ಸಂಗೀತ ಎಲ್ಲಾ ಭಾಷೆಗಳಿಗಿಂತಲೂ ಮಿಗಿಲಾದ ಭಾಷೆಯಾಗಿದೆ: ರಾಘವೇಂದ್ರ ಗೆದ್ದಲಮರಿ

0
41

ಸುರಪುರ: ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ ಆದರೆ ಎಲ್ಲಾ ಭಾಷೆಗಳನ್ನು ಮನುಷ್ಯ ಕಲಿಯಲು ಸಾಧ್ಯವಿಲ್ಲ.ಆದರೆ ಸಂಗೀತವೆಂಬ ಭಾಷೆಯೊಂದೆ ಎಲ್ಲರಿಗೂ ಕಲಿಯಲು ಸಾಧ್ಯವಿದೆ.ಸಂಗೀತ ಜಗತ್ತಿನ ಎಲ್ಲಾ ಭಾಷೆಗಳಿಗಿಂತಲೂ ಮಿಗಿಲಾದ ಭಾಷೆಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮುಖಂಡ ರಾಘವೇಂದ್ರ ಗೆದ್ದಲಮರಿ ಮಾತನಾಡಿದರು.

ನಗರದ ರಂಗಂಪೇಟೆಯ ಮರಗಮ್ಮ ದೇವಸ್ಥಾನದ ಬಳಿ ನೂತನವಾಗಿ ಆರಂಭಿಸಲಾದ ಶ್ರೀಗುರು ಸಂಗೀತ ಪಾಠ ಶಾಲೆಯನ್ನು ಉದ್ಘಾಟಿಸಿ ಮಾತನಾಡಿ,ಮನುಷ್ಯನಿಗೆ ಸಂಗೀತವೆಂಬುದು ಮನೋಲ್ಲಾಸ ನಿಡುವ ಅತ್ಯಮೂಲ್ಯ ಸಾಧನವಾಗಿದೆ.ಸಂಗೀತಕ್ಕೆ ಎಲ್ಲಾ ನೋವು ನಲಿವುಗಳನ್ನು ಮರೆಸುವ ಶಕ್ತಿಯಿದೆ.ಇಂತಹ ಅಮೂಲ್ಯವಾದ ಸಂಗೀತ ಪಾಠಶಾಲೆಯನ್ನು ರಂಗಂಪೇಟೆಯಲ್ಲಿ ಆರಂಭಿಸಿರುವುದು ಎಲ್ಲರಿಗೂ ಅನುಕೂಲಕರವಾಗಿದೆ ಎಂದರು.

Contact Your\'s Advertisement; 9902492681

ಸಂಗೀತ ಶಿಕ್ಷಕ ಬಸವರಾಜ ರುಮಾಲ ಮಾತನಾಡಿ,ಮಕ್ಕಳ ಉತ್ತಮವಾದ ಬೆಳವಣಿಗೆಗೆ ಸಂಗೀತ ಸಾಧನೆ ಅವಶ್ಯವಾಗಿದೆ.ಇದರಿಂದ ಮಗುವಿನ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಜೊತೆಗೆ ಮಕ್ಕಳಲ್ಲಿ ಉತ್ತಮವಾದ ಪ್ರತಿಭೆ ಬೆಳೆಸಲು ಸಾಧ್ಯವಿದೆ.ಆದ್ದರಿಂದ ಎಲ್ಲರು ಮಕ್ಕಳಿಗೆ ಸಂಗೀತ ಕಲಿಸುವತ್ತ ಗಮನಹರಿಸುವುದು ಅವಶ್ಯವಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಪಂಡೀತ ಪುಟ್ಟರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಕರವೇ ತಾಲೂಕು ಕಾರ್ಯಾಧ್ಯಕ್ಷ ನಿಂಗಪ್ಪ ಬಿಜಾಸಪುರ,ಸಂಗೀತ ಶಿಕ್ಷಕರಾದ ಚಂದ್ರಹಾಸ ಮಿಠ್ಠಾ,ವಿರೇಶ ರುಮಾಲ,ಮಹ್ಮದಹುಸೇನ್ ಶಕಿ,ಶಿವಲಿಂಗಪ್ಪ ಸುರಪುರ,ಚೆನ್ನವೀರಯ್ಯಸ್ವಾಮಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here