ಅರುಂಧತಿ ಮಹಾವಿದ್ಯಾಲಯದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ

0
74

ಸುರಪುರ: ಕೇವಲ ತನ್ನ ಹದಿನೆಳನೆ ವಯಸ್ಸಿನಲ್ಲಿಯೆ ದೇಶದ ಮೊದಲ ಮಹಿಳಾ ಶಿಕ್ಷಕಯಿಯಾಗಿ ಮಹಿಳೆಯರಿಗೆ ಅಕ್ಷರ ಕಲಿಸಿದ ಮಹಾತಾಯಿ ಸಾವಿತ್ರಿಬಾಯಿ ಫುಲೆಯವರಾಗಿದ್ದಾರೆ ಎಂದು ಚಿಂತಕ ಮೂರ್ತಿ ಬೊಮ್ಮನಹಳ್ಳಿ ಮಾತನಾಡಿದರು.

ನಗರದ ಅರುಂಧತಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆಯವರ ಜಯಂತಿಯಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ, ೧೮೩೧ರ ಜನೆವರಿ ೩ ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಸಾನೆಗಾಂವ್‌ದಲ್ಲಿ ಜನಸಿದ ಫುಲೆಯವರು ಕೇವಲ ಎಂಟನೆ ವರ್ಷಕ್ಕೆ ಬಾಲ್ಯವಿವಾಹವಾದರು. ಅವರ ಪತಿ ಜ್ಯೋತಿಬಾ ಫುಲೆಯವರು ಒಬ್ಬ ಒಳ್ಳೆಯ ವಿಚಾರವಂತರಾಗಿದ್ದರು. ಅವರ ಸಹಕಾರದಲ್ಲಿ ಅಕ್ಷರ ಕಲಿತ ಸಾವಿತ್ರಿಬಾಯಿ ಫುಲೆಯವರು ಬದುಕಿನಲ್ಲಿ ಅನೇಕ ನೋವು ಅವಮಾನಗಳನ್ನು ಅನುಭವಿಸಿದವರು.ತಮ್ಮ ಹದಿನೆಳನೆ ವಯಸ್ಸಿನಲ್ಲಿ ಶಿಕ್ಷಕಿಯಾಗಿ ನೇಮಕಗೊಂಡು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು. ಒಬ್ಬ ಉತ್ತಮ ಸಂಘಟಕಿ,ಸಮಾಜದಲ್ಲಿನ ಅನಿಷ್ಟ ಪದ್ಧತಿಗಳಾದ ಸತಿಸಹಗಮನದಂತಹ ಮೌಢ್ಯಾಚರಣೆಗಳ ನಿವಾರಣೆಗೆ ಶ್ರಮಿಸಿದವರು.ಅಂದು ಮಹಿಳೆಯರ ಶಿಕ್ಷಣಕ್ಕೆ ಅವರು ಹಾಕಿದ ಅಡಿಪಾಯದಲ್ಲಿ ಇಂದಿನ ಮಹಿಳೆಯರು ಸುಶಿಕ್ಷಿತರಾಗಲು ಕಾರಣವಾಗಿದೆ. ಅಂತಹ ಮಹಾನ್ ಚೇತನರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ಮಲಾ ಬಿರಾದಾರವರು ಮಾತನಾಡಿ,ಇಂದಿನ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲೂ ಮೇಲೆ ಬರುತ್ತಿದ್ದಾರೆ.ನಮಗೆ ಹುಲಿ ಸಿಂಹಗಳ ಕಂಡರೆ ಭಯಪಡುವುದಿಲ್ಲ ಆದರೆ ಕೆಲವೊಮ್ಮೆ ಪುರುಷರನ್ನು ಕಂಡು ಹೆದರುವು ಪರಿಸ್ಥಿತಿ ಇಂದು ನಿರ್ಮಾಣವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ ಇಂತಹದ್ದನ್ನು ಮೆಟ್ಟಿ ನಿಂತು ಮಹಿಳೆಗೆ ಶಿಕ್ಷಣ ಕೊಟ್ಟ ಸಾವಿತ್ರಿಬಾಯಿ ಫುಲೆಯವರ ಸಾಧನೆ ದೊಡ್ಡದು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಸಾವಿತ್ರಿಬಾಯಿ ಫುಲೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಾಂತಗೌಡ ಪಾಟೀಲ,ರಾಮಚಂದ್ರ ನಾಯಕ,ವಿಜಯಕುಮಾರ ಬಣಗಾರ,ಲಕ್ಷ್ಮೀ,ಯಂಕಮ್ಮ ದೊರೆ ಸೇರಿದಂತೆ ವಿದ್ಯಾರ್ಥಿಗಳಿದ್ದರು,ಸಿದ್ದಯ್ಯ ಸ್ಥಾವರಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸರಕಾರಿ ಪದವಿ ಮಹಾವಿದ್ಯಾಲಯ: ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಾವಿತ್ರಿಬಾಯಿ ಫುಲೆಯವರ ೧೮೯ನೇ ಜಯಂತಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಉಪನ್ಯಾಸಕ ಬಲಭೀಮದೇಸಾಯಿ ಹಾಗು ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ವೆಂಕೋಬ ಬಿರೆದಾರ ಮಾತನಾಡಿದರು.ಕಾರ್ಯಕ್ರಮದಲ್ಲಿ ಭೀಮಣ್ಣ ಮಾಲಿಪಾಟೀಲ್,ಸಿದ್ದಪ್ಪ ದಿಗ್ಗಿ,ಪೆದ್ದಪ್ಪ ನಾಯಕ,ಗುರುರಾಜ ನಾಗಲೇಖರ,ಬಸವರಾಜ ನಡಕೂರು,ವೆಂಕಟೇಶ ಗೌಡ,ಶಾಂತು ನಾಯಕ,ಮಾನಪ್ಪ,ಚಂದ್ರಮಪ್ಪ ನಾಯಕ ಉಪಸ್ಥಿತರಿದ್ದರು.ವಿದ್ಯಾರ್ಥಿ ವೆಂಕಟೇಶ ಅಮ್ಮಾಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರೀಯದರ್ಶಿನಿ ಮಹಾವಿದ್ಯಾಲಯ ರಂಗಂಪೇಟೆ: ನಗರದ ರಂಗಂಪೇಟೆಯ ಪ್ರೀಯದರ್ಶಿನಿ ಮಹಾವಿದ್ಯಾಲಯದಲ್ಲಿ ಸಾವಿತ್ರಿಬಾಯಿ ಫುಲೆಯವರ ಜಯಂತಿ ಆಚರಿಸಲಾಯಿತು.ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪರಶುರಾಮ ಚಾಮನಾಳ,ಮಲ್ಲು ಬಾದ್ಯಾಪುರ,ಮೌನೇಶ ಹಾವಿನಾಳ,ರಮೇಶ ಪತ್ತೆಪುರ,ಶರಣು ಮುಡಬೂಳ,ಬಿ.ಜಿ.ನಾಯಕ,ಶ್ರೀದೇವಿ ಬೋಡಾ,ಹೀನಾ ಚೌದರಿ,ಸಹನಾ ಮುರಾದ್,ಕರೆಣ್ಣ ದೇವಾಪುರ,ತಬಸುಮಾ,ಶರಣು ಆಲ್ದಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here