ಬಸವೇಶ್ವರ ಮಹಾವಿದ್ಯಾಲಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ಶತಮಾನೋತ್ಸವ

0
27

ಸುರಪುರ: ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಥಮಜ್ಞಾನಪಿಠ ಪ್ರಶಸ್ತಿ ತಂದುಕೊಟ್ಟಕನ್ನಡದಶ್ರೇಷ್ಟ ಕವಿ, ಜಗದ ಕವಿ, ಯುಗದ ಕವಿ ಕುವೆಂಪು ಎಂದುಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶಅಂಗಡಿ ಕನ್ನೆಳ್ಳಿ ಬಣ್ಣಿಸಿದರು.

ನಗರದರಂಗಂಪೇಟೆಯ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದರಾಷ್ಟ್ರ ಕವಿ ಕುವೆಂಪು ಅವರಜನ್ಮ ದಿನೋತ್ಸವಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಶ್ರೀ.ರಾಮಾಯಣದರ್ಶನಂ ಎಂಬ ಮಹಾಕಾವ್ಯವನ್ನುಕನ್ನಡ ಸಾಹಿತ್ಯ ಲೋಕಕ್ಕೆ ನೀಡಿಕನ್ನಡದಹಿರಿಮೆಯನ್ನು ವಿಶ್ವಕ್ಕೆ ಪರಿಚಯಿಸಿ, ವಿಶ್ವಮಾನವ ಸಂದೇಶದ ಮೂಲಕ ಸರ್ವರ ಗಮನ ಸೆಳೆದ ಸಮಾನತೆಯ ಕವಿ ಕುವೆಂಪು.ಅಧ್ಯಾಪಕರಾಗಿ, ಪ್ರಾಧ್ಯಾಪಕರಾದಿ, ಕುಲಪತಿಗಳಾಗಿ, ಕನ್ನಡದ ಶ್ರೇಷ್ಟ ಕವಿ, ಕಾದಂಬರಿಕಾರ, ಲೇಖಕ, ಬರಹಗಾರರಾಗಿಅವರು ಮಾಡಿದ ಸೇವೆ ಅಮೋಘ ಮತ್ತುಅಪಾರ.ಕುವೆಂಪು ಅವರ ಕವಿ ಶೈಲ ಕನ್ನಡದ ಪ್ರಸಿದ್ಧ ಸಾಹಿತಿಕತಾಣವಾಗಿ ನಮ್ಮ ಮುಂದೆಇದೆ, ಕಾರಣ ಕುವೆಂಪು ಅವರ ಸಾಹಿತ್ಯ ಪ್ರೇಮಸರ್ವರಿಗು ಪ್ರೇರಣೆಯಾಗಲಿ ಎಂದು ಹೇಳಿದರು.

Contact Your\'s Advertisement; 9902492681

ಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಶಾಂತು ನಾಯಕ, ಪದವಿ ಪೂರ್ವ ಮಹಾವಿದ್ಯಾಲಯದಪ್ರಾಚಾರ್ಯ ವಿರೇಶ ಹಳಿಮನಿ, ಬಲಭೀಮ ಪಾಟೀಲ್, ಅಮರೇಶಕುಂಬಾರ ಸೇರಿದಂತೆಇತರರಿದ್ದರು.ಮೌನೇಶಐನಾಪುರ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here