ವಚನಗಳೇ ಶರಣ ಸಂಸ್ಕೃತಿ: ನಾಲವಾರ ಶ್ರೀ

0
37

ಶಹಾಪುರ: ಬಸವಣ್ಣನವರ ವಚನಗಳನ್ನು ಬದುಕಿನುದ್ದಕ್ಕೂ ಮೈಗೂಡಿಸಿಕೊಂಡು ಸನ್ಮಾರ್ಗದಲ್ಲಿ ನಡೆದರೆ ಅದುವೇ ಶರಣ ಸಂಸ್ಕೃತಿ ಎಂದು ನಾಲವಾರದ ಡಾ: ಸಿದ್ಧತೋಟೇಂದ್ರ ಶಿವಾಚಾರ್ಯರು ಹೇಳಿದರು.

ಶಹಾಪುರ ನಗರದ ಲಿಂಗಣ್ಣ ಸತ್ಯಂಪೇಟೆ ವೇದಿಕೆ ಹಾಗೂ ಬಸವ ಮಾರ್ಗ ಪ್ರತಿಷ್ಠಾನ ಏರ್ಪಡಿಸಿರುವ ೯೪ ನೇ ಬಸವ ಬೆಳಕು ಕಾರ್ಯಕ್ರಮದಲ್ಲಿ ಅನುಭಾವನ್ನು ಹಂಚಿಕೊಂಡರು .

Contact Your\'s Advertisement; 9902492681

ಈ ಸಂದರ್ಭದಲ್ಲಿ ಹಲವಾರು ಶರಣರ ವಚನಗಳನ್ನು ಉಣಬಡಿಸುವುದರ ಮೂಲಕ ಶರಣ ಸಂಸ್ಕೃತಿಯನ್ನು ಸವಿಸ್ತರವಾಗಿ ತಿಳಿಪಡಿಸಿ ತಾವು ರಚಿಸಿದ ಹಲವಾರು ಹಾಸ್ಯ ಭರಿತವಾದ ಚುಟುಕುಗಳನ್ನು ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಕೈಲಾಸಕ್ಕಿಂತ ಕಾಯಕ ದೊಡ್ಡದು ಪ್ರತಿಯೊಬ್ಬರೂ ಮಾಡುವ ಕಾಯಕದಲ್ಲಿ ನಿಷ್ಠೆ ಶ್ರದ್ಧೆ ಇದ್ದರೆ ನಿಜಕ್ಕೂ ಶರಣ ಕಾಯಕ ಎಂದೆನಿಸಿಕೊಳ್ಳುತ್ತದೆ ಎಂದು ಗುರುಮಿಟ್ಕಲ್ ಖಾಸಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಹಲವಾರು ಮಕ್ಕಳಿಂದ ವಚನ ಕಂಠಪಾಠ ಮಾಡಿಸಲಾಯಿತು ಖ್ಯಾತ ಸಂಗೀತ ಕಲಾವಿದರಾದ ಚಂದ್ರಶೇಖರ್ ಗೋಗಿ ಅವರಿಂದ ವಚನ ಸಂಗೀತ ಕಾರ್ಯಕ್ರಮವನ್ನು ನೇರವೆರಿತು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ದರಾಮ ಹೊನ್ಕಲ್, ಗುರುಬಸಯ್ಯ ಗದ್ದುಗೆ, ಗುಂಡಪ್ಪ ಕಲಬುರ್ಗಿ, ವೆಂಕಪ್ಪ ಆಲೆಮನೆ, ಗುಂಡಪ್ಪ ತುಂಬಿಗಿ, ಶಿವರಾಜ್ ದೇಶಮುಖ,ಅಡಿವೆಪ್ಪ ಜಾಕಾ ಶಿವಲಿಂಗಣ್ಣ ಸಾಹು, ಭೀಮಪ್ಪ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಶರಣ ರಾಜು ಕುಂಬಾರ, ಸ್ವಾಗತಿಸಿದರು ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷರಾದ ವಿಶ್ವರಾಧ್ಯ ಸತ್ಯಂಪೇಟೆ, ಪ್ರಾಸ್ತಾವಿಕ ಮಾತುಗಳನ್ನಾಡಿದರು ಶಿವಣ್ಣ ಇಜೇರಿ ಅವರು ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here