ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅದ್ವಿತಿಯ-೨೦೧೯ ತಾಂತ್ರಿಕ-ಉತ್ಸವ ಮೂರು ದಿನಗಳ ಕಾರ್ಯಕ್ರಮ ಸಮಾರೋಪಗೊಂಡಿತು.
ಮೂರು ದಿನಗಳ ಕಾರ್ಯಕ್ರಮದಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಅನೇಕ ವಿಧದ ತರಭೇತಿ ನೀಡಲಾಯಿತು.ಕೊನೆಯ ದಿನ ಎಲ್ಲಾ ವಿದ್ಯಾರ್ಥಿಗಳಿಗಾಗಿಮನೋರಂಜನಾ ಸ್ಪರ್ದೆಗಳ ನಡೆಸಲಾಯಿತು.
ವಿವಿಧ ಸ್ಪರ್ಧೆಗಳ ನಿರ್ಣಾಯಕರಾಗಿ ಪ್ರೋ. ಶಾಂತಲಾ ಎಸ್.ನಿಷ್ಠಿ,ದೈಹಿಕ ಶಿಕ್ಷಕ ನಿಂಗಣ್ಣ ಹೊಸಮನಿ,ಪ್ರೋ ಶರಣಬಸವರೆಡ್ಡಿ, ದೊಡ್ಡಪ್ಪ ಎಸ್. ನಿಷ್ಠಿ, ಶ್ರೀಮತಿ ನೀಲಿಮಾ ಡಿ. ನಿಷ್ಠಿ,ಪ್ರೋ. ಶಿವಕುಮಾರ, ಪ್ರೋ. ಶರಣು ಟೆಂಗುಂಟಿ,ಪ್ರೋ. ಡಾ. ಎಸ್.ಎಸ್. ರಾಂಪುರೆ, ಭಾಗವಹಿಸಿದ್ದರು.ವಿವಿಧ ವಿಭಾಗದ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.ಉತ್ತಮವಾಧ ಪ್ರದರ್ಶನ ಮಾಡಿದ ಸ್ಪರ್ದಾರ್ಥಿಗಳನ್ನು ಆಯ್ಕೆ ಬಹುಮಾನ ನೀಡಿದರು.
ಅಪ್ಪ ಇಂಜಿನೀಯರಿಂಗ್ ಕಾಲೇಜು ಕಲಬುರಗಿ, ಗೋದತಾಯಿ ಇಂಜಿನೀಯರಿಂಗ್‌ಕಾಲೇಜು ಕಲಬುರ್ಗಿ ಹಾಗು ವೀರಪ್ಪ ನಿಷ್ಠಿ ತಾಂತ್ರಿ ಮಹಾವಿದ್ಯಾಲಯ ಸುರಪುರದ ವಿದ್ಯಾರ್ಥಿಗಳು ಸರ್ಧೆಯಲ್ಲಿ ಭಾಗವಹಿಸಿದ್ದರು.