ಕೋಲಂಬೋ: ಶ್ರೀಲಂಕಾದ ಕೋಲಂಬೋ ನಲ್ಲಿ ಸರಣ ಬಾಂಗ್ ದಾಳಿಯಿಂದ ಸುಮಾರು 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಸಂಭವಿಸಿದ್ದು, ಈ ಶ್ರೀಲಂಕ ಸರಕಾರ ರಾಷ್ಟ್ರೀಯ ಭದ್ರತೆ ಹಿತದೃಷ್ಟಿಯಿಂದ ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಹಾಗೂ ಮಹಿಳೆ ಮುಖ ಪರದೆ ಹಾಕಿಕೊಳ್ಳುವುದು ನಿಷೇಧಿಸಿ ಹತ್ವದ ಆದೇಶ ಹೊರಡಿಸಿದ್ದಾರೆ.
ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಆದೇಶ ಹೊರಡಿಸಿದ್ದಾರೆ. ಅವರು ತಮ್ಮ ಆದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೂರ್ಖಾ ಸೇರಿದಂತೆ ಯಾವುದೇ ಮುಖ ಮುಚ್ಚುವಂತಹ ಪರದೆ ತೊಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಕಡ್ಡಾಯವಾಗಿ ನಿಯಮವನ್ನು ಪಾಲಿಸಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.