ಭೀಮುನಾಯಕ ಸಮ್ಮುಖದಲ್ಲಿ ಕರವೇ ಯುವ ಶಕ್ತಿ ಜಿಲ್ಲಾಧ್ಯಕ್ಷ ಅಂಬರೇಶ ಹತ್ತಿಮನಿ ಕರವೇ ಸೇರ್ಪಡೆ

0
126

ಯಾದಗಿರಿ: ಕರವೇ ಯುವಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷ ಅಂಬರೇಶ ಹತ್ತಿಮನಿ ತಮ್ಮ ಬೆಂಬಲಿಗ ಕಾರ್ಯಕರ್ತರೊಂದಿಗೆ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ನಗರದ ಕರವೇ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಸಮ್ಮುಖದಲ್ಲಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎನ್. ಭೀಮುನಾಯಕ ಕನ್ನಡ ಪರ ಹೋರಾಟವನ್ನು ಒಗ್ಗೂಡಿ ಮಾಡಿದಲ್ಲಿ ಯಶಸ್ಸು ಲಭಿಸಲಿದೆ ಈ ನಿಟ್ಟಿನಲ್ಲಿ ನಾರಾಯಣಗೌಡರ ನೇತೃತ್ವದ ಸಂಘಟನೆಯಲ್ಲಿ ಕರವೇ ಯುವಶಕ್ತಿ ಜಿಲ್ಲಾಧ್ಯಕ್ಷರ ಸೇರ್ಪಡೆ ಕನ್ನಡ ಪರ ಸಂಘಟನೆಗಳ ಒಗ್ಗೂಡಿಸುವ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ನುಡಿದರು.

ಸಂಘಟನೆಗಳು ಹೆಚ್ಚಾದರೆ ಹೋರಾಟಕ್ಕೆ ಬಲ ಬರದೇ ಕೇವಲ ವ್ಯಕ್ತಿಗತ ತೋರಿಕೆಯ ಬಲ ಕಂಡುಬರುತ್ತದೆ ಆದರೆ ಜಿಲ್ಲೆಯ ಏಳ್ಗೆಗಾಗಿ ಎಲ್ಲರೂ ಒಂದೇ ವೇದಿಕೆಯಡಿ ಸೇರಿ ಹೋರಾಟ ನಡೆಸಿದರೆ ಸರ್ಕಾರವೇ ತಲೆ ಬಾಗಲಿದೆ ಎಂದು ಅವರು ಹೇಳಿದರು. ಕರವೇ ಸಂಘಟನೆಯಲ್ಲಿ ಕಾರ್ಯಕರ್ತರು ಪದಾಧಿಕಾರಿಗಳ ಮದ್ಯೆ ಬೇದ ಭಾವ ಇಲ್ಲ ಎಲ್ಲರೂ ಕನ್ನಡದ ಕಟ್ಟಾಳುಗಳೇ ಎಂಬುದನ್ನು ಗಮನದಲ್ಲಿರಿಸಿಕೊಂಡು ಪ್ರತಿಯೊಬ್ಬರು ಇಲ್ಲಿ ಕನ್ನಡಕ್ಕಾಗಿ ದುಡಿಯುವ ಸಂಘಟನೆಯೇ ಕರವೇ ಎಂದರು.

Contact Your\'s Advertisement; 9902492681

ಕರವೇ ಸೇರ್ಪಡೆಯಾದ ಅಮರೇಶ ಹತ್ತಿಮನಿ ಮಾತನಾಡಿ, ರಾಜ್ಯದಲ್ಲಿ ಬಲಿಷ್ಟವಾಗಿರುವ ಕರವೇ ನಾರಾಯಣಗೌಡರ ನೇತೃತ್ವದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದು ಈ ನಿಟ್ಟಿನಲ್ಲಿ ನಾವು ಕರವೇ ಸೇರಲು ಮುಂದಾಗಿದ್ದಾಗಿ ತಿಳಿಸಿದರು.

ಅಂಬರೇಶ ಹತ್ತಿಮನಿ ಅವರೊಂದಿಗೆ ಕಾರ್ಯಕರ್ತರಾದ ಈರಣ್ಣ ವಾಲಿ, ಭೀಮು ಹೊನಿಗೇರಾ, ಗವೀಂದ್ರ ತಾತಳಗೇರಾ, ಶರಣು ತಾತಳಗೇರಾ, ಮನೋಹರ್, ಸುರೇಶ, ಶರಣು ಕುರಕುಂದಿ ಸೇರಿದಂತೆ ಅನೇಕರು ಸೇರ್ಪಡೆಯಾದರು. ಎಲ್ಲರಿಗೂ ಭೀಮುನಾಯಕ ಕನ್ನಡ ಧ್ವಜ ನೀಡಿ ಸಂಘಟನೆಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಸಾಹೇಬಗೌಡ ನಾಯಕ, ಸಿದ್ದಪ್ಪ ಕುಯಿಲೂರು, ಸಾಬು ಹೋರುಂಚಾ, ರವಿ ನಾಯಕ, ಭೀಮು ಬಸವಂತಪುರ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here