ಸುರಪುರ: ವನವಾಸಿ ಕಲ್ಯಾಣ ಸಮಿತಿಯಿಂದ ಜನರಲ್ಲಿ ದೇಶಭಕ್ತಿ ಮತ್ತು ಉತ್ತಮ ಸಂಸ್ಕಾರ ಮೂಡಿಸಲಾಗುತ್ತಿದೆ ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸುತ್ತದೆ ಎಂದು ವನವಾಅಸಿ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಗಂಗಾಧರ ನಾಯಕ ತಿಂಥಣಿ ತಿಳಿಸಿದರು.
ನಗರದ ದರಬಾರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಿತಿಯ ಕಲಬುರ್ಗಿ ವಿಭಾಗ ಮಟ್ಟದ ನಗರ ಸಮಿತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭ್ಯಾಸ ವರ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಯಾದಗಿರಿ ಜಿಲ್ಲೆಯಾದ್ಯಂತ ವನವಾಸಿ ಕಲ್ಯಾಣದ ವತಿಯಿಂದ ಉಚಿತ ಮನೆ ಪಾಠ ಕೇಂದ್ರಗಳು,ಹೊಲಿಗೆ ತರಬೇತಿ ಕೇಂದ್ರಗಳು,ಮಹಿಳಾ ಸಂಘಗಳನ್ನು ಪರಿಶಿಷ್ಟ ಪಂಗಡದ ಜನರ ಜೀವನ ಮಟ್ಟ ಸುಧಾರಣೆಗೆ ಶ್ರಮಿಸಲಾಗುತ್ತಿದೆ.ಇದರ ಜೊತೆಗೆ ಜಾಗೃತಿ ಕಾರ್ಯಕ್ರಮಗಳಾದ ಸರ್ಕಾರಿ ಸೌಲಭ್ಯಗಳನ್ನು ಕೊಡಿಸುವುದು,ರಕ್ಷಾ ಬಂಧನ,ವೃಕ್ಷರೋಪಣಾ,ಭಾರತ ಮಾತೆಯ ಪೂಜೆ ಕಾರ್ಯಕ್ರಮ ಜೊತೆಗೆ ವೈದ್ಯಕೀಯ ಪರೀಕ್ಷೆಗಳಂತ ಜನೊಪೊಯೋಗಿ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಅಭಿವೃಧ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದರು.
ರಾಜ್ಯ ನಗರ ಸಮಿತಿಯ ಪ್ರಮುಖರಾದ ಮಾತೆ ವೇದಾವತಿಯವರು ಮಾತನಾಡಿ,ವನವಾಸಿ ಕಲ್ಯಾಣವು ದೇಶಪರ ಚಿಂತನೆಯುಳ್ಳ ಸಂಸ್ಥೆಯಾಗಿದ್ದು,ಇದರ ಮೂಲಕ ಆದಿವಾಸಿಗಳಿಗೆ ಮತ್ತು ಪರಿಶಿಷ್ಟ ಪಂಗಡದ ಜನತೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖವಾದ ಸಂಸ್ಥೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರ ಸಮಿತಿ ಅಧ್ಯಕ್ಷರಾದ ಛಾಯಾ ಕುಂಟೋಜಿ,ಸದಸ್ಯರಾದ ಅನಿತಾ ಅಂಬುರೆ,ದರಬಾರ ಶಾಲೆ ಪ್ರಧಾನಗುರು ಸೋಮರಡ್ಡಿ ಮಂಗಿಹಾಳ,ವೆಂಕಟೇಶ ಸಾವಂತಗಿರಿ,ನಗರ ಪ್ರಮುಖ ಗುರುನಾಥರಡ್ಡಿ ಶೀಲವಂತ,ದೇವರಾಜ ನಾಯಕ ಗಿರಣಿ,ಮಹಾಂತಪ್ಪ ಉಪಸ್ಥಿತರಿದ್ದರು ಹಾಗು ವಿವಿಧ ಜಿಲ್ಲೆಗಳ ಸುಮಾರು ಇಪ್ಪತ್ತೆರಡು ಜನರು ಅಭ್ಯಾಸ ವರ್ಗದಲ್ಲಿ ಭಾಗವಹಿಸಿದ್ದರು.ಶಿವಲೀಲಾ ಸಾವಂತಗಿರಿ ಪ್ರಾರ್ಥಿಸಿದರು,ಶರಣು ನಾಯಕ ಸ್ವಾಗತಿಸಿದರು,ಅನಿತಾ ಅಂಬುರೆ ವಂದಿಸಿದರು.