ಕಲಬುರಗಿ: ವಿವಾದಸ್ಪದ ಸಿಎಎ ಹಾಗೂ ಎನ್.ಆರ್.ಸಿ. ಕಾಯ್ದೆ ರದ್ದು ಮಾಡುವಂತೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ ಇಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಇಂದು ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೌರತ್ವ ಕಾಯಿದೆಯಿಂದ ಎಲ್ಲ ಧರ್ಮಿಯರಿಗೆ ಅನಾನುಕೂಲವಾಗುವದು ಖಚಿತ. ಮೂಲ ಭಾರತೀಯರೆಂದು ದಾಖಲೆ ತೋರಿಸದಿದ್ದರೆ ಅಂಥವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎಂದರು.
ಎನ್.ಆರ್.ಸಿ ಮೂಲಕ ವಿದೇಶಿ ಎಂದು ಘೋಷಿಸಿ ಜನರಿಗೆ ಗುಲಾಮರಂತೆ ನಡೆಸಿಕೊಂಡು ಸರ್ಕಾರದ ಯಾವುದೇ ಸೌಲಭ್ಯ ಕೊಡದೇ ಆಳುಗಳಂತೆ ನಡೆಸಿಕೊಳ್ಳುವ ಮೂಲಕ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವದು ಹುನ್ನಾರ ಈ ಕಾಯ್ದೆ ಜಾರಿ ಹಿಂದಿರುವ ಉದ್ದೇಶವಾಗಿದೆ ಎಂದು ಆರೋಪಿಸಿದರು.
ದಿಗಂಬರರಾವ ಕಾಂಬಳ, ಶಿವಕುಮಾರ ಮದರಿ, ಮಹಾದೇವ ನಾಗನಹಳ್ಳಿ ಮತ್ತು ಮಕಬೂಲ ಪಟೇಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.