ಕಲಬುರಗಿ: ಜಿಲ್ಲೆಯ ಚಿಂಚೋಳಿ ಮತ್ತು ಜೇವರ್ಗಿ ತಾಲ್ಲೂಕಿನಲ್ಲಿ ವಿವಾದಸ್ಪದ ಪೌರತ್ವ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸ್ವಯಂ ಪ್ರೇರಿತ ತಾಲ್ಲೂಕುಗಳು ಬಂದ್ ಮಾಡುವ ಮೂಲಕ ಕಾಯ್ದೆ ವಿರೋಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಚಿಂಚೋಳಿ ತಾಲ್ಲೂಕಿನಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘಟನೆಯ ಮುಖಂಡರಾದ ಶರಣಬಸಪ್ಪ ಮಮಶೇಟಿ ಮಾತನಾಡಿ ಸಂವಿಧಾನ ವಿರೋಧಿ. ಜಾತ್ಯತೀತ ಪ್ರಜಾಪ್ರಭುತ್ವ ವಿರೋಧಿ. ಧರ್ಮಾಧಾರಿತ. NRC-CAA ವಿರುದ್ಧ ಹೋರಾಟದ ಕಿಚ್ಚು ಚಿಂಚೋಳಿ ತಾಲೂಕಿನಲ್ಲಿ ಶಾಂತಿಯುತವಾಗಿ ಜರುಗಿತು.