ಸುರಪುರ: ಪತ್ರಕರ್ತರೆಂದರೆ ಅನೇಕರು ಬೇರೆ ಬೇರೆ ರೀತಿಯಾಗಿ ಯೋಚಿಸುತ್ತಾರೆ.ಆದರೆ ಅವರು ಯಾವುದೇ ಲಾಭದ ಫಲಾಪೇಕ್ಷೆಯಿರದೆ ಸಮಾಜಕ್ಕಾಗಿ ದುಡಿಯುವ ಮೇರುಗುಣದವರಾಗಿದ್ದಾರೆ ಎಂದು ಲಕ್ಷ್ಮೀಪುರ ಶ್ರೀಗಿರಿ ಮಠದ ಶ್ರೀ ಬಸವಲಿಂಗ ದೇವರು ಮಾತನಾಡಿದರು.
ನಗರದ ಮಹಾತ್ಮ ಗಾಂಧಿ ವೃತ್ತದ ಬಳಿ ನೂತನವಾಗಿ ಆರಂಭಿಸಲಾದ ತಾಲೂಕು ಪತ್ರಕರ್ತರ ಸಂಘದ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ,ತಾಲೂಕಿನಲ್ಲಿ ಪತ್ರಕರ್ತರ ಕಚೇರಿಯಿಲ್ಲದೆ ಕೊರತೆಯಾಗಿತ್ತು.ಅದನ್ನು ಇಂದು ಇಲ್ಲಿಯ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಪದಾಧಿಕಾರಿಗಳು ನೀಗಿಸಿದ್ದಾರೆ.ಸಂಘವು ಯಾವುದೇ ಅಡೆತಡೆಗಳಿಲ್ಲದೆ ಸಮಾಜಕ್ಕೆ ಬೆಳಕಾಗಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದ ಸುರಪುರ ವಿಭಾಗದ ಪೊಲೀಸ್ ಉಪ- ಅಧಿಕ್ಷಕ ಶಿವನಗೌಡ ಪಾಟೀಲ ಮಾತನಾಡಿ,ಇಂದು ಎಲ್ಲದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ,ಇದಕ್ಕೆ ಮಾದ್ಯಮವು ಹೊರತಾಗಿಲ್ಲ ಎನ್ನುವಂತೆ ಜನತೆ ಮಾತನಾಡಿಕೊಳ್ಳುವಂತಾಗಿದೆ.ಸುದ್ದಿ ಮಾಡುವವರು ಅರೆಬರೆ ಸುದ್ದಿ ತಿಳಿದು ಎಲ್ಲವೂ ನೋಡಿದವರಂತೆ ಸುದ್ದಿ ಮಾಡುವ ಮೂಲಕ ಸಮಾಜದಲ್ಲಿ ಬಿರುಕು ಮೂಡಿಸುವಂತಹ ವರದಿಗಾರರು ಇದ್ದಾರೆ.ನೈಜ ಸುದ್ದಿಯನ್ನು ಬರೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಸುರಪುರ ಠಾಣೆ ಪಿಐ ಆನಂದರಾವ್ ಮಾತನಾಡಿ,ಬೇರೆ ಕಡೆಗಳಲ್ಲಿ ಒಂಬತ್ತು ವರ್ಷದ ಹಿಂದೆಯೆ ಪತ್ರಕರ್ತರ ಕಾರ್ಯಾಲಯ ಉದ್ಘಾಟಿಸಿದ್ದು ನೋಡಿದ್ದೆ ಆದರೆ ಇಲ್ಲಿ ತಡವಾಗಿಯಾದರೂ ಕಾರ್ಯಾಲಯ ಆರಂಭಿಸಿದ್ದು ಸಂತೋಷದ ಸಂಗತಿಯಾಗಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಮತಗಿ ಮಾತನಾಡಿ,ಇಂದು ಮಾದ್ಯಮಗಳೆಂದರೆ ಜನರಲ್ಲಿ ಸಹ್ಯಕರವಾದ ಭಾವನೆಯಿಲ್ಲ.ಇದಕ್ಕೆ ಕೆಲ ಮಾದ್ಯಮಗಳು ಕಾರಣವಾಗಿವೆ.ಸಮಾಜದಲ್ಲಿ ಬಿರುಕು ಮೂಡಿಸುವಂತಹ ಕೆಲಸವನ್ನು ಕೆಲವು ಮಾದ್ಯಮಗಳು ಮಾಡುವ ಮೂಲಕ ಮಾದ್ಯಮಗಳಿಗೆ ಕೆಟ್ಟ ಹೆಸರು ತರುತ್ತಿವೆ.ಸಮಾಜ ಪರವಾದ ಚಿಂತನೆಯನ್ನು ಮಾದ್ಯಮಗಳು ಹೊಂದುವುದು ಮುಖ್ಯವಾಗಿದೆ ಎಂದರು.ನಂತರ ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹಾಗು ಅಧ್ಯಕ್ಷತೆ ವಹಿಸಿದ್ದ ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಬಸವಣ್ಣ ನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ,ನಂತರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.ವೇದಿಕೆ ಮೇಲೆ ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ, ಬಿಜೆಪಿ ಮುಖಂಡ ಭಿಮಣ್ಣ ಬೇವಿನಾಳ,ಕೆಜೆಯು ಜಿಲ್ಲಾ ಗೌರವಾಧ್ಯಕ್ಷ ವೀರಣ್ಣ ಕಲಕೇರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ದೊರೆ ಇದ್ದರು,ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಧಿರೇಂದ್ರ ಕುಲಕರ್ಣಿ,ಮಲ್ಲು ಗುಳಗಿ,ಸೋಮಶೇಖರ ನರಬೋಳಿ,ಶ್ರೀಕರ ಜೊಷಿ,ಮಹಾದೇವಪ್ಪ ಬೊಮ್ಮನಹಳ್ಳಿ, ಮುರಳಿಧರ ಅಂಬುರೆ,ಪರಶುರಾಮ ಮಲ್ಲಿಬಾವಿ,ಮಲ್ಲಿಕಾರ್ಜುನ ತಳ್ಳಳ್ಳಿ,ರವಿರಾಜ ಕಂದಳ್ಳಿ,ದುರ್ಗಾಪ್ರಸಾದ ಕೆಂಭಾವಿ,ಬಸನಗೌಡ ಯಕ್ತಾಪುರ,ವಿಶ್ವನಾಥ ಮಾರನಾಳ,ಹಣಮಂತ ಹುಣಸಗಿ,ವಿರೇಶರಡ್ಡಿ ಯಾಳಗಿ,ಪುರುಷೋತ್ತಮ ದೇವತ್ಕಲ್,ರಾಘವೇಂದ್ರ ಮಾಸ್ತರ್,ಮದನಪಟೇಲ ಹಾಗು ಮುಖಂಡರಾದ ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ಮಾಳಪ್ಪ ಕಿರದಳ್ಳಿ,ಶಿವಕುಮಾರ ಪಾಣೆಗಾಂವ್,ಮರೆಪ್ಪ ಹವಲ್ದಾರ್,ವೆಂಕಟೇಶ ಭಕ್ರಿ,ಪೇದೆ ದಯಾನಂದ,ಯಲ್ಲಪ್ಪ ಚಿನ್ನಾಕಾರ,ಸಿದ್ದಯ್ಯಸ್ವಾಮಿ ಸ್ಥಾವರಮಠ,ಧರ್ಮರಾಜ ಬಡಿಗೇರ,ಅಬೀದ್ ಪಗಡಿ,ರಫೀಕ ಸುರಪುರ ಸೇರಿದಂತೆ ಅನೇಕರಿದ್ದರು.