ಸೇಡಂ: ಜಾತಿಯತೆ ಎನ್ನುವುದು ದೇಶಕ್ಕೆ ಕ್ಯಾನ್ಸರ್‌ನಂತೆ, ಅದು ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತದೆ, ಎಲ್ಲಿಯವರೆಗೆ ಜಾತಿ ಪದ್ಧತಿ ನೆಲೆಸಿರುತ್ತದೆಯೋ ಅಲ್ಲಿಯವರೆಗೆ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ. ಜಾತಿಯತೆ ಎನ್ನುವುದು ದೇಶಕ್ಕೆ ಕ್ಯಾನ್ಸರ್‌ನಂತೆ. ಅದು ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತದೆ ಎಂದು ವಕೀಲರಾದ ರಾಜು ಮುದ್ಡಡಗಿ ಜೇವರ್ಗಿ ಹೇಳಿದರು.
ಸಿಂಧನಮಡು ಗ್ರಾಮ ಪಂಚಾಯತಿಯ ಆವರಣದಲ್ಲಿ ಇಲ್ಲಿನ ಈಶ್ವರ ದೇವಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಸೇಡಂ ಹಾಗೂ ಮಹರ್ಷಿಯ ಯುವ ಸಮಾಜಕಲ್ಯಾಣ ಸಂಘ ಜೇವರ್ಗಿ ಸೇರಿದಂತೆ ಗ್ರಾಮ ಪಂಚಾಯತ್ ಕಾರ್ಯಾಲಯ ಸಿಂಧನಮಡು, ಸಹಯೋಗ ದಲ್ಲಿ ಹಮ್ಮಿಕೊಂಡಿರುವ ಅಸ್ಪೃಶ್ಯತೆ ನಿವಾರಣೆ ಕುರಿತು ಅರಿವು ಮೂಡಿಸುವ ವಿಚಾರ ಗೋಷ್ಠಿ ಹಾಗೂ ಬೀದಿನಾಟಕ ಕಾರ್ಯಕ್ರಮ 2019ನ್ನು ನಡೆಸಲಾಯಿತು.
ಸಮಾಜದಲ್ಲಿರುವ ಅನಿಷ್ಠಗಳಾದ ವರ್ಗ, ವರ್ಣ, ಲಿಂಗ ತಾರತಮ್ಯ, ಅನಕ್ಷ ರತೆ, ಮೂಢನಂಬಿಕೆಗಳು ಆಧುನಿಕ ಸಮಾಜದ ನಿರ್ಮಾಣಕ್ಕೆ ಅಡ್ಡಿಯಾಗಿರುವುದು ನೋವಿನ ಸಂಗತಿ.
ಸಮುದಾಯ ಅಭಿವೃದ್ಧಿಯಲ್ಲಿ ಅಂಬೇಡ್ಕರ್ ಚಿಂತನೆಗಳು ಶಿಕ್ಷಣದ ಮಹತ್ವ ಅರುಹಬೇಕು. ಸಮುದಾಯದ ಅಭಿವೃದ್ಧಿ ಸಾಧನೆಗೆ ಸಹಕಾರ, ಸಮನ್ವತೆ, ಸಹಬಾಳ್ವೆ ಅಗತ್ಯವಾಗಿವೆ. ಮಾನವೀಯ ಮೌಲ್ಯ, ಸಮಾನತೆ ಆಶಯದೊಂದಿಗೆ ಅಭಿವೃದ್ಧಿ ಸಾಧಿಸಬೇಕು. ಕುಟುಂಬ ಹಾಗೂ ಸಮಾಜದ ಪರಸ್ಪರ ಸಹಕಾರದಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ. ಆ ದೃಷ್ಟಿಯಲ್ಲಿ ಸಮುದಾಯ ಅಭಿವೃದ್ಧಿಗೆ ಡಾ.ಅಂಬೇಡ್ಕರ್‌ರ ಚಿಂತನೆಗಳು ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಸಾರ್ವಜನಿಕರಲ್ಲಿ ಶಿಕ್ಷ ಣದ ಜಾಗೃತಿ ಮೂಡಿಸಬೇಕು. ಸಂಘಟನಾತ್ಮಕ ಮನೋಭಾವ ಬೆಳೆಸಿ ಸಮುದಾಯದ ಅಭಿವೃದ್ಧಿಯಲ್ಲಿ ತೊಡಗಿಸಬೇಕು. ಇದು ಸಾಮಾಜಿಕ ಕಾರ್ಯಕರ್ತರ ಪ್ರಮುಖ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ಶ್ರೀಮತಿ ಲಕ್ಷಮಮ್ಮ ಕಾಳಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯರಾದ ನರಸಿಂಹಲು ಯಲಪ್ಪ. ಬಸವರಾಜ ನಾಗಪ್ಪ ಸೇರಿದಂತೆ ಶ್ರೀಮತಿ ಸರಸ್ವತಿ ಯಲ್ಲಪ್ಪ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀಕಂಠಿ ಬಸವೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಹಡಗಿಲ್ಲ ಹಾರುತಿ ಶರಣಪ್ಪ ಪಡಶೆಟ್ಟಿ ನಿರ್ವಹಿಸಿದರು .
ಶ್ರೀಸಾಯಿ ಕಲಾ ಜಾಗೃತಿ ತಂಡ ಕಲಾವಿದರಿಂದ ಬೀದಿನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನಮನವನ್ನು ಸೆಳೆಯುವ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಮಲ್ಲಿಕಾರ್ಜುನ್ ರೆಡ್ಡಿ. ಭೀಮರಾಯ ಕೊಟ್ಟರಕೆ ,ರಾಜಪ್ಪ ಭೂಮಿ , ಭೀಮರಾಯ ವಾಲಿಕಾರ್ ಸೇರಿದಂತೆ ಅನಂತ್ ಕುಮಾರ್ ಕರವಸೂಲಿಗಾರರು ಹಾಗೂ ಗ್ರಾಮ ಪಂಚಾಯಿತಿ ಸಿಂಧನಮಡು ಅಭಿವೃದ್ಧಿ ಅಧಿಕಾರಿಗಳಾದ ದೇವಿಂದ್ರಪ್ಪ ಭಾಗವಹಿಸಿದ್ದರು.