ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಗೆ ಒಲಿದು ಬಂದ ಮಾರ್ಟಿನ್ ಲೂಥರ್ ಪ್ರಶಸ್ತಿ

0
283

ಕಲಬುರಗಿ: ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ನಿತ್ಯ ನಿರಂತರವಾಗಿ ಆಡಂಬರವಿಲ್ಲದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಂಘಟಿಸಿ, ತಲೆ ಕೆಡಿಸಿಕೊಳ್ಳುವಂಥ ಕಾರ್ಯಕ್ರಮಗಳ ವಿಶಿಷ್ಟ ತಲೆಬರಹಗಳಿಂದ ಜನಪ್ರಿಯತೆಯನ್ನು ಗಳಿಸಿದ, ಸಮಾಜ ಕಂಡ ಅದ್ಭುತ ಸಂಘಟಕವೆನಿಸಿಕೊಂಡಿರುವ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರಿಗೆ ಇಂದು, ಬುಧವಾರದಂದು ನಗರದ ಹಿಂದಿ ಪ್ರಚಾರ ಸಭಾ ಭವನದ ಆವರಣದಲ್ಲಿ ಸಾಯಂಕಾಲ 6 ಗಂಟೆಗೆ ನಡೆಯಲಿರುವ ಕ್ರಿಸ್ ಮಸ್ ಮಹೋತ್ಸವ-2019 ಸಲ್ಲಿ ಮಾರ್ಟಿನ್ ಲೂಥರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಕಾರ್ಯಕ್ರಮದ ಆಯೋಜಕ ರೆವರೆಂಡ್ ಗೋಪಾಲ ಶಾಲೋಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾಜಮುಖಿಯಾಗಿ ಚಿಂತಿಸುವ ಹಾಗೂ ಪ್ರಾಮಾಣಿಕವಾಗಿ ಕಾರ್ಯ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಜೊತೆಗೆ ನಾಡು-ನುಡಿ, ನೆಲ-ಜಲ, ಸಾಹಿತ್ಯ, ಶಿಕ್ಷಣ, ಪರಿಸರ, ಆರೋಗ್ಯ, ಸಂಸ್ಕೃತಿ ಹೀಗೆ ಮುಂತಾದ ಕ್ಷೇತ್ರಗಳ ಕುರಿತು ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

Contact Your\'s Advertisement; 9902492681

ಹಲವಾರು ಸಾಹಿತಿಗಳು, ಬರಹಗಾರರು ಹಾಗೂ ಚಿಂತಕರನ್ನು ಒಂದೆಡೆ ಸೇರಿಸಿ ಸಮಾಜಮುಖಿ ಚಿಂತನೆಗೆ ಎಡೆಮಾಡಿ ಕೊಡುತ್ತಿರುವ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here