ಸುರಪುರದಲ್ಲಿ ಕ್ರೈಸ್ತ ಬಾಂಧವರಿಂದ ಸಂಭ್ರಮದ ಕ್ರಿಸ್‌ಮಸ್ ಆಚರಣೆ

0
80

ಸುರಪುರ: ನಮಗಾಗಿ ದಾವಿದನೂರಲ್ಲಿ ಒಬ್ಬ ರಕ್ಷಕಕನು ಜನಸಿದ್ದನು,ಆತನು ನಮ್ಮನ್ನು ಪಾಪದಿಂದ ಬಿಡಿಸಲೆಂದು ಯೇಸುಕ್ರಿಸ್ತನು ಈ ಲೋಕಕ್ಕೆ ಬಂದನು ಎಂದು ಕ್ರೈಸ್ತ ಸಮಾಜದ ಯಾದಗಿರಿ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಬಿ.ದೂಳಪ್ಪ ಮಾತನಾಡಿದರು.

ನಗರದ ಮೆಥಡಿಸ್ಟ್ ಚರ್ಚನಲ್ಲಿ ಕ್ರೈಸ್ತ ಸಮಾಜದಿಂದ ಹಮ್ಮಿಕೊಂಡಿದ್ದ ಕ್ರಿಸ್‌ಮಸ್ ಹಬ್ಬದ ಆಚರಣೆಯಲ್ಲಿ ಪಲ್ಗೊಂಡು ಮಾತನಾಡಿ,ಯೇಸುವು ಗೋದಲಿಯಲ್ಲಿ ಜನಸಿದ್ದಾನೆ ಎಂದು ದೇವದೂತರು ಕುರುಬರಿಗೆ ತಿಳಿಸಿದರು.ಆ ಕುರುಬರು ಸಹ ಯೇಸುವನ್ನು ನೋಡಲು ಹೋಗಿ ಆತನಿಗೆ ಕುರಿಗಳನ್ನು ಕಾಣಿಕೆಯಾಗಿ ನೀಡಿದರು.ಅಂತಹ ಯೇಸು ನಮಗಾಗಿ ತನ್ನ ಬದುಕನ್ನು ಸವೆಸಿದ ಆತನನ್ನು ನಾವು ನಿತ್ಯವು ನೆನೆಯಬೇಕೆಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಸ್ತಾದ ವಜಹತ್ ಹುಸೇನ್ ಮಾತನಾಡಿ,ಕ್ರೈಸ್ತ ಸಮಾಜವು ನಮ್ಮ ಅಣ್ಣ ತಮ್ಮಂದಿರಂತೆ ದೇಶದಲ್ಲಿ ಶಾಂತಿ ಮತ್ತು ಸಹಬಾಳ್ವೆ ನಡೆಸುತ್ತಿದ್ದಾರೆ.ಭಾರತದಲ್ಲಿನ ಕ್ರೈಸ್ತ ಸಮುದಾಯವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಯೇಸು ಸ್ವಾಮಿಯ ಪ್ರಾರ್ಥನೆ ಸಲ್ಲಿಸಲಾಯಿತು.ನಂತರ ಸಿಹಿ ಕೇಕ್ ಕತ್ತರಿಸುವ ಮೂಲಕ ಯೇಸುವಿನ ಜನ್ಮದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಸ್ಯಾಮುವೆಲ್ ಮ್ಯಾಥ್ಯೂ, ಹೆಚ್. ಜಯಪ್ಪ, ಸದಾನಂದ, ಡೇವಿಡ್ ಅನಂತಕುಮಾರ,ದೇವಪುತ್ರ ಭಾಸ್ಕರಪ್ಪ, ಸುಭಾಸ, ರಮೇಶ, ಥಾಮಸ್, ಸುಜಯ್, ಅನಿಲಕುಮಾರ,ಸಿಮೆಯೋನ್,ಮೇರಿ ಮಿಸ್ ಮಾರ್ಗರೇಟ್ ಸುನೀತಾ ಶಾಂತಕುಮಾರ,ಸೋನಾ ಕುಮಾರಿ,ಸುಜಾತಾ ಜಯಪ್ಪ,ಶಾಂತಕುಮಾರಿ,ಪದ್ಮ,ಸಾಗರಿಕಾ,ಸುಕುಮಾರಿ,ಸಿಸ್ಟರ್ ಚಂದ್ರಾ ಮ್ಯಾಥ್ಯೂ,ಸಂಗೀತಾ,ರತ್ನಮ್ಮ,ಶೀಲಮ್ಮ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here