ಹಂಪಿ,ವಿದ್ಯಾರಣ್ಯ: ಸುಂದರವಾಗಿ ಕೆತ್ತನೆಯ ಮೂಲಕ ಶಿಲ್ಪಕಲೆಗೆ ಜೀವ ನೀಡುತ್ತಿರುವ ಇಂದಿನ ಕಲಾವಿದರು ಜಕಣಾಚಾರಿ ವಂಶಸ್ಥರು ಎಂದು ಬಳ್ಳಾರಿ ಸಂಸದರಾದ ದೇವೇಂದ್ರಪ್ಪ ಅವರು ಹೇಳಿದರು.
ಹಂಪಿಯ ಕನ್ನ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಆಡಳಿತ ಬಳ್ಳಾರಿ ಸಂಯುಕ್ತಾಶ್ರಯದಲ್ಲಿ ಹಂಪಿಇ ಉತ್ಸವ 2020 ಅಂಗವಾಗಿ ಆಯೋಜಿಸಿದ ಶಿಲ್ಪಕಲಾ ಶಿಬಿರದಲ್ಲಿ ಮಾತನಾಡಿದರು.
ಕಾರ್ಯಕ್ರದಲ್ಲಿ ರಾಜ್ಯ ನಾನ ಕಡೆಗಳಿಂದ ಬಂದ ಕಲಾವಿದರಿಂದ ಶಿಬಿರ ಮತ್ತು ವಿದ್ಯಾರ್ಥಿಗಳಿಗೆ ಶಿಲ್ಪಕಲೆ ಬಗ್ಗೆ ಬೋಧನೆ ನಡೆಸಲಾಗುವ ಉದ್ದೇಶಕ್ಕಾಗಿ ಶಿಬಿರ ಉದ್ಘಾಟನೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಮಾತನಾಡಿ ಕುಲಪತಿಗಳೆಂದರೆ ಕನ್ನಡಿಗರು ಅಂತಹ ಕನ್ನಡಿಗರೆಲ್ಲರೂ ಸೇರಿ ಹಂಪಿ ಉತ್ಸವ ನಡೆಸಬೇಕು, ಪ್ರತಿಯೊಬ್ಬ ಕನ್ನಡಿಗನು ಕುಲಪತಿಗಳೇ ಎಂದು ಹೇಳಿದರು
ವಿಭಾಗದ ಮುಖ್ಯಸ್ಥರಾದ ಮೋಹನ್ ರಾವ್ ಪಾಂಚಾಳ್ , ಕೃಷ್ಣಗೌಡ ಮತ್ತು ವಿಭಾಗದ ವಿದ್ಯಾರ್ಥಿಗಳು ಭಾಹವಹಿಸಿದರು.