ಜೇವರ್ಗಿ: ಕೇಂದ್ರದ ಬಿಜೆಪಿ ಸರಕಾರ ಅಧಿಕಾರದ ಅಹಂದಿಂದ ವರ್ತಿಸುತ್ತಿದ್ದುˌ ಮೋದಿ ಮತ್ತು ಅಮಿತ್ ಶಾ ಮನೆಗೆ ಹೋಗುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಹೇಳಿದರು.
ಪೌರತ್ವ ಕಾಯ್ದೆಯನ್ನು ವಿರೋಧಿಸಿ ಮುಸ್ಲಿಂ ಫೊರಂ ಮತ್ತು ದಲಿತ ಸಂಘಟನೆಗಳ ನೇತ್ರತ್ವದಲ್ಲಿ ಸೋಮವಾರ ನಡೆದ ಪ್ರತಿಭಟನೆಯ ಅಂಗವಾಗಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೇರಿದ ಅಪಾರ ಜನಸ್ತೋಮವನ್ನುದ್ದೇಶಿಸಿ ಅವರು ಮಾತನಾಡಿದರು.
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶವನ್ನು ಸರ್ವಜನಾಂಗದ ತೋಟವಾಗಿ ಮಾಡಿದ್ದಾರೆ. ಹಿಂದೂˌ ಮುಸ್ಲಿಂˌ ಕ್ರೈಸ್ತˌ ಇಸಾಯಿ ಧರ್ಮಗಳು ದೇಶದ ಬುನಾದಿಯಾಗಿವೆ. ಅನಾವಶ್ಶಕ ಕಾಯ್ದೆಯನ್ನು ತರುವುದರ ಮೂಲಕ ಮೋದಿˌ ಅಮಿತ್ ಶಾ ಸರ್ವಾಧಿಕಾರಿಗಳಾಗಿ ವರ್ತಿಸುತ್ತಿದ್ದಾರೆ ಎಂದರು. ಬಿಜೆಪಿ ಸುಳ್ಳಿನ ಮೇಲೆ ಸೌಧ ಕಟ್ಟುತ್ತಿದೆ. ಅಂತೆಯೇ ಮಹಾರಾಷ್ರ್ಟˌ ಜಾರ್ಖಂಡ್ ಸೇರಿದಂತೆ ಹಲವು ರಾಜ್ಶಗಳಲ್ಲಿ ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾರೆ ಎಂದರು. ಪೌರತ್ವ ಕಾಯ್ದೆ ಹಿಂಪಡೆಯದಿದ್ದರೆ ದೇಶದಾದ್ಶಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನಂತರ ಮಾತನಾಡಿದ ಸಿಪಿಐಎಂ ಮುಖಂಡ ಮಹೇಶ ರಾಠೋಡˌ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಸ್ವಾತಂತ್ರ ಎಲ್ಲರಿಗೂ ಇದೆ. ಆದರೆ ಬಿಜೆಪಿ ಸರಕಾರ ಪ್ರಜೆಗಳ ಅಧಿಕಾರವನ್ನು ಕಿತ್ತುಕೊಳ್ಳುತ್ತಿದೆ. ಜನರ ನಡುವೆ ಬೆಂಕಿ ಹಚ್ಚುವˌ ಕೋಮುವಾದವನ್ನು ಹರಡುವ ಆಂದೋಲದ ಸಿದ್ದಲಿಂಗ ಸ್ವಾಮೀಜಿಯಂತವರಿಗೆ ಬಂಧಿಸದೆ ಶಾಂತಿಯುತವಾಗಿ ಪ್ರತಿಭಟಿಸುವ ನಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹರಿಹಾಯ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಶಕ್ಷ ಕೇದಾರಲಿಂಗಯ್ಯ ಹಿರೇಮಠˌ ಶೌಕತ್ ಅಲಿ ಆಲೂರ ಮಾತನಾಡಿದರು. ಈ ವೇಳೆ ಖಾಸಿಂಪಟೇಲ್ ಮುದೋಳˌ ರುಕುಂಪಟೇಲ ಇಜೇರಿˌ ಎಸ್.ಡಿ.ಪಿ.ಐನ ಮೋದಿನ್ˌ ರಾಜಶೇಖರ ಸೀರಿˌ ಚಂದ್ರಶೇಖರ ಹರನಾಳˌ ಭೀಮರಾಯ ನಗನೂರˌ ಶ್ರೀಮಂತ ಧನಕರ್ˌ ದೌಲಪ್ಪ ಮದನˌ ಶ್ರೀಹರಿ ಕರಕಿಹಳ್ಳಿˌ ವಸಂತ ನೆಲೋಗಿˌ ತಮ್ಮಣ್ಣ ಭಾಗೇವಾಡಿˌ ಮಹೇಶ ಕೋಕಿಲೆ ಸೇರಿದಂತೆ ಅನೇಕರು ಇದ್ದರು.