ಕವಿತಾಳ ಪಟ್ಟಣ ಪಂಚಾಯತಿ ಕಾರ್ಯಾಲಯದ ಮುಂದೆ ಮಾಡುತ್ತಿರುವ ಹೋರಾಟವು ನಾಲ್ಕನೆಯ ದಿನದತ್ತ ಮುಂದುವರಿಯುತ್ತಿದೆ, ಸೋಮವಾರ ದಿಂದ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ

0
140

ರಾಯಚೂರು/ಕವಿತಾಳ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸದಸ್ಯರು ಮತ್ತು ಅಧಿಕಾರಿಗಳಿಂದ ಶೌಚಾಲಯ ನಿರ್ಮಾಣದಲ್ಲಾದ ಭ್ರಷ್ಟಾಚಾರವನ್ನು ಸೂಕ್ತ ತನಿಖೆಗೆ ಒತ್ತಾಯಿಸಿ ಹಾಗೂ ರಸ್ತೆ ಆಗಲೀಕರಣ ಕಾಮಗಾರಿ ಪ್ರಾರಂಭಕ್ಕೆ ಆಗ್ರಹಿಸಿ ಮತ್ತು ಪಟ್ಟಣಕ್ಕೆ ಇತರ ಆಗತ್ಯ ಮೂಲಭೂತ ಸಾರ್ವಜನಿಕ ಸೌಕರ್ಯಗಳ ಈಡೇರಿಕೆಗಾಗಿ ಕವಿತಾಳ ಪಟ್ಟಣ ಪಂಚಾಯತಿ ಮುಂಭಾಗದಲ್ಲಿ DYFI, SFI ಜೈ ಭಾರತ್ ಸಂಘ, ಕವಿತಾಳ ನವ ನಿರ್ಮಾಣ ವೇದಿಕೆ, ವಾಲ್ಮೀಕಿ ಸಂಘಟನೆ ಸೇರಿದಂತೆ ಇತರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಾಡುತ್ತಿರುವ ಹೋರಾಟ ವು ಮೂರನೇ ದಿನವನ್ನು ಪೂರ್ಣಗೊಳಿಸಿ ಸೋಮವಾರ ದಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದುವರೆದಿದ್ದು, ಸೋಮವಾರ ದಿಂದ ಉಪವಾಸ ಸತ್ಯಾಗ್ರಹಕ್ಕೆ ಮುನ್ನುಗಿದೆಎಂದು SFI  ಸಂಘಟನೆ ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ತಿಳಿಸಿದ್ದಾರೆ.

ಹೋರಾಟದ ನೇತೃತ್ವವಹಿಸಿ ಮಾತನಾಡಿ ಪಟ್ಟಣವು ಶುದ್ಧ ಕುಡಿಯುವ ನೀರು, ರಸ್ತೆ ಅಗಲೀಕರಣ, ಶೌಚಾಲಯ, ಹಕ್ಕುಪತ್ರ, ಮುಟೇಷನ್ ಸಮಸ್ಯೆ, ವಿದ್ಯುತ್ ದೀಪ, ಜನತಾ ಮನೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಇದಕ್ಕೆ ಪರಿಹಾರ ಹುಡಕಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿ ಯನ್ನು ಮರೆತು ಭ್ರಷ್ಟಾಚಾರ ದಲ್ಲಿ ತೊಡಗಿದ್ದಾರೆ. ಇಂತಹ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಜನತೆ ಪಾಠ ಕಲಿಸಬೇಕಿದೆ ಶೌಚಾಲಯ ನಿರ್ಮಾಣದಲ್ಲಿ ಸ್ವತಃ ಸದಸ್ಯರೆ ನೇರ ಫಲಾನುಭವಿಗಳಾಗಿ ಮತ್ತು ಕುಟುಂಬಸ್ಥರನ್ನು ಬಳಕೆ ಮಾಡಿ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುವುದರ ಜೊತೆಗೆ ಇತರ ಕಾಮಗಾರಿಯಲ್ಲೂ ಸಾರ್ವಜನಿಕರ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.

Contact Your\'s Advertisement; 9902492681

ಹೋರಾಟ ವನ್ನು ದಾರಿ ತಪ್ಪಿಸುವ ಕೆಲಸವನ್ನು ಈ ಕೂಡಲೇ ಅಧಿಕಾರಿಗಳು ಕೈ ಬಿಟ್ಟು ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಇಲ್ಲಿ ಆಗು ಹೋಗುವ ಎಲ್ಲಾ ಮುಂದಿನ ಕಾರ್ಯಗಳಿಗೆ ಮೇಲಾಧಿಕಾರಿಗಳೆ ಹೊಣೆಯಾಗುತ್ತಾರೆ. ಜೊತೆಗೆ ಇವರ ನಿರ್ಲಕ್ಷ್ಯ ವನ್ನು ಖಂಡಿಸಿ ಮುಂದೆ ಸೋಮವಾರ ದಿಂದ ಉಪವಾಸವನ್ನು ಆರಂಭಿಸಲಿದ್ದೇವೆ. ಅದಕ್ಕೂ ಸ್ಪಂದಿಸದ ಪಕ್ಷದಲ್ಲಿ ಮುಂದೆ ಕವಿತಾಳ ಬಂದ್ / ರಸ್ತೆ ತಡೆ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ, DYFI ಅಧ್ಯಕ್ಷರಾದ ರಫೀ ಬೋದೆಲ್, ಜೈ ಭಾರತ್ ಸಂಘಟನೆಯ ಅಧ್ಯಕ್ಷರಾದ ಜಹಾಂಗೀರ್ ಪಾಷ. ಪಟ್ಟಣದ ಮುಖಂಡರಾದ ಭೀಮನಗೌಡ ವಂದ್ಲಿ, ಹಿರಿಯ ಹೋರಾಟಗಾರರಾದ ರಾಮಣ್ಣ ಬಿ.ಎಡ್, ಶಿವಣ್ಣ ವಕೀಲ, ವಾಲ್ಮೀಕಿ ಸಂಘಟನೆಯ ಹನುಮನಗೌಡ ನಾಯಕ, ಜಾವೀದ್ ಎಂ.ಎಸ್,  ಶೇಖರಪ್ಪ ಸಾಹುಕಾರ್, ಎಂ.ಡಿ ಮೈಬೂಬ್ ಸಾಬ್, ಕಿರಿಲಿಂಗ ಮ್ಯಾಗಳಮನಿ, ಪ್ರದೀಪ್ ಕುಮಾರ್ ಜಗ್ಲಿ,, ಸೈಯದ್ ಮುನ್ನಾವರ್, ಮಲ್ಲಪ್ಪ ಬಸ್ಸಾಪುರ, ಇರ್ಷಾದ್ ಅಂಜುಮನ್, ಸುರೇಶ, ಬಾಬು,  ಮೈಬೂಬ್ ಪಾಷ, ಮೈಬೂಬ್ ಗಣದಿನ್ನಿ, ನಾಗರಾಜ ಸಾಹುಕಾರ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here