ಕಲಬುರಗಿ,ಜೇವರ್ಗಿ: ಬಾಬಾಸಾಹೇಬ್ ಡಾ.ಅಂಬೇಡ್ಕರ್ ಅವರು ಮನುಸ್ಮೃತಿ ದಹನ ಮಾಡಿದ ದಿನವನ್ನು ದಲಿತ ಸಮನ್ವಯ ಸಮಿತಿಯ ಮುಖಂಡರು ಬುಧುವಾರ ಮನುಸ್ಮೃತಿಯನ್ನು ಸುಡುವುದರ ಮೂಲಕ ಆಚರಿಸಿದರು.
ಡಾ.ಅಂಬೇಡ್ಕರ್ ವ್ರತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಭೀಮರಾಯ ನಗನೂರˌ ಹೆಣ್ಣಿನ ಸ್ವಾತಂತ್ರವನ್ನು ಕಸಿದುಕೊಂಡ ಮನು ಸ್ರ್ತೀ ಸ್ವಾತಂತ್ರ್ಶ ನ ಅರ್ಹತಿ ಎಂದಿದ್ದರು. ಮನುವಿನ ಪ್ರಕಾರ ಮಹಿಳೆಯನ್ನು ಕೇವಲ ಬೋಗದ ವಸ್ತುವಾಗಿಸಿದ್ದರು. ಅಸ್ರ್ಪಷ್ಶರು ಶೋಷಣೆಯಲ್ಲಿಯೇ ಬದುಕಬೇಕು ಎಂಬುದು ಮನು ತನ್ನ ಸಂವಿಧಾನದಲ್ಲಿ ದಾಖಲಿಸಿದ್ದ. ಅದರೆ ಡಾ.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವುದರ ಮೂಲಕ ಇಡೀ ಭಾರತೀಯ ಹೆಣ್ಣುಮಕ್ಕಳಿಗೆ ಗೌರವˌ ಸ್ವಾಭಿಮಾನವನ್ನು ತುಂಬಿದರು ಎಂದರು.
ನಂತರ ದಲಿತ ಮುಖಂಡ ಮಲ್ಲಣ್ಣ ಕೊಡಚಿ ಮಾತನಾಡಿˌ ದೇಶದಲ್ಲಿ ಶೋಷಣೆ ಮುಕ್ತ ಮಾಡಿದ್ದು ಬಾಬಾ ಸಾಹೇಬರು. ಚೌಡರ ಕೆರೆಯ ನೀರನ್ನು ಮುಟ್ಟುವುದರ ಮೂಲಕ ಶೋಷಿತರಲ್ಲಿ ಆತ್ಮಸ್ತೈರ್ಯ ತುಂಬಿದರು ಎಂದರು.
ಬಿವಿಎಸ್ ಮುಖಂಡ ಶರಣು ಬಡಿಗೇರ ಮಾತನಾಡಿˌ ಚಾತುವರ್ಣ ವ್ಶವಸ್ಥೆಯನ್ನು ಜೀವಂತವಾಗಿಡುವುದು ಕೆಲವರ ಉದ್ದೇಶವಾಗಿತ್ತು. ಕೆಳಜಾತಿಯವರು ಮೇಲ್ವರ್ಗದ ಗುಲಾಮರಾಗಿ ಬದುಕುವ ಸ್ಥಿತಿ ಇತ್ತು. ಇಂತಹ ಮನುವಿನ ಸಂವಿಧಾನವನ್ನು ಸಾರ್ವಜನಿಕವಾಗಿ ಸುಟ್ಟು ದೇಶಕ್ಕೆ ಹೊಸ ಸಂವಿಧಾನ ನೀಡಿದರು ಎಂದರು.
ಈ ಸಂದರ್ಭದಲ್ಲಿ ಮಲ್ಲಣ್ಣ ಕೊಡಚಿˌ ಭೀಮರಾಯ ನಗನೂರˌ ಶ್ರೀಮಂತ ಧನಕರˌ ರಾಜಶೇಖರ ಶಿಲ್ಪಿˌ ಶ್ರೀಹರಿ ಕರಕಿಹಳ್ಳಿˌ ರವಿ ಕುಳಗೇರಿˌ ಪ್ರಭಾಕರ್ ಸಾಗರˌ ಸಿದ್ದಪ್ಪ ಆಲೂರˌ ಸಿದ್ರಾಮ ಕಟ್ಟಿˌ ಶಿವಕುಮಾರ ಗೋಲಾˌ ಸಂಗು ಹರನೂರˌ ಭೂತಾಳಿ ಹೆಗಡೆˌ ಜುಮ್ಮಣ್ಣ ವಸ್ತಾರಿˌ ಮೌನೇಶ ಹಂಗರಗಿˌ ಅಮ್ರತ್ ಕಾಚಾಪುರˌ ಮಿಲಿಂದ ಸಾಗರˌ ಮಹೇಶ ಕೋಕಿಲೆˌ ಗುರಲಿಂಗ ಗವನಳ್ಳಿˌ ಶರಣಪ್ಪ ವಡಗೇರ ಸೇರಿದಂತೆ ಇತರರು ಇದ್ದರು.