ಜನಸ್ಪಂದನ, ಕಂದಾಯ, ಪಿಂಚಣಿ ಅದಾಲತ: ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ಸರ್ಕಾರಿ ಸೌಲಭ್ಯ

0
93

ಆಳಂದ: ತಾಲೂಕಿನ ೧೮೮ ಗ್ರಾಮಗಳಲ್ಲಿನ ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ಸಂಧ್ಯಾ ಸುರಕ್ಷಾ, ವಿಧವಾ, ವೃದ್ಧಾಪ್ಯ, ಅಂಗವಿಕಲ ಸೇರಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಹಸೀಲ್ದಾರ ದಯಾನಂದ ಪಾಟೀಲ ಭರವಸೆ ನೀಡಿದರು.

ತಾಲೂಕಿನ ನರೋಣಾ ವಲಯದ ಬೋಧನ ಗ್ರಾಪಂ ಕಚೇರಿಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಜನಸ್ಪಂದನ, ಕಂದಾಯ ಅದಾಲತ, ಪಿಂಚಣಿ ಅದಾಲತ ಜಂಟಿಯಾಗಿ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಜನಸಾಮಾನ್ಯರು ತಮ್ಮ ಕೆಲಸ ತೆಗೆದುಕೊಂಡು ಸರ್ಕಾರಿ ಕಚೇರಿಗಳಿಗೆ ಬಂದರೆ ಹಾಜರಿದ್ದ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕು. ವಿವಿಧ ಇಲಾಖೆಗಳಿಂದ ದೊರೆಯುವ ಸರ್ಕಾರಿ ಸೌಲಭ್ಯಗಳ ಅರ್ಹರಿಗೆ ತಲುಪಿಸಲು ಪರಸ್ಪರ ಸಹಕಾರ ನೀಡಬೇಕು ಎಂದರು.  ಸಾಕಷ್ಟು ಪಹಣಿಯ ಲೋಪದೋಷಗಳಿಂದ ಕೂಡಿದ್ದರಿಂದ ಸರ್ಕಾರ ಕಂದಾಯ ಅದಾಲತನಿಂದ ಸರಿಪಡಿಸಲಾಗುತ್ತಿದೆ. ಅಗತ್ಯ ದಾಖ ನೀಡಿ ಪಹಣಿಯಲ್ಲಿರುವ ಹೆಸರು, ಅಡ್ಡ ಹೆಸರು ಹೀಗೆ ತಪ್ಪುಗಳಾಗಿದ್ದರೆ ಅರ್ಜಿ ಸಲ್ಲಿಸಿ ಸರಿಪಡಿಸಕೊಳ್ಳಬೇಕು ಎಂದರು.

ಸರ್ಕಾರ ನೀಡುವ ಸೌಲಭ್ಯಗಳೊಂದಿಗೆ ನಾಗರಿಕರು ಸಹ ಸಾಮಾಜಿಕ ಜವಾಬ್ದಾರಿ ಅರಿತುಕೊಂಡು ಕುಡಿಯುವ ನೀರು ಹಿತಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರ ಮನೆಯಲ್ಲಿ ಶೌಚಾಲಯ ಕಟ್ಟಿಕೊಂಡು ಮನೆಯ ಮರೆಯಾದೆ ಹಾಗೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗಿಡಮರ ಬೆಳಸಿ ಪರಿಸವರನ್ನು ಕಾಪಾಡಬೇಕು. ಪ್ಲಾಸ್ಟಿಕ್ ಮುಕ್ತಗೊಳಿಸಲು ಎಲ್ಲರು ಪ್ರಯತ್ನಿಸಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗಿ ಸರಾಯಿ ಗುಟ್ಕಾ ಮಾದಕ ವ್ಯಸನಕ್ಕೆ ಬಲಿಯಾದೆ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಹೀಗೆ ಜನರ ಯಾವುದೇ ಸಮಸ್ಯೆಗಳಿದ್ದರೆ ಮುಷ್ಕರಕ್ಕೆ ಮುಂದಾಗುವ ಮೊದಲು ಸಂಬಂಧಿತ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬೇಕು. ಸಾಧ್ಯವಾಗದಿದ್ದಲ್ಲಿ ತಹಸೀಲ್ದಾರರಿಗೆ ಸಂಪರ್ಕಿಸಿ ಜನಪರ ಮುಷ್ಕರ ಬೇಡ ಸಂಬಂಧಿತ ಇಲಾಖೆಗೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು. ತಾಪಂ ಸದಸ್ಯ ಲಕ್ಕಪತಿ ಎಸ್. ಸಿಂU ಅವರು, ಗ್ರಾಮದಲ್ಲಿ ಸಾಮೂಹಿಕ ಮಹಿಳಾ ಶೌಚಾಲಯ, ಹಳೆಯ ವಿದ್ಯುತ್ ಕಂಬ ತೆರವು ಕೈಗೊಳ್ಳಬೇಕು. ಹೊಸ ಅರ್ಜಿದಾರರಿಗೆ ರೇಷನ್ ಕಾರ್ಡ್ ವಿತರಣೆ, ಆಧಾರ ತಿದ್ದುಪಡಿ ಸರಳೀಕರಣ ಹಾಗೂ ವಯಷ್ಕರರಿಗೆ ಪಿಂಚಣಿ ಮಂಜೂರಾತಿ ತ್ವರಿತಗತಿ, ನೀರಿನ ಸಮಸ್ಯೆ ನಿವಾರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಕ್ಷೇಮಲಿಂಗಪ್ಪ ದಳಪತಿ, ಬಸಯ್ಯ ಎಂ. ಮಠಪತಿ, ಜಗನಾಥ ಪಾಟೀಲ, ಪ್ರಕಾಶ ಸಿ. ನರೋಣೆ, ಶ್ರೀಮಂತ ಸಿಂಗೆ, ಬಾಬುರಾವ್ ನರೋಣೆ ಉಪಸ್ಥಿತರಿದ್ದು ಗ್ರಾಮೀಣ ನೀರು ಸರಬರಾಜು ಎಇಇ ಚಂದ್ರಮೌಳಿ, ತೋಟಗಾರಿಕೆ ಸಹಾಯಕ ಅಧಿಕಾರಿ ಶ್ರೀಕಾಂತ ರಾಠೋಡ, ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ, ಕೈಗಾರಿಕೆ ಇಲಾಖೆ ಜಾಫರ್ ಅಲಿ, ಅರಣ್ಯ ಇಲಾಖೆಯ ಸಂತೋಷಕುಮಾರ, ಪಶು ಇಲಾಖೆ ಬಸವರಾಜ, ತಾಪಂ ಸಿಬ್ಬಂದಿ ಸಂತೋಷ ಪಟ್ಟಣಕರ ಇತರರು ಪಾಲ್ಗೊಂಡಿದ್ರು.

ಈ ವೇಳೆ ಕಂದಾಯ ಅದಾಲತ ೨, ರಸ್ತೆ, ನೀರು, ವಿದ್ಯುತ್ ಹೀಗೆ ಜನಸ್ಪಂದನಕ್ಕೆ ಸಂಬಂಧಿತ ೫ ಮತ್ತು ಪಿಂಚಣಿ ೩ ಅರ್ಜಿ ಸಲ್ಲಿಕೆಯಾದರಿದ್ದಂದ ಸ್ಥಳದಲ್ಲೇ ಇತ್ಯರ್ಥ ಪಡಿಸುವಂತೆ ತಹಸೀಲ್ದಾರರು ಸೂಚಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here