ಶಿಕ್ಷಕರು ಗೌರವ ದೊರೆಯುವಂತೆ ಸೇವೆ ಸಲ್ಲಿಸಿ: ನ್ಸಿಲಾಲ್ ಚವ್ಹಾಣ

0
55

ಕಲಬುರಗಿ: ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರೇಷ್ಠ ಜ್ಞಾನ, ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ಸೂಕ್ತ ಮಾರ್ಗದರ್ಶನ ಮಾಡಿ, ಅವರನ್ನು ರಾಷ್ಟ್ರದ ಶ್ರೇಷ್ಠ ಸಂಪನ್ಮೂಲಗಳನ್ನಾಗಿ ಮಾಡಬೇಕು. ವಿದ್ಯಾರ್ಥಿಗಳು ಮತ್ತು ಸಮಾಜದಿಂದ ಗೌರವ ನಿರೀಕ್ಷೆ ಮಾಡಿದರೆ ದೊರೆಯುವುದಿಲ್ಲ. ಬದಲಿಗೆ ನಾವು ಮಾಡುವ ಉತ್ತಮ ಕಾರ್ಯದಿಂದ ತಾನಾಗಿಯೇ ಶ್ರೇಷ್ಠ ಗೌರವ ದೊರೆಯುತ್ತದೆಯೆಂದು ಸೇಡಂ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಬನ್ಸಿಲಾಲ್ ಚವ್ಹಾಣ ಹೇಳಿದರು.

ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ನಾಗಪ್ಪ ಕೊಟ್ಟರಕಿ ಮತ್ತು ಸುಜಾತಾ ನಾಟಿಕಾರ ಅವರಿಗೆ ಶನಿವಾರ ಹಮ್ಮಿಕೊಳ್ಳಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಸತ್ಕರಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಶಾಕೀರ್ ಹುಸೇನ್ ಮಾತನಾಡಿ, ಶೈಕ್ಷಣಿಕ ವ್ಯವಸ್ಥೆಯ ಸಫಲತೆಗೆ ಎಲ್ಲರೂ ಜೊತೆಗೂಡಿ ಸೇವೆ ಸಲ್ಲಿಸಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿಯಾಗಿರಬೇಕೆಂದು ನುಡಿದರು.

Contact Your\'s Advertisement; 9902492681

ಸತ್ಕಾರ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕ ನಾಗಪ್ಪ ಕೊಟ್ಟರಕಿ ಮಾತನಾಡಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ತನಕ್ಕಿಂತ ಉನ್ನತ ಮಟ್ಟದಲ್ಲಿ ಬೆಳೆಯಲು ಸೂಕ್ತ ಮಾರ್ಗದರ್ಶನ ಮಾಡಬೇಕು. ಶಿಕ್ಷಕರಲ್ಲಿ ಕರ್ತವ್ಯನಿಷ್ಠೆ, ಸಮಯ ಪ್ರಜ್ಞೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ವಿದ್ಯಾರ್ಜನೆ ಮಾಡಿದರೆ, ಅದು ಸಫಲತೆ ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿನ ವಿದ್ಯಾರ್ಥಿ, ಸಹದ್ಯೋಗಿ, ಪಾಲಕ-ಪೋಷಕರ ಸಹಕಾರ ಮರೆಯುವಂತಿಲ್ಲವೆಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುಜಾತಾ ನಾಟಿಕಾರ, ಶ್ರೀಶೈಲಪ್ಪ ಬೋನಾಳ್, ಎಚ್.ಬಿ.ಪಾಟೀಲ, ಹಣಮಂತ ಕೋರೆ, ಪಂಡರಿನಾಥ ಕ್ಷೀರಸಾಗರ, ರಂಗಸ್ವಾಮಿ, ಸುಜಾತಾ ರೆಡ್ಡಿ, ಸುನಿಲಕುಮಾರ ರಾಠೋಡ, ಅಬ್ದುಲ್, ಅಬ್ದುಲ್ ಘನಿ, ಇಕ್ಬಾಲ್, ಅಲ್ಲಾಭಕ್ಷ್, ಮುಖ್ಯ ಶಿಕ್ಷಕ ಸಾಲಾರ್ ಮಸೂದ್,ಸೇವಕ ಹುಸೇನಪ್ಪ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here