ಕಲಬುರಗಿ: ಜಿಲ್ಲೆಯ ರಿಂಗ್ ರೋಡ್ ನಲ್ಲಿ ಇರುವ ಮಿಸಬಾ ನಗರ ಬಸ್ಟ್ಯಾಂಡ ಹತ್ತಿರ ಇಬ್ಬರು ಆರೋಪಿಗಳು ಆಕ್ರಮ ನಾಡಪಿಸ್ತೂಲ್ ಇಡುಕೊಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಸೋಮಲಿಂಗ ಕಿರದಳ್ಳಿ ಹಾಗೂ ಸಿಬ್ಬಂದಿಗಳು ಬೆಳಿಗ್ಗೆ ಧಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜೇವರ್ಗಿ ತಾಲ್ಲೂಕಿನ ಸಿರಸಗಿ ಗ್ರಾಮದ ನಿವಾಸಿ ದೇವಿಂದ್ರ ಪೀರಪ್ಪ ನಾಟೇಕರ ಹಾಗೂ ಇದೇ ಗ್ರಾಮದ ಇನ್ನೊಬ್ಬ ಆರೋಪಿ ಖಯೂಮ್ ಪಟೇಲ್ ಮಹಬೂಬ್ ಪಟೇಲ್ ಮಾಲಿಪಾಟೀಲ್ ಎಂಬ ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ ಉಪ ಆಯುಕ್ತರಾದ ಎಸ್.ಎಚ. ಸುಬೇದಾರ ಅವರ ಗ್ರಾಮೀಣ ಠಾಣೆ ಪಿ.ಐ. ಮತ್ತು ಸಿಬ್ಬಂದಿಯವರಾದ ಹುಸೇನಬಾಷಾ, ಕೇಸುರಾಯ, ಅಂಬಾಜಿ, ಶಿವಶರಣಪ್ಪ, ಶರಣಗೌಡ, ಕುಶಣ್ಣಾ ಕಾರ್ಯಾಚರಣೆ ನಡೆಸಿ ಒಂದು ಛಲಾ ನಾಡ ಪಿಸ್ತೂಲ್ , ಒಂದು ನಾಡ ಪಿಸ್ತೂಲ್ ಮತ್ತು ಮೂರು ಜೀವಂತ ಗುಂಡಗಳು ನೇದ್ದವುಗಳು ಜಪ್ತಿ ಪಡಿಸಿಕೊಂಡಿದ್ದಾರೆ.
ಆರೋಪಿ ಖಯ್ಯುವ ಪಟೇಲ್ ಈತನು ಈ ಹಿಂದೆ ದಾಖಲಾದ ಗ್ರಾಮೀಣ ಪೊಲೀಸ ಠಾಣೆ ಅರ್ಮ್ಸ್ ಎಕ್ಟ್ ಕೇಸಿನಲ್ಲಿ ತಲೆ ಮರೆಸಿಕೊಂಡ ಆರೋಪಿ ಎಂದು ಪೊಲೀಸರು ತಿಳಿಸಿದ್ದು, ಅಲ್ಲದೇ ಜೇವರ್ಗಿ ಮತ್ತು ಫರಹತಾಬಾದ್ ಪೊಲೀಸ ಠಾಣೆಯಲ್ಲಿ ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.