಿ ವಿಶ್ವ ಮಾನವ ಧರ್ಮ ಚಿಂತನ ಸಭೆ ನಡೆಯಲಿದೆ.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕಾಳ ಹಸ್ತೇಂದ್ರ ಮಹಾಸ್ವಾಮೀಜಿ ಏಕದಂಡಗಿ ಮಠ ಶಹಾಪುರ ಹಾಗು ಮೌಲಾನಾ ಸೈಯದ್ ಖಾಸಿಂ ಬುಖಾರಿ ಗುಲಬರ್ಗಾ ಭಾಗವಹಿಸಲಿದ್ದಾರೆ.ಪೀಠಾಧಿಕಾರಿಗಳಾದ ಹಜರತ್ ಸೈಯದ್ ಶಾಹ ಮುಸ್ತಫಾ ಖಾದರಿ ಸಜ್ಜಾದ್ ನಶಿನ್‌ರವರು ಅಧ್ಯಕ್ಷತೆ ವಹಿಸಲಿದ್ದಾರೆ.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.