ಪೌರತ್ವ ಕಾಯ್ದೆ ವಿರೋಧಿಸಿ ಹಾಗೂ ಜಾಮಿಯಾ ವಿವಿಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಕ್ಯಾಂಡಲ್ ಮಾರ್ಚ್

0
82

ಕಲಬುರಗಿ: ನಗರದ ಟಿಪ್ಪು ಸುಲ್ತಾನ್ ಚೌಕ್ ವೃತದಲ್ಲಿ ವಿವಿಧ ಮುಸ್ಲಿಂ ಸಂಘಟನೆಯ ನೇತೃತ್ವದಲ್ಲಿ ವಿವಾದಸ್ಪದ ಪೌರತ್ವ ಕಾಯ್ದೆ ಸಿಎಎಬಿ ಮತ್ತು ಎನ್.ಆರ್.ಸಿ ವಿರೋಧಿಸಿ ಕಾಯ್ದೆಯನ್ನು ಹಿಂದೆಕೆ ಪಡೆಯಬೇಕೆಂದು ಮತ್ತು ಜಾಮಿಯಾ ವಿವಿಯ ವಿದ್ಯಾರ್ಥಿಗಳ ಮೇಲೆ ಅಮಾನವೀಯ ದಾಳಿ ಖಂಡಿಸಿ ಕ್ಯಾಂಡಲ್ ಮಾರ್ಚ್ ದೊಂದಿಗೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾ ಮುಖಂಡರಾದ ಮೊಹಮ್ಮದ್ ಮೋಹಸಿನ್ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂರು ತಮ್ಮ ಜೀವನವೇ ತ್ಯಾಗಮಾಡಿ ಬ್ರೀಟಿಷರಿಂದ ದೇಶದವನ್ನು ಸ್ವಾತಂತ್ರ್ಯಗೊಳ್ಳಿಸುವುದರಲ್ಲಿ ಬಹುದೊಡ ಪಾತ್ರವಾಗಿದೆ ಎಂಬುದು ಮರೆಯಬೇಡಿ ಎಂದರು.

Contact Your\'s Advertisement; 9902492681

ಬಾಂಗ್ಲಾದೇಶದ ಪ್ರಧಾನಿ ಭಾರತದಲ್ಲಿ ಆಕ್ರಮವಾಗಿ ಬಂದಿರುವ ನಿವಾಸಿಗಳ ಮಾಹಿತಿ ಕೇಳಿದ್ದಾರೆ. ಅವರಿಗೆ ತಮ್ಮ ದೇಶದ ಜನರ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ. ನಮ್ಮ ದೇಶ ಬಾಂಗ್ಲಾದೇಶ ಆರ್ಥಿಕ ಜಿ.ಡಿ.ಎ 8% ಕ್ಕೂ ಅಧಿಕವಿದ್ದು, ನಮ್ಮ ಜಿ.ಡಿ.ಪಿ 3ಕ್ಕೆ ಕುಸಿದೆ ಇಂತಹ ಸಂದರ್ಭದಲ್ಲಿ ಭಾರತೀಯ ಅಲ್ಪಸಂಖ್ಯಾತರು ಅತ್ಯಾಂತ ಕಷ್ಟದ ಸ್ಥಿತಿಯಲ್ಲಿದ್ದು, ನೆರವಿ ನೀಡಿ.     – ಮೊಹಮ್ಮದ್ ಮೋಹಸೀನ್ ಎಸ್.ಡಿ.ಪಿ.ಐ ಪಕ್ಷದ ಮುಖಂಡ.

ದೇಶದಲ್ಲೇಡೆ ಎನ್.ಆರ್.ಸಿ ಮತ್ತು ಸಿ.ಎ.ಎ. ವಿರೋಧಿಸಿ ಜಾತಿ ಮತ ಬಿಟ್ಟು ಹಿಂದೂ, ಕ್ರೀಚ್ಚನ್, ದಲಿತ, ಶಿಖ್ ಮುಸ್ಲಿಂ ಸೇರಿದಂತೆ ಭಾರತೀಯರು ಒಗಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಸರಕಾರ ಇಂಟೇರ್ ನೇಟ್ ಸೇವೆ ರದ್ದು ಪಡಿಸಿ ಪೊಲೀಸರ ಸಹಾಯದಿಂದ ದೇಶದ ಹೋರಾಟವನ್ನು ಹತ್ತಿಕುವ ಯತ್ನ ಮಾಡುವುದು ಖಂಡನಿಯ.

ಬೆಲೆ ಏರಿಕೆ, ಶಿಕ್ಷಣ, ಆರೋಗ್ಯಗಳ ಹಾಗೂ ಆರ್ಥಿ ಕುಸಿತದ ಕುರಿತು ಹೊಸ ಕಾನೂನು ಮಾಡಲು ಸಿದ್ಧವಿಲ್ಲ ಆದರೆ ದೇಶ ಒಡೆಯುವ ಕಾನೂನು ಜಾರಿ ಮಾಡಿ ಜನರಿಗೆ ತೊಂದರೆ ನೀಡುವ ಕಾನೂನು ಜಾರಿ ಮಾಡುವುದರ ಮೂಲಕ ತಮ್ಮ ಅಸಾಮಾರ್ಥ್ಯವನ್ನು ತೊರಿಸುವಂತಾಗಿದೆ ಎಂದರು.

ಇಂತಹ ವಿವಾದಸ್ಪದ ಕಾನೂನು ಮೂಲಕ ದೇಶದ ಏಕತೆಯನ್ನು ಒಡೆಯುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಮಹಮ್ಮದ್ ರಿಯಾಜೋದಿನ್ ಕತೀಬ್, ಸಯದ್ ಸಾಹೇಬ್ ಪಾಶಾ ಖಾದ್ರಿ, ಶಾಹಿದ್ ಸಾಬ್ ಮೊಹಮದ್ ಶಫಾದ್, ಮೋಹದ್ದೀನ್, ಎಸ್.ಡಿ.ಪಿ.ಐ ಜಿಲ್ಲಾ ಘಟಕದ ಅಧ್ಯಕ್ಷ ಶೇಖ್ ಇಜಾಜ್ ಸಾಬ್ ಸೇರಿದಂತೆ ಹೋರಾಟಗಾರರು ಹಾಗೂ ಸಮಾಜಿಕ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here