ಕಲಬುರಗಿ: ಉಡುಪಿಯ ಪೇಜಾವರ ಮಠದ ಹಿರಿಯ ಯತಿಗಳಾದ ಶ್ರೀ ಶ್ರೀ 1008 ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ವಿಧಿವಶರಾಗಿದ್ದಕ್ಕೆ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ 8 ನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಪಡೆದು ‘ಸನ್ಯಾಸತ್ವ’ಕ್ಕೆ ಹೊಸ ಭಾಷ್ಯ ಬರೆದ ಈ ನಾಡಿನ ಸಂತ ಶ್ರೇಷ್ಠ ಪರಮಪೂಜ್ಯ ಶ್ರೀಗಳು ರವಿವಾರದಂದು ಕೃಷ್ಣೈಕ್ಯರಾದ ಶ್ರೀಗಳು, ಉಡುಪಿಯ ಶ್ರೀಕೃಷ್ಣನ ಪರಮಭಕ್ತರಾದ ಅವರು ದೇಶದ ಸಂಕಷ್ಟಗಳನ್ನು ಪರಿಹರಿಸುವಲ್ಲಿ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಅಸ್ಪೃಶ್ಯತೆಯ ನಿವಾರಣೆಗಾಗಿ ಮತ್ತು ಧಾರ್ಮಿಕ ಭಾವೈಕ್ಯತೆಯನ್ನು ಮೂಡಿಸಲು ಅವರು ಕೈಗೊಂಡ ಕಾರ್ಯಗಳು ಅತ್ಯಮೂಲ್ಯವಾಗಿವೆ. ಅಂಥ ಯತಿಗಳನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ವಿವರಿಸಿದ್ದಾರೆ.