ದೇಶ ಪಾರಾಗ ಬೇಕಿರೋದು ಮೋದಿಯಿಂದಲ್ಲ. ಹಾಗಾದರೆ ಮತ್ಯಾರಿಂದ..?

0
341

ಪೌರತ್ವ ಸಾಬೀತು ಪಡಿಸಬೇಕು ಅನ್ನೋ ಅಗ್ನಿ‌ ಪರೀಕ್ಷೆ ಈಗ ಭಾರತೀಯ ಮುಸ್ಲಿಮರದ್ದು. ಇದು ಭಾರತವನ್ನು ವರ್ಣಪದ್ದತಿಗೆ ಮರಳಿಸುವ ಮಹಾ ಅಜೆಂಡಾದ ಮೊದಲ ಮೆಟ್ಟಿಲು. ಬಿಜೆಪಿ ಹಾಗೂ ಸಂಘಪರಿವಾರದ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನ ಕಾರ್ಯಗತ ಮಾಡಿಯೇ ಮುಗಿಸುವೆವು ಅನ್ನೋ‌ ಪಣ ತೊಟ್ಟಿದ್ದಾರೆ. ಮುಗ್ಧ ಮನಸ್ಸುಗಳಿಗೆ ದ್ವೇಷ ರಾಜಕರಣವನ್ನು ಹಾಕಿ ಕೊಟ್ಟು ಬ್ರಾಹ್ಮಣ್ಯದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಮುಸ್ಲಿರಮರೆಂದರೆ ಸದಾ ಹಲ್ಲಲ್ಲು ಕಡಿಯುವ ಸಂಘಪರಿವಾರ, ಇತಿಹಾಸವನ್ನು ತಿರುಚಿಕೊಂಡು ಸುಳ್ಳುಗಳನ್ನ ಸತ್ಯವೆಂಬಂತೆ ಬಿಂಬಿಸಿ ದೇಶವನ್ನು ಒಡೆದಾಳುತ್ತಿದೆ.

Contact Your\'s Advertisement; 9902492681

ಬ್ರಿಟೀಷರು ಅಂದೇನು ಮಾಡಿಟ್ಟು ಹೋದರೋ ಅದರ ಮುಂದುವರೆದ ಭಾಗವನ್ನ ಈಗ ಸಂಘಪರಿವಾರ ಮಾಡ್ತಿದೆ. ಆದರೆ ಅದಕ್ಕೆ ಮುಖವಾಣಿ ಮೋದಿ ಹಾಗೂ ಅಮಿತ್ ಶಾ. ಭಾರತವನ್ನು ಕಟ್ಟಿ ಬೆಳೆಸಲು ಮುಸಲ್ಮಾನರ ಕೊಡುಗೆ ಎಂಥದ್ದು ಅನ್ನೋದಕ್ಕೆ ಇತಿಹಾಸವೇ ಸಾಕ್ಷಿ. ಭಾರತದ ನಾಲ್ಕು ದಿಕ್ಕಿಗೂ ಒಂದು ಪಯಣ ಬೆಳೆಸಿದರೆ ಅದಕ್ಕೆ ಬೇಕಾದ ಹಲವು‌ ಪುರಾವೆಗಳು ನಮಗೆ ಕಾಣ ಸಿಗುತ್ತವೆ. ಸದಾ ದ್ವೇಷದ ರಾಜಕಾರಣ‌ ನಡೆಸುವ ಬಿಜೆಪಿ ಎಲ್ಲೂ‌ ಕೂಡ ಬ್ರಿಟೀಷರ ಬಗ್ಗೆ ಮಾತನಾಡುವುದಿಲ್ಲ. ಆದರೆ‌ ದೇಶಕ್ಕಾಗಿ ರಕ್ತ ಹಿರಿಸಿ ಹೆತ್ತ ಕರುಳುಗಳನ್ನೇ ಒತ್ತೆ ಇಟ್ಟ ಮುಸಲ್ಮಾನರ ಬಗ್ಗೆಯಷ್ಟೇ ಮಾತನಾಡುತ್ತಿದೆ. ಮೊಘಲರು 7 ಶತಮಾನಗಳ ಕಾಲ‌ ದೇಶವನ್ನು ಆಳಿದವರು. ಅದರ ಕುರುಹು ಇನ್ನೂ ಜೀವಂತವಾಗಿಯೇ ಇದೆ. ಅದರಲ್ಲೂ ಬಾಬರ್ ಹಾಗೂ ಔರಂಗಜೇಬ್ ಸಂಘಪರಿವಾರದ ಇಷ್ಟ ಅಧ್ಯಾಯ. ಬಾಬರ್ ನಿರ್ಮಿಸಿದ ಮಸೀದಿ ಹೊಡೆದುರುಳಿಸಿ ವಿಕೃತಿ ಮೆರೆದ ಸಂಘಿ ಪುತ್ರ ಹಾಗೂ ಪುತ್ರಿಯರಿಗೆ ಕೇವಲ ಒಂದು ಬಾಬರಿಯನ್ನಷ್ಟೇ ಹೊಡೆದುರುಳಿಸಲು ಸಾಧ್ಯಾವದೀತು. ಆದರೆ ಕಣ್ಣಿಗೆ‌ ರಾಚುವಂತೆ ವಿದೇಶಗಳಲ್ಲಿ ಭಾರತವೆಂದರೆ ಪರಿಗಣನೆಗೆ ತೆಗೆದುಕೊಳ್ಳುವ ಅದೆಷ್ಟೋ ಸ್ಮಾರಕಗಳು ನಮ್ಮಲ್ಲಿದೆ.

ಚಿತ್ರ ಕೃಪೆ: ಟೈಮ್ಸ್ ಮ್ಯಾಗಜಿನ್

ಸುಮಾರು 7 ಶತಮಾನಗಳ ಕಾಲ ಭಾರತವನ್ನು ಆಳಿಯೂ ಮೊಘಲರು ಭಾರತವನ್ನು ಇಬ್ಬಾಗ ಮಾಡಲಿಲ್ಲ.‌ ವಾಸ್ತವವೆಂದರೆ ಆ ಕಾಲದಲ್ಲಿ ಜನರು ಮೊಘಲರ ವಿರುದ್ಧ ಸಮರ ಸಾರಿದ ಒಂದೇ ಒಂದೂ‌ ಕುರುಹು‌ ಕೂಡ ಇಲ್ಲ. ಆದರೆ ಕೇವಲ 190 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟೀಷರ ಕೊಟ್ಟ ಕೊಡುಗೆಯಾದರೂ ಏನು..? ಹೊನ್ನು ಬೆಳೆಯುವ ಮಣ್ಣಿಗೆ ಕಾಲಿಟ್ಟ ಬ್ರಿಟೀಷರು ನಮ್ಮ ಭಾರತವನ್ನು ಕೊಳ್ಳೆ ಹೊಡೆದರು. ಬ್ತಿಟೀಷರಿಗೂ ಮೊದಲು ಭಾರತಕ್ಕೆ ಬಂದ ಅರಬ್ಬಿಗಳು ಕೇವಲ ವ್ಯಾಪಾರ ಮಾಡಿ ಹೊರಟು ಹೋದರು. ಭಾರತವನ್ನು ದರೋಡೆ ಮಾಡಲಿಲ್ಲ.‌ ಭಾರತದ ಒಂದಿಡಿ‌ ಮಣ್ಣನ್ನು ಕೂಡ ಕೊಂಡೊಯ್ಯಲಿಲ್ಲ. ಆದರೆ ಬ್ರಿಟೀಷರು ಈಸ್ಟ್ ಇಂಡಿಯಾ‌ ಕಂಪೆನಿಯ ಪರದೆಯಲ್ಲಿ ಕೊಳ್ಳೆ ಹೊಡೆದು, ಅಂದಿನ 4 ಟ್ರಿಲಿಯನಷ್ಟು ಸಂಪತ್ತನ್ನ ಕೊಂಡೊಯ್ದರು.‌ ಹೋಗುವ ಹೊತ್ತಿಗೆ ತಾಜ್ ಮಹಲನ್ನು ಕೂಡ ಇಲ್ಲಿಂದ ಎತ್ತಂಗಡಿ‌ ಮಾಡಲು ನೋಡಿದರು. ಆದರೆ ಸ್ಥಳಾಂತರ‌ ಕಷ್ಟ ಸಾಧ್ಯವಾದ್ದರಿಂದ ತಾಜ್ ಮಹಲ್ ನಮ್ಮಲ್ಲೇ ಉಳಿಸಿ ಹೋದರು. ಆದರೆ ಭಾರತದ ಶತ್ರು ಪಾಕಿಸ್ತಾನ ಅನ್ನೋದು ವಿಪರ್ಯಾಸ. ಬ್ರಿಟನ್ ಈಗ ಆಪ್ತ ಗೆಳೆಯ.

ಸದಾ ದ್ವೇಷ ಕಾರೋದಕ್ಕೆ ಮೊಘಲರ ಹೆಸರೆತ್ತಿ ಹೇಳುವ ಸಂಘಿಗಳು ಮಸೀದಿ ನಿರ್ಮಿಸಿದ ಮೊಘಲರ ಬಗ್ಗೆ ಮಾತನಾಡುತ್ತಾರೆ. ಆದರೆ ರಾಮಯಾಣವನ್ನು ಮಹಾಭಾರತವನ್ನು ಪಾರ್ಸಿ ಭಾಷೆಗೆ ಭಾಷಾಂತರಿಸ ಬೇಕು ಎಂದಿದ್ದ ಮೊಘಲರ ಬಗ್ಗೆ ಮಾತನಾಡುವುದಿಲ್ಲ. ಮಾತನಾಡಲು ನಾಲಗೆ ಹೊರಳುವುದಿಲ್ಲ.

ಮೋದಿಯ ಈ ಅವಧಿಯಲ್ಲಿ ಬಾಬರಿಯ ಜಾಗ ರಾಮನಿಗೆ ಬಿಟ್ಟು‌ ಕೊಟ್ಟಾಗ ಭಾರತೀಯ ಮುಸ್ಲಿಮರು ಯಾವುದೇ ಹೋರಾಟ ಮಾಡಲಿಲ್ಲ. ಯಾಕೆಂದರೆ ಒಂದು ಮಸೀದಿಯಿಂದ ಇಲ್ಲಿ ಶಾಂತಿ ಸಹಬಾಳ್ವೆ ನೆಲೆಸೋದಾದರೆ ಅದೇ ನಿಜವಾದ ಧರ್ಮ ಎಂಬಂತೆ ನಡೆದುಕೊಂಡರು. ಆದರೆ ಆ ನೋವಿನ ಆಳ ಅಗಲವನ್ನ ಯಾರಿಂದಲೂ ತೂಗಿ ಅಳೆಯಲು ಸಾಧ್ಯವಿಲ್ಲ. ತಾಜ್ ಮಹಲ್, ಕೆಂಪುಕೋಟೆ, ಆಗ್ರಾ ಕೋಟೆ, ಕುತುಬ್ ಮಿನಾರ್, ಫತ್ತೇಪುರ್ ಸಿಕ್ರಿ ಹೀಗೆ ಸಂಸ್ಕೃತಿಯೊಂದರ ಪ್ರತೀಕವಾಗಿ ಭಾರತದ ಉದ್ದಗಲಕ್ಕೂ ಮುಸಲ್ಮಾನರ ಬೆವರು ಹಾಗೂ ರಕ್ತದ ಕುರುಹುಗಳು ಇದ್ದೇ ಇದೆ. ಆದರೆ ಮೊಘಲರನ್ನ ಜಗತ್ತು ಕಂಡ ಕ್ರೂರಿಗಳು ಎಂಬಂತೆ ಬಿಂಬಿಸಿದರು ಈ ಸಂಘಿಗಳು. 49 ವರ್ಷಗಳ ಕಾಲ ರಾಜನಾಗಿದ್ದರೂ ಕೂಡ ಆಳ್ವಿಕೆಯ ಬಳಿಕದ ಬುದುಕಿಗೆ ತನ್ನ ವೈಯಕ್ತಿಕ ಖರ್ಚಿಗೆ ಒಂದೇ ಒಂದು ರೂಪಾಯಿ ಕೂಡ ಔರಂಗಜೇಬ್ ರಾಜ್ಯದ ಖಜಾನೆಯಿಂದ ತೆಗೆದುಕೊಂಡಿಲ್ಲ. ಬಟ್ಟೆ ಹೊಲಿದು ತನ್ನ ಹೊಟ್ಟೆ ಪಾಡು ನೋಡಿಕೊಳ್ಳುತ್ತಿದ್ದರು. ವಾಸ್ತವದಲ್ಲಿ ಭಾವಾನತ್ಮಕ ವಿಚಾರವಾದ ಗೋ ಮಾಂಸವನ್ನು ಔರಂಗಜೇಬ್ ನಿಷೇಧಸಿದ್ದರು. ಆದರೂ ಔರಂಗಜೇಬ್ ಓರ್ವ ಮತಾಂಧ, ಧರ್ಮಾಂದ, ಜಗತ್ತು ಕಂಡ ಏಕೈಕ ಕ್ರೂರಿ ಎಂಬಂತೆ ಬಿಂಬಿತಗೊಂಡಿರೋದು ದುರ್ವಿಧಿ.

1925 ರಲ್ಲೇ ಹಿಂದೂ ರಾಷ್ಟ್ರದ ಪರಿಕಲ್ಪನೆ ಮುಂದಿಟ್ಟು ಕೊಂಡು ಕೆಲಸ ಮಾಡುತ್ತಿರುವ ಸಂಘಪರಿವಾರ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವ ರೀತಿ‌ ಪಾಲ್ಗೊಂಡಿರಬಹುದು ಅನ್ನೋದಕ್ಕೆ ವಿಶೇಷವಾದ ಅಧ್ಯಯನದ ಅಗತ್ಯವೇನು ಇಲ್ಲ. ಬೂಟು ನೆಕ್ಕಿದ, ಕ್ಷಮಾಪಣೆ ಪತ್ರ ಬರೆದ ಇತಿಹಾಸವಷ್ಟೇ ಅವರದ್ದು. ಆದರೆ ಭಾರತೀಯ ಮುಸ್ಲಿಮರ ತ್ಯಾಗಕ್ಕೆ ಬೆಲೆ ಕಟ್ಟಲು ಇಂದು ಯಾರಿಗೂ ಸಾಧ್ಯವಿಲ್ಲ. ಆದರೂ ಮುಸ್ಲಿಂ ರಾಷ್ಟ್ರ ಅನ್ನೋ ಪರಿಕಲ್ಪನೆ ಅನ್ನೋ ಕೂಗು ಎಲ್ಲಾದರೂ ಎಂದಾದರೂ ಯಾರಾದರೂ‌ ಕೇಳಿದ್ದಾರೆಯೇ..? ಖಂಡಿತ ಇಲ್ಲ. ಭಾರತದ ಹೆಮ್ಮೆಯ ಕವಿ ಅಲಾಮ ಮುಹಮ್ಮದ್ ಇಕ್ಬಾಲ್ ಅವರು ಗಡಿ ದಾಟಿ ಬರುವ ಹಕ್ಕಿಗಳನ್ನು ನೋಡುತ್ತಾ ಹೇಳಿದ ಮಾತೊಂದಿದೆ,
“ಈ ದೇಶ ನನ್ನದಲ್ಲ. ಈ ದೇಶ ನಿನ್ನದೂ ಅಲ್ಲ. ಈ ದೇಶ ಯಾರಪ್ಪನ ಆಸ್ತಿಯೂ ಅಲ್ಲ.”


ವಾಸ್ತವದಲ್ಲಿ ಈ ಮಾತು ಎಷ್ಟೊಂದು ಸತ್ಯ. ಇಲ್ಲಿ ಎಲ್ಲರಿಗೂ ಅವಕಾಶ ಇದೆ. ಆದರೆ ಯಾರಿಗೂ ಅವಕಾಶ ಇಲ್ಲ. ಮುಸಲ್ಮಾನರನ್ನ ಸ್ವೀಕರಿಸಲು ಜಗತ್ತಿನಲ್ಲಿ 50-60 ರಾಷ್ಟ್ರಗಳಿದೆ ಕ್ರೈಸ್ತರನ್ನ ಬರಮಾಡಿಕೊಳ್ಳಲು 70-80 ರಾಷ್ಟ್ರಗಳಿವೆ. ಆದರೆ ಹಿಂದೂಗಳಿಗ ಯಾವ ದೇಶವಿದೆ. ಹಿಂದೂಗಳಿಗೆ ಸಮುದ್ರ ಮಾತ್ರ ಇರೋದು ಅಂತ ಬೊಬ್ಬೆ ಇಡುವ ಸಂಘಿಗಳಿಗೆ ನೆನಪಿರಲಿ, ಭಾರತದ ಮುಸಲ್ಮಾನರನ್ನೂ, ಕ್ರೈಸ್ತರನ್ನು ಬರ ಮಾಡಿಕೊಳ್ಳಲು ಇತರೆ ದೇಶಗಳು ಸಿದ್ದವಾಗಿದೆ ಅಂತ ಯಾವ ದೇಶವೂ ಈ ವರೆಗೆ ಮುಂದೆ ಬಂದಿಲ್ಲ. ಒಂದು ವೇಳೆ ಮುಂದೆ ಬಂದರೂ ಕೂಡ ಆ ಆಹ್ವಾನವನ್ನ ಹಿಂಬದಿ ಕಾಲಿನಿಂದ ತುಳಿದು ಮುಂದಕ್ಕೆ ನಡೆಯುತ್ತೇವೆ. ಅದೇ ರೀತಿ ಹಿಂದೂಗಳು ಅನ್ನೋ ಅಖಂಡತ ಭಾಷೆಯನ್ನ ಬಳಸಿಕೊಳ್ಳಬೇಡಿ.

ಬೇಕಿದ್ದರು ಸಂಘಪರಿವಾರಕ್ಕೆ ದೇಶ ಇಲ್ಲ ಎನ್ನಿ. ಹಿಂದೂಗಳಿಗೂ ಮೀಸಲಾದ ದೇಶ ಈ ಭಾರತ. ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಹೋರಾಟದಲ್ಲಿ ಹಿಂದೂಗಳು ಭಾಗಿಯಾಗಿದ್ದರು ಅನ್ನೋದನ್ನ ನೆನಪಿಸಿಕೊಳ್ಳಿ. ಇದು ಮುಸಲ್ಮಾನರ ಪೌರತ್ವಕ್ಕೆ ಬೇಕಾದ ಹೋರಾಟ ಎಂದರೆ ನೀವೆಲ್ಲಾ ತಪ್ಪು ತಿಳಿದಿದ್ದೀರಿ. ವಾಸ್ತವದಲ್ಲಿ ಇದು ಬ್ರಾಹ್ಮಣ್ಯದ ವಿರುದ್ಧ ಹೋರಾಟ. ಮತ್ತೆ ಭಾರತವನ್ಬು ವರ್ಣಪದ್ದತಿಗೆ ಕೊಂಡೊಯ್ಯದಂತೆ ತಡೆಯುವ ಹೋರಾಟ.

ಇದು ಕೇವಲ ಮುಸಲ್ಮಾನರಿಗಾಗಿ ಮಾತ್ರ ಸೀಮಿತವಾದ ಹೋರಾಟವಲ್ಲ, ಕ್ರೈಸ್ತರಿಗೂ, ದಲಿತರಿಗೂ, ಜೈನರಿಗೂ ಬೌದ್ದರಿಗೂ, ಪೂಜಾರಿಗಳಿಗೂ, ಮೊಗವೀರರಿಗೂ, ಭಂಟರಿಗೂ ಹೀಗೆ ನೂರೆಂಟು ಜಾತಿಗಳನ್ನ ಮತ್ತೊಂದು ಗುಲಾಮಗಿರಿಯಿಂದ ತಪ್ಪಿಸುವ ಹೋರಾಟ. ಮತ್ತೊಮ್ಮೆ ಬ್ರಾಹ್ಮಣ್ಯದ ಅಂಧಕಾರಕ್ಕೆ ಭಾರತವನ್ನು ನಾವು ತಳ್ಳಲಾರೆವು. ಅದಕ್ಕೆ ಉಸಿರು ಕೊಟ್ಟಾದರೂ ಭಾರತವನ್ನು ಕಾಪಾಡುವ ಹೊಣೆಗಾರಿಕೆ ನನ್ನ ಹಾಗೂ ನಿಮ್ಮೆಲರ ಮೇಲಿದೆ. ಭಾರತವನ್ನ ಖಂಡಿತಾವಗಿಯೂ ಫ್ಯಾಸಿಸ್ಟರ ಕೈಯಿಂದ ಉಳಿಸುತ್ತೇವೆ. ಅದರಲ್ಲಿ ಯಾವುದೇ ಅನುಮಾನವೂ ಬೇಡ ನಿಮಗೆ. ಜೈ ಹಿಂದ್.

– ಆಶಿಕ್ ಮುಲ್ಕಿ, ಪತ್ರಕರ್ತ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here