ಅಕ್ರಮ ಮರಳು ಅಡ್ಡೆ ಮೇಲೆ ಎಸ್.ಪಿ ದಾಳಿ ಕೋಟ್ಯಾಂತರ ಮೂಲ್ಯದ ಮರಳು ಜಪ್ತಿ

0
103

ಸುರಪುರ: ತಾಲೂಕಿನ ಹೆಮ್ಮಡಗಿ, ಸೂಗೂರು, ಗ್ರಾಮಗಳಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ೧ ಕೋಟಿಗೂ ಅಧಿಕ ಮೌಲ್ಯದ ಮರಳನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿಯೊಂದಿಗೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಋಷಿಕೇಶ ಭಗವಾನ ಸೋನವಣೆ ಸ್ಥಳಗಳ ಮೇಲೆ ದಾಳಿ ನಡೆಸಿದರು.

ತಾಲೂಕಿನಲ್ಲಿ ಅನೇಕ ದಿನಗಳಿಂದ ಅಕ್ರಮ ಮರಳು ದಂದೆಯ ವಿಚಾರವು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿತ್ತು, ಆದರೂ ಕೂಡ ಇದುವರೆಗೆ ಅಧಿಕಾರಿಗಳು ಯಾವುದೆ ಕ್ರಮ ಜರುಗಿಸದ ಬಗ್ಗೆ ಜನರು ಮಾತಾಡಿಕೊಳ್ಳುವಂತಾಗಿತ್ತು. ಕೊನೆಗೂ ಅಕ್ರಮ ಮರಳು ದಂಧೆಯ ಈ ವಿಷಯವನ್ನು ಎಸ್.ಪಿಯವರು ಗಂಭೀರವಾಗಿ ಪರಿಗಣಿಸಿ ಅವರೆ ಖುದ್ದಾಗಿ ಹೆಮ್ಮಡಗಿ ಸೂಗುರು ಗ್ರಾಮಗಳಿಗೆ ತೆರಳಿ ಅಕ್ರಮವಾಗಿ ದಾಸ್ತಾನು ಮಾಡಿದ ಸ್ಥಳಗಳ ಮೇಲೆ ದಾಳಿ ನಡೆಸಿ ಸುಮಾರು ೩೨೫ ಟಿಪ್ಪರಗಳಷ್ಟು ಮರಳನ್ನು ಜಪ್ತಿ ಮಾಡಿದ್ದಾರೆ.

Contact Your\'s Advertisement; 9902492681

ಮರಳಿನ ಅಂದಾಜು ಮೌಲ್ಯವು ೧ ಕೋಟಿಗೂ ಅಧಿಕವಾಗಬಹುದೆಂದು ಅಂದಾಜಿಸಲಾಗಿದೆ. ಸದ್ಯ ಅಕ್ರಮ ಮರಳು ಜಪ್ತಿ ಮಾಡಿದ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಹೆಮ್ಮಡಗಿ ಗ್ರಾಮದಲ್ಲಿನ ಜಪ್ತಿಯ ಕುರಿತು ಪ್ರಕರಣ ದಾಖಲಿಸಲಾಗಿದ್ದು,ಸೂಗುರು ಗ್ರಾಮದಲ್ಲಿ ಜಪ್ತಿ ಮಾಡಿದ ಮರಳಿನ ಮೊತ್ತದ ಅಂದಾಜು ಪರಿಗಣಿಸಿ ನಂತರದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ದಾಳಿಯಲ್ಲಿದ್ದ ಸುರಪುರ ಉಪ ವಿಭಾಗದ ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಮಾಹಿತಿ ನೀಡಿದ್ದಾರೆ.

ದಾಳಿಯ ಸಮಯದಲ್ಲಿ ಸಹಾಯಕ ಆಯುಕ್ತ ಶಂಕರಲಿಂಗ ಸೋಮಾನಾಳ, ತಹಶಿಲ್ದಾರ ನಿಂಗಣ್ಣ ಬಿರಾದರ,ಪಿ.ಐ ಆನಂದರಾವ್,ಕಂದಾಯ ನಿರೀಕ್ಷಕ ಗುರುಬಸಪ್ಪ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here