ಕಲಬುರಗಿ: ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಗುಲಬರ್ಗಾ ಡ್ಯಾನ್ಸ್ ಸಂಘ ಹಾಗೂ ಜ್ಯೋತಿ ಜಾನಪದ ನೃತ್ಯ ಕಲಾ ಸಂಘ, ಮಾನವ ಹಕ್ಕು ಜನಜಾಗೃತಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಾನಪದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕಲ್ಯಾಣ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ಕಾರ್ಯಪಾಲಕ ಇಂಜನಿಯರ್ ಯೋಜನಾ ವಿಭಾಗದ ಡಾ.ಸುರೇಶ ಶರ್ಮಾ ಅವರು ಉದ್ಘಾಟಿಸಿದರು.
ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಮಹೇಶ ಶಾಸ್ತ್ರಿಗಳು, ಡ್ಯಾನ್ಸ್ ಸಂಘ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಯೋಜಕ ಯಂಕಪ್ಪ (ಅಕ್ಷಯ), ಜ್ಯೋತಿ ಅಕ್ಷಯ, ಪ್ರೋ.ಸಿ. ಸೋಮಶೇಖರ, ಡಾ. ಸಂಜೀವಕುಮಾರ ಕೆ.ಎಂ. ಅರಳಿ ನಾಗರಾಜ, ಕೆ.ನಾಗರಾಜ, ಟ್ರಾಫಿಕ್ ಪೋಲಿಸ್ ಪಿಎಸ್‌ಐ ಭಾರತಿ, ಸಚಿನ ಫರತಾಬಾದ, ವೈ ಕೋಟ್ರೇಶ, ಗುರುರಾಜ ಕಳಸ್ಕರ, ರವಿಚಂದ್ರ ಗುತ್ತೇದಾರ, ಸಿದ್ದು ಮಾನಕರ, ಗುರುಶರಣ ಪಾಟೀಲ್, ವಿಜಯಕುಮಾರ ಕಟ್ಟಿಮನಿ, ಶಿವುಕುಮಾರ ಪಾಟಿಲ್, ಮಲ್ಲಿಕಾರ್ಜುನ ಟೆಂಗಳಿ, ದತ್ತು ಹೈಯಾಳಕರ್, ಸಾಯಬಣ್ಣ ಹೋಳಕರ್, ಸಂಗಿತಾ ಪಾಟಿಲ್, ಗೀತಾ ಮಾಡಗಿ, ಇದ್ದರು.