ಆರಂಭವಾಗದ ತೊಗರಿ ಖರೀದಿ ಕೇಂದ್ರದ ವಿರುಧ್ಧ ರೈತ ಸಂಘ ಆಕ್ರೋಶ

0
63

ಸುರಪುರ: ಪೂಜಾರಿ ವರ ಕೊಟ್ಟರು ದೇವರು ವರ ಕೊಡಲಿಲ್ಲ ಎನ್ನುವಂತೆ ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿ ಒಂದು ವಾರ ಸಮೀಪಿಸುತ್ತಿದ್ದರು ಇದುವರೆಗೆ ಖರೀದಿ ಕೇಂದ್ರ ಆರಂಭಗೊಳಿಸದೆ ರೈತರ ಬದುಕಿನೊಂದಿಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲಾಧಿಕಾರಿಗಳು ಕಳೆದ ಡಿಸೆಂಬರ್ ೨೬ನೇ ತಾರೀಖು ಯಾದಗಿರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ತೊಗರಿ ಖರೀದಿ ಕೇಂದ್ರ ಆರಂಭಿಸುತ್ತಿರುವುದಾಗಿ ಹೇಳಿದ್ದರು.ಆದರೆ ಆರು ದಿನಗಳಾದರು ಇದುವರೆಗೆ ಖರೀದಿ ಆರಂಭಿಸಿಲ್ಲ.ರೈತ ತಮ್ಮ ಮಾಲು ತಂದು ಖರೀದಿ ಕೇಂದ್ರದ ಮುಂದೆ ನಿತ್ಯವು ಕಾದು ಕಾದು ಹೈರಾಣಾಗುತ್ತಿದ್ದಾರೆ. ಖರೀದಿ ಕೇಂದ್ರದ ಅಧಿಕಾರಿಗಳಿಗೆ ವಿಚಾರಿಸಿದರೆ ಜಿಲ್ಲಾಧಿಕಾರಿಗಳು ಆನ್ಲೈನಲ್ಲಿ ಹೆಸರು ನೊಂದಣಿಗೆ ಪಾಸವರ್ಡ ನೀಡಿಲ್ಲ ಎಂದು ಹೇಳುತ್ತಿದ್ದಾರೆ.

Contact Your\'s Advertisement; 9902492681

ಸರಕಾರಗಳು ರೈತರಿಗೆ ಅನುಕೂಲವಾಗಲೆಂದು ಖರೀದಿ ಕೇಂದ್ರ ಆರಂಭಿಸುವುದಾಗಿ ಹೇಳಿವೆ. ಅಲ್ಪಸ್ವಲ್ಪ ಬೆಳೆದ ಬೆಳೆಗೆ ಒಂದಿಷ್ಟು ಬೆಲೆ ಸಿಕ್ಕರೆ ಸಾಲುಸೂಲ ತೀರಿಸಬಹುದೆಂದು ಕಾಯುತ್ತಿರುವ ರೈತರಿಗೆ ಅಧಿಕಾರಿಗಳ ಈ ನಡೆಯಿಂದ ತೀವ್ರ ಬೇಸರವುಂಟಾಗಿದೆ.ಕೂಡಲೆ ಎಲ್ಲೆಡೆ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಇಲ್ಲವಾದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ,ಸಂಘಟನಾ ಕಾರ್ಯದರ್ಶಿ ರಾಮಯ್ಯ ಆಲ್ಹಾಳ,ರಾಮನಗೌಡ ಗೂಗಲ್,ಮಲ್ಲನಗೌಡ ಗೌಡಗೇರಿ,ರಫೀಕ್ ಸುರಪುರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here