ಕಲಬುರಗಿ: ಕ್ರೀಡೆಯು ಮಕ್ಕಳ ದೈಹಿಕ, ಮಾನಸಿಕ ಹಾಗೂ ಬೌದ್ದಿಕ ಬೆಳವಣಿಗೆಗೆ ಸಹಾಯಕವಾಗಿರುವುದರಿಂದ ಪಠ್ಯದ ಜೊತೆಗೆ ಕ್ರೀಡೆಗೂ ಮಹತ್ವವನ್ನು ಕೊಡಬೇಕಾದದ್ದು ಅವಶ್ಯವಾಗಿದೆ ಎಂದು ಮಾಧವ ಜೋಷಿ ಅವರು ಹೇಳಿದರು.
ನಗರದ ರೇವಣಸಿದ್ಧೇಶ್ವರ ಕಾಲೋನಿಯ ಶ್ರೀ ದಾಮೋಧರ ರಘೋಜಿ ಮೆಮೊರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡುತ್ತ ಅವರು, ಪಠ್ಯದ ಜೊತೆಗೆ ಕ್ರೀಡೆಗೂ ಮಹತ್ವವನ್ನು ಕೊಡಬೇಕು. ಆದ್ದರಿಂದ ಎಲ್ಲ ಶಾಲೆಗಳು ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಕ್ರೀಡಾ ಮನೋಭಾವನೆಯನ್ನು ಬಿತ್ತಿ, ಅವರನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಮಾರಿ ನಂದಿನಿ ಆರ್ ರಘೋಜಿ ಅವರು ಮಾತನಾಡುತ್ತ, ಸೋಲು ಅಥವಾ ಗೆಲುವು ಎರಡರಲ್ಲಿ ಒಂದು ಇದ್ದೇ ಇರುತ್ತದೆ. ಆದರೆ ಪ್ರಾಮಾಣಿಕತೆಯಿಂದ ಆಡಿದರೆ ಸಿಗುವ ಗೌರವ ಮತ್ತು ಮನ್ನಣೆ ಗೆಲುವಿಗಿಂತ ಮೇಲು ಎಂಬುದನ್ನು ತಿಳಿದುಕೊಳ್ಳಬೇಕು. ಬಹುಮಾನ, ಪ್ರಶಸ್ತಿ, ಟ್ರೋಫಿಗಳನ್ನು ಗೆದ್ದರಂತೂ ಒಳ್ಳೆಯದೇ. ಆದರೆ ಚೆನ್ನಾಗಿ ಆಟ ಆಡಿದರು ಎಂಬ ಹೊಗಳಿಕೆಗೆ ಇದಾವುದೂ ಸಮನಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿಗಳಾದ ಸೂರ್ಯಕಾಂತ ಡಿ. ರಘೋಜಿ, ಶಾಲಾ ಆಡಳಿತಾಧಿಕಾರಿ ನಾಗೇಶ ಕಮಲಾಪುರೆ, ಮುಖ್ಯಗುರುಗಳಾದ ವೃಶಾಲಿ ಪಾಟೀಲ, ಶೈಲಜಾ ಮೂರ್ತಿ, ಜೈಭೀಮ ದರ್ಗಿ, ಶಿವರುದ್ರಯ್ಯ ಮಠಪತಿ, ಸುಭಾಷಚಂದ್ರ ಗಾದಾ ಉಪಸ್ಥಿತರಿದ್ದರು. ಸ್ನೇಹಾ ಮಡಕಿ ಸ್ವಾಗತಿಸಿದರು. ರಾಮಚಂದ್ರ ವಂದಿಸಿದರು. ವಿದ್ಯಾರ್ಥಿಗಳಾದ ವೈಷ್ಣವಿ, ಸುಷ್ಮಾ ನಿರೂಪಿಸಿದರು.