ಮಿಂಚಿನ ನೊಂದಣಿಯ ಮೂಲಕ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿ: ಬಿಇಒ ನಾಗರತ್ನ ಓಲೇಕಾರ

0
38

ಸುರಪುರ: ಭಾರತದ ಚುನಾವಣಾ ಆಯೋಗವು ಹದಿನೆಂಟು ವರ್ಷ ತುಂಬಿರುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಒಳ್ಳೆಯ ಅವಕಾಶವನ್ನು ನೀಡಿದ್ದು ಜನತೆ ಇದರ ಸದುಪಯೋಗ ಮಾಡಿಕೊಳ್ಳುವಂತೆ ಕ್ಷೆತ್ರಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ ಕರೆ ನೀಡಿದರು.

ನಗರದ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ನಗರದಲ್ಲಿ ನಡೆಸಲಾದ ಪ್ರಭಾತ ಪೇರಿಯಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡು ಮಾತನಾಡಿ,ಮತದಾನ ಎಂಬುದು ಪ್ರತಿಯೊಬ್ಬರ ಹಕ್ಕಾಗಿದ್ದು,ಇದಕ್ಕಾಗಿ ಎಲ್ಲರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಅವಶ್ಯಕವಾಗಿದೆ. ಅದಕ್ಕಾಗಿ ಈಗ ಮಿಂಚಿನ ನೊಂದಣಿಗೆ ಅವಕಾಶವಿದ್ದು ಆಯಾ ಮತದಾನ ಕೇಂದ್ರಗಳ ವ್ಯಾಪ್ತಿಯ ಬಿಎಲ್‍ಒ ಗಳ ಬಳಿಯಲ್ಲಿ ಅರ್ಜಿ ಸಲ್ಲಿಸಿ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಿದರು.

Contact Your\'s Advertisement; 9902492681

ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಿಂಚಿನ ನೊಂದಣಿಯ ಕುರಿತು ಜಾಗೃತಿ ಮೂಡಿಸಿದರು.ಪ್ರಭಾತ ಪೇರಿಯಲ್ಲಿ ಬಾಲಕಿಯ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಸವರಾಜ ಗೋಗಿ, ಸಹ ಶಿಕ್ಷಕರಾದ ಆರ್.ಕೆ.ಕೋಡಿಹಾಳ,ಅನಂತಮೂರ್ತಿ ಡಬೀರ,ಹಸೀನಾ ಬಾನು,ವಿಶ್ವರಾಜ ಪುರಾಣಿಕಮಠ,ಅರವಿಂದ ಪಾಟೀಲ,ನಿಂಗಣ್ಣ ಪೂಜಾರಿ,ವೆಂಕಟಲಕ್ಷ್ಮೀ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here