ರಾಯಚೂರು: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯವಾದ (JNU) ನಲ್ಲಿ ಫ್ಯಾಸಿಸ್ಟ್ ಹಿನ್ನೆಲೆಯ ABVP ಸಂಘಟನೆಗೆ ಸೇರಿದ ಗುಂಡಾಗಳು ನಿನ್ನೆ ಸಂಜೆಯ ಸುಮಾರಿಗೆ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಕ್ಯಾಂಪಸ್ ಸೇರಿದಂತೆ ವಿದ್ಯಾರ್ಥಿಗಳಿರುವ ಹಾಸ್ಟೆಲ್ ಮತ್ತು ಕೊಠಿಡಿಯೊಳಗೆ ನುಗ್ಗಿ ಕಬ್ಬಿಣದ ರಾಡ್, ಸಲಾಕೆ ಮತ್ತು ಇತರ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಇದು ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕ ಸಮುದಾಯದ ಮೇಲೆ ಮಾಡಿದ ದೊಡ್ಡ ದಾಳಿಯಾಗಿದೆ ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS) ಸಂಘಟನೆಗಳು ಜಂಟಿಯಾಗಿ ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ನಡೆದ ಹೋರಾಟವನ್ನು ಉದ್ದೇಶಿಸಿ SFI ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಭಾರಿ ಸಂಖ್ಯೆಯ ಎಬಿವಿಪಿ ಸಂಘಟನೆಗೆ ಸೇರಿದ ಗುಂಡಾಗಳು ಮತ್ತು ಹೊರಗಿನಿಂದ ಬಂದ ಕಿಡಿಗೇಡಿಗಳು ವಿದ್ಯಾರ್ಥಿ ಮುಖಂಡರನ್ನು ಮತ್ತು ಜನಪರವಾಗಿ ಆಲೋಚಿಸುವ ಪ್ರಾಧ್ಯಾಪಕರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಇವರ ಮೇಲೆ ದಾಳಿ ನಡೆಸಿದ್ದು. ದಾಳಿಯನ್ನು ತಡೆಯುವಲ್ಲಿ ವಿ.ವಿ ಯ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಯು ಸಂಪೂರ್ಣವಾಗಿ ವಿಫಲವಾಗಿದೆ. ಭಾರಿ ಭದ್ರತೆಯ ಮಧ್ಯೆ ಯೂ ಈ ದಾಳಿ ಆಗಿದೆ ಅಂದರೆ ಇದಕ್ಕೆ ವಿ.ವಿ ಆಡಳಿತ ಮಂಡಳಿಯ ಮತ್ತು ಭದ್ರತಾ ಸಿಬ್ಬಂದಿಗಳು ಸೇರಿದಂತೆ ಸ್ಥಳದಲ್ಲಿ ಇದ್ದ ಮೌನ ದಾರಿ ಪೋಲೀಸರ ಪರೋಕ್ಷ ಬೆಂಬಲ ಮತ್ತು ಸಹಕಾರ ಇರುವ ಅಂಶ ನಮಗೆ ಎದ್ದು ಕಾಣುತ್ತದೆ ಎಂದರು.
ಕಳೆದ ಎರಡು ತಿಂಗಳಿನಿಂದ ವಿ.ವಿ ಹಾಸ್ಟೆಲ್ ಶುಲ್ಕ ಹೆಚ್ಚಳ ಹಾಗೂ ವಿ.ವಿ ಸುಧಾರಣೆ ಗಾಗಿ ವಿದ್ಯಾರ್ಥಿ ಗಳು ಮಾಡುತ್ತಿರುವ ಹೋರಾಟವನ್ನು ಗುರಿಯಾಗಿಸಿಕೊಂಡು ಹಾಗೂ ಅದನ್ನು ಹತ್ತಿಕ್ಕಲು ಮತ್ತು ವಿದ್ಯಾರ್ಥಿಗಳ ಜನಪರ ವಾದ ಧ್ವನಿಯ ಹೋರಾಟಗಳನ್ನು ದಾರಿ ತಪ್ಪಿಸಲು ಭಾಜಪದ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಾಡಿಸಿರುವ ವ್ಯವಸ್ಥಿತ ಸಂಚಾಗಿದೆ. ಕೂಡಲೇ ದಾಳಿ ಮಾಡಿದ ಗುಂಡಾಗಳನ್ನು ಮತ್ತು ಅದರ ಹಿಂದಿರುವ ಎಲ್ಲಾ ಶಕ್ತಿ ಗಳನ್ನು ಬಂಧಿಸಿ ಸೂಕ್ತ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಮತ್ತು ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿ ಮುಖಂಡರಿಗೆ ಹಾಗೂ ಪ್ರಾಧ್ಯಾಪಕರಿಗೆ ಸೂಕ್ತ ಭದ್ರತೆಯನ್ನು ನೀಡಿ ಇಂತಹ ಗುಂಡಾಗಿರಿ ಮಾಡುವ ABVP ಸಂಘಟನೆ ಯನ್ನು ನಿಷೇಧ ಮಾಡುವುದರ ಜೊತೆಗೆ ದೇಶದ ಜ್ವಲಂತ ವಿದ್ಯಾರ್ಥಿ ಸಮಸ್ಯೆ ಗಳ ಪರಿಹಾರಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ಇಡೀ ದೇಶವ್ಯಾಪಿ ವಿದ್ಯಾರ್ಥಿಗಳು ಬೀದಿಗಿಳಿದು ವಿದ್ಯಾರ್ಥಿ ವಿರೋಧಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ AIDSO ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ, KVSನ ಲಕ್ಷ್ಮಣ್ ಮಂಡಲಗೇರಾ, AIDYO ನ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೆಕಲ್, ಕರ್ನಾಟಕ ಜನಶಕ್ತಿಯ ಕುಮಾರ ಸಮತಳ ಮಾತನಾಡಿದರು.
ಈ ಸಂಧರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ದೀಲ್ ಶಾದ್, ಉಮೇಶ ನಾಯಕ, ಪೀರ್ ಸಾಬ್, ಶಶಿ ಕಲಾ, ಸೇರಿದಂತೆ ಅನೇಕರಿದ್ದರು.