ಯಾದಗಿರಿ,ಸುರಪುರ: ತಾಲೂಕಿನ ರತ್ತಾಳ ಗ್ರಾಮದಲ್ಲಿ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ವೇಸಗಿರುವ ಘಟನೆ ನಡೆದಿದೆ.
ಆಟವಾಡುತ್ತಿದ್ದ ಮಗುವನ್ನು ತನ್ನ ಮನೆಗೆ ಎತ್ತಿಕೊಂಡು ಹೋಗಿರುವ ನಿಂಗಪ್ಪ ಮರೆಪ್ಪ ಬಿಲ್ಲವ್ (25) ಎಂಬ ಅದೇ ಗ್ರಾಮದ ಕಾಮುಕ ಮಗುವಿನ ಮೇಲೆ ಅತ್ಯಾಚಾರ ವೇಸಗಿದ್ದಾನೆ ಎನ್ನಲಾಗಿದೆ.
ಶನಿವಾರ ಸಾಯಂಕಾಲ 5 ವರೆಯ ಸುಮಾರಿಗೆ ಸುಮಾರಿಗೆ ಮಗುವಿನ ತಾಯಿ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಸಮೀಪದ ರಂಗಂಪೇಟೆಗೆ ಸಂತೆಗೆಂದು ಹೋಗಿದ್ದಾಗ ಪಕ್ಕದ ಮನೆಯ ಮಕ್ಕಳ ಜೊತೆಗೆ ಆಟವಾಡುತ್ತಿದ್ದ ಮಗುವನ್ನು ಕಾಮುಕ ನಿಂಗಪ್ಪ ಬಿಲ್ಲವ್ ಎತ್ತಿಕೊಂಡು ಹೋಗಿ ತನ್ನ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಮಗುವಿನ ತಂದೆ ಸಂತೆಯಿಂದ ಬಂದು ಮಗಳು ಎಲ್ಲಿ ಎಂದು ತಾಯಿಗೆ ಕೇಳಿದಾಗ, ಹೊರಗಡೆ ಆಟವಾಡುತ್ತಿರುವುದಾಗಿ ತಿಳಿಸಿದ್ದು, ಮಗು ಕಾಣದಿದ್ದಾಗ ಪಕ್ಕದ ಮನೆಯ ಮಕ್ಕಳಿಗೆ ವಿಚಾರಿಸಿದಾಗ ನಿಂಗಪ್ಪ ಎತ್ತಿಕೊಂಡು ಮನೆಗೆ ಹೋಗಿರುವುದನ್ನು ತಿಳಿಸಿದ ನಂತರ ನಿಂಗಪ್ಪ ಮನೆಯ ಬಾಗಿಲು ಹಾಕಿದ್ದನ್ನು ನೋಡಿ ಬಾಗಿಲು ತಳ್ಳಿದಾಗ ಒಳಗಡೆ ಮಗು ಅಳುವ ಧ್ವನಿಕೇಳಿ ಬಾಗಿಲು ಜೋರಾಗಿ ದಬ್ಬಿ ತೆಗೆದು ನೋಡಿದಾಗ ನಿಂಗಪ್ಪ ಮನೆಯರ ಕಂಡು ಓಡಿ ಹೋಗಿದ್ದಾನೆ.
ಮಗುವಿನ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಹೆತ್ತವರು ಗಾಬರಿಯಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿದೆ. ಸುದ್ದಿ ಅರಿತು ಗ್ರಾಮದ ಜನರು ನಿಂಗಪ್ಪನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ರಕ್ತಸ್ರಾವವಾಗುತ್ತಿದ್ದ ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಸದ್ಯ ಮಗು ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎಸ್.ಪಿ.ಋಷಿಕೇಶ ಭಗವಾನ ಭೇಟಿ: ಸುರಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ನಂತರ ರವಿವಾರ ರತ್ತಾಳ ಗ್ರಾಮಕ್ಕೆ ಯಾದಗಿರಿ ಎಸ್.ಪಿ.ಋಷಿಕೇಶ ಭಗವಾನ, ಡಿ.ಎಸ್.ಪಿ ಶಿವನಗೌಡ ಪಾಟೀಲ ಹಾಗು ಪಿಐ ಆನಂದರಾವ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ವಶದಲ್ಲಿರುವ ಕಾಮುಕ ನಿಂಗಪ್ಪ ಬಿಲ್ಲವ್ ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಆರೋಪಿ ನಿಂಗಪ್ಪ ಬಿಲ್ಲವ್ನನ್ನು ಜೈಲಿಗೆ ಕಳುಹಿಸಲಾಗಿದೆ.
ತಾಲೂಕಿನಲ್ಲಿ ಮಗುವಿನ ನಡೆದ ಈ ಅತ್ಯಾಚಾರ ಘಟನೆಯಿಂದ ಜನತೆ ಬೆಚ್ಚಿಬಿದ್ದಿದ್ದು ಕಾಮುಕ ನಿಂಗಪ್ಪನಿಗೆ ಕಠಿಣ ಶಿಕ್ಷೆ ನೀಡುವಂತೆ ಜನತೆ ಆಗ್ರಹಿಸುತ್ತಿದ್ದಾರೆ.