ಯುವ ಜನತೆ ದೈಹಿಕವಾಗಿ ಸದೃಢವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ

0
72

ನಾಗಮಂಗಲ: ಯುವಕರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾದಾಗ ದೇಶವು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ತಾಲ್ಲೂಕು ದೈಹಿಕ ಶಿಕ್ಷಣ ಸಂಯೋಜಕ ಶಿವಣ್ಣಗೌಡ ಹೇಳಿದರು.

ತಾಲ್ಲೂಕಿನ ಪಿ.ನೇರಲೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗದ್ದ ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ದಿನಗಳಲ್ ಮಕ್ಕಳು ದೈಹಿಕ ಮತ್ತು ಮಾನಸಿಕ ಕ್ರೀಡೆಗಳಲ್ಲಿ ಭಾಗವಹಿಸದೇ ಕೇವಲ ಮೊಬೈಲ್ ಬಳಕೆಗೆ ಅಂಟಿಕೊಂಡಿದ್ದಾರೆ.ಮಕ್ಕಳು ದೈಹಿಕವಾಗಿ ಸದೃಢರಾದಾಗ ಅವರು ಕಲಿಕೆಯಲ್ಲಿಯೂ ಸಹ ಉತ್ತಮ ಸಾಧನೆ ಮಾಡಲು ಸಾಧ್ಯ.ಯಾರ ದೇಹ ಸದೃಢವಾಗಿರುತ್ತದೋ ಅಂತವರ ಮನಸ್ಸು ಸಹ ಸದೃಢವಾಗಿರುತ್ತದೆ.ವಿದ್ಯಾರ್ಥಿಗಳು ,ಶಿಕ್ಷಕರು ಮತ್ತು ಪೋಷಕರು ಸೇರಿದಂತೆ ಪ್ರತಿಯೊಬ್ಬರು ಸಾಂಪ್ರದಾಯಿಕ ಕ್ರೀಡೆಗಳು, ಪ್ರಾದೇಶಿಕ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ವಿವಿಧತೆಯಲ್ಲಿ ಏಕತೆ ಸಾಧಿಸಬೇಕಾಗಿದೆ ಎಂದರು.

Contact Your\'s Advertisement; 9902492681

ಅಲ್ಲದೇ ಶಾಲೆಯಲ್ಲಿ ಮಕ್ಕಳು ಪ್ರಾರ್ಥನೆ, ಯೋಗ,ಕರಾಟೆ,ಸ್ಕಿಪ್ಪಿಂಗ್,ಕೈದೋಟ ನಿರ್ವಹಣೆ ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡರೆ ಮಕ್ಕಳ ಏಕಾಗ್ರತೆಯೂ ಸಹ ಹೆಚ್ಚುತ್ತದೆ.ಜೊತೆಗೆ ಮಕ್ಕಳು ಕಲಿತಂತಹ ಕಲಿಕೆಯು ಸಹ ಬಲಗೊಳ್ಳುತ್ತದೆ ಎಂದರು.

ಫಿಡ್ ಇಂಡಿಯಾ ಶಾಲಾ ಸಪ್ತಾಹದ ಅಂಗವಾಗಿ ಶಾಲೆಯ 61 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸುಮಾರು ಒಂದು ಗಂಟೆಯ ಕಾಲ ವಿವಿಧ ವ್ಯಾಯಾಮಗಳನ್ನು ಮಾಡುವ ಮೂಲಕ ಸಪ್ತಾಹದಲ್ಲಿ ಭಾಗಿಯಾದರು. ಮುಖ್ಯಶಿಕ್ಷಕ ಶಹಾಬುದ್ದೀನ್ ಡಿ.ಬಣಕಾರ್,ಶಿಕ್ಷಕರಾದ ಸಿ.ವೆಂಕಟೇಶ ರಾವ್,ಉಮಾದೇವಿ ಮತ್ತು ಎ.ಬಿ.ರಮೇಶ್ ಇದ್ದರು.

ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಶಾಲಾ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿವಿಧ ವ್ಯಾಯಾಮಗಳನ್ನು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here