ಸುರಪುರ: ಕನ್ನಡ ನಾಡು ನುಡಿ ಸೇವೆಗೆ ಕರ್ನಾಟಕ ರಕ್ಷಣಾ ವೇದಿಕೆ ಸೇವೆ ಅಮೋಘವಾದುದಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿದರು.
ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಗ್ರಾಮ ಶಾಖೆ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಇಂದು ಕನ್ನಡಕ್ಕೆ ವಿವಿಧ ರೀತಿಯ ಸಮಸ್ಯೆಗಳು ಕಾಡುತ್ತಿವೆ.ಭಾಷೆ ಸಮಸ್ಯೆ ಒಂದೆಡೆಯಾದರೆ,ಗಡಿ ಸಮಸ್ಯೆ ಮತ್ತೊಂದೆಡೆ,ಇನ್ನೊಂದೆ ಹೊರ ರಾಜ್ಯದವರು ಕನ್ನಡವನ್ನು ಕೊಲ್ಲುತ್ತಿದ್ದಾರೆ.ಇಂತಹ ಅನೇಕ ಸಮಸ್ಯೆಗಳ ಬಗ್ಗೆ ನಾವೆಲ್ಲ ಜಾಗೃತರಾಗದಿದ್ದರೆ ಮುಂದೊಮ್ಮೆ ಕನ್ನಡ ಭಾಷಿಗರೆ ಅಲ್ಪಸಂಖ್ಯಾತರಾಗುವ ಸಂಭವವಿದೆ ಆದ್ದರಿಂದ ಇಂದು ಪ್ರತಿಯೊಬ್ಬರು ಕನ್ನಡತನವನ್ನು ಬೆಳೆಸಿಕೊಳ್ಳಬೇಕು.ಕನ್ನಡ ನಾಡು ನುಡಿಗಾಗಿ ಹೋರಾಟಕ್ಕೆ ಮುಂದೆ ಬರುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವಮೋನಯ್ಯ ನಾಯಕ ಮಾತನಾಡಿ,ಇಂದು ಸರಕಾರಗಳು ಕನ್ನಡ ಭಾಷೆಗೆ ಗಂಡಾಂತರವನ್ನು ತರುತ್ತಿವೆ.ಪ್ರಾಥಮಿಕ ಹಂತದಿಂದಲೇ ಇಂಗ್ಲೀಷ ಮಾದ್ಯಮ ಶಾಲೆಗಳನ್ನು ತೆರೆಯುವ ಮೂಲಕ ಕನ್ನಡ ಭಾಷೆಯ ಅಳಿವಿಗೆ ಮುಂದಾಗುತ್ತಿವೆ.ಇದಕ್ಕೆ ಕನ್ನಡಿಗರಾದ ನಾವು ನಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೆ ಕಲಿಸುವ ಮೂಲಕ ಕನ್ನಡಭಿಮಾನವನ್ನು ಬೆಳೆಸೋಣ ಹಾಗು ಪ್ರತಿ ಗ್ರಾಮಗಳಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಟ್ಟುವ ಮೂಲಕ ನಾಡು ನುಡಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಗ್ರಾಮ ಶಾಖೆಯನ್ನು ತಾಲೂಕು ಪಂಚಾಯತಿ ಸದಸ್ಯ ದೊಡ್ಡ ಕೊತಲೆಪ್ಪ ಹಾವಿನ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ವೇದಿಕೆ ಮೇಲೆ ಕರವೇ ಮುಖಂಡರಾದ ಭೀಮು ನಾಯಕ ಮಲ್ಲಿಬಾವಿ,ಹಣಮಗೌಡ ಶಖಾಪುರ,ಕೃಷ್ಣಾ ಮಂಗಿಹಾಳ,ಶ್ರವಣಕುಮಾರ ಡೊಣ್ಣಿಗೇರಾ,ಆನಂದ ಮಾಚಗುಂಡಾಳ ಹಾಗು ಗ್ರಾಮ ಪಂಚಾಯತಿ ಸದಸ್ಯರಾದ ಚೌಡಪ್ಪ,ದ್ಯಾವಪ್ಪ,ಮಹಾದೇವ ಚೆನ್ನೂರ ಮುಖಂಡರುಗಳಾದ ಮಲ್ಲಿಕಾರ್ಜುನ ಗೌಡ,ಕೃಷ್ಣಾ ಹಾವಿನ್,ಧರ್ಮರಾಜ ಬಡಿಗೇರ,ಮಾನಪ್ಪ ಬಾಡದ,ಮಾರ್ಥಂಡರಾಯ,ಭೀಮಣ್ಣ ಕವಾಲ್ದಾರ,ಮಲ್ಲಪ್ಪ ಟಣಕೆದಾರ ಇದ್ದರು.ಮುಲ್ಲು ಬಾದ್ಯಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಶಾಖೆಯ ಪದಾಧಿಕಾರಿಗಳನ್ನಾಗಿ ಮಾಳಪ್ಪಾ ಶಖಾಪೂರ ಗೌರವಾಧ್ಯಕ್ಷ,ಭೀಮರಾಯ ಮಾಚಗುಂಡಾಳ ಅಧ್ಯಕ್ಷ,ಭೀಮಾಶಂಕರ ಚನ್ನೂರ ಉಪಾಧ್ಯಕ್ಷ,ಮಲ್ಲಪ್ಪ ಬಾಡದ ಪ್ರಧಾನ ಕಾರ್ಯದರ್ಶಿ, ಸಹಕಾರ್ಯದರ್ಶಿ ದತ್ತು ಬಾಡದ,ಸಂ ಕಾರ್ಯದರ್ಶಿ ತಿಪ್ಪಣ್ಣ ಬಾಡದ,ಹಳ್ಳೆಪ್ಪ ಬಾಡದ ಪ್ರಧಾನ ಸಂಚಾಲಕ,ಮಲ್ಲಿಕಾರ್ಜುನ ಕುರಿ ಸಂಚಾಲಕ,ಪಿಡ್ಡಪ್ಪ ಮಾಚಗುಂಡಾಳ,ಆನಂದ ಕುರಿ ಖಜಾಂಚಿಯವರನ್ನು ನೇಮಕಗೊಳಿಸಲಾಯಿತು.