ಪೌರತ್ವ ಕಾಯ್ದೆ ಮುಂದಿನ ನಾಗರಿಕರಿಗೆ ಮಾರಕ: ಸೆಂಥಿಲ್

0
67

ಕಲಬುರಗಿ:  ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿಯೊಂದಿಗೆ ಹೊಸ ಪೌರತ್ವ ಕಾಯ್ದೆ ಜಾರಿಗೆ ಮಾಡಲು ಹೊರಟಿದೆ. ಹೊಸ ಪೌರತ್ವ ಕಾಯ್ದೆಯು ಭವಿಷ್ಯದಲ್ಲಿ ನಾಗರಿಕರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಅಭಿಪ್ರಾಯ ಪಟ್ಟರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಎ ಮತ್ತು ಎನ್ಆರ್ಸಿ ಜಾರಿಗಾಗಿ ಕೇಂದ್ರ ಎಲ್ಲಾ ರೀತಿಗಳ ತಂತ್ರ ಅನುಸರಿಸುತ್ತಿದೆ. ಸಂವಿಧಾನ ಉಳಿಯಬೇಕಾದರೆ ಎಲ್ಲರೂ ಒಂದಾಗಿ ಪೌರತ್ವ ಕಾಯ್ದೆಯನ್ನು ವಿರೋಧಿಸಬೇಕು. ಇಲ್ಲವಾದಲ್ಲಿ ಹಂತಹಂತವಾಗಿ ಸಂವಿಧಾನಕ್ಕೆ ತಿದ್ದು ಪಡೆಗಳನ್ನು ತಂದು ದೇಶದ ಜನರು ತಮ್ಮ ನಾಗರಿಕತ್ವವವನ್ನೆ ಕಳೆದುಕೊಳ್ಳುವಂತ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ಎನ್.ಆರ್.ಸಿ ಮತ್ತು ಎನ್.ಪಿ.ಎ.ಗೆ ಯಾವುದೇ ಸಂಬಧವಿಲ್ಲ ಎಂದು ಅಪ್ಪಟ ಸುಳ್ಳು ಹೇಳುತ್ತಿದ್ದಾರೆ. ಆದರೆ ಅವರ ಮಾತಿನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ನೆರೆಹಾವಳಿಹಿಂದಾಗಿ ಮನೆಗಳು, ದಾಖಲೆಗಳು ಕಳೆದುಕೊಂಡಿದ್ದಾರೆ. ಈಗ ಪೌರತ್ವ ಸಾಭಿತ ಪಡಿಸಲು ಅವರ ಹತ್ತಿರು ಯಾವುದೇ ದಾಖಲೆ ಇಲ್ಲದಂತಾಗಿದೆ. ಶಾಲಾ ವಿದ್ಯಾಥರ್ಿಳು ದಾಖಲೆಗಳೇ ನೀರಿನಲ್ಲಿ ಕೊಚ್ಚಿಹೋಗಿರುವಾಗಿ ನಾವು ಈ ದೇಶದ ನಾಗರಿಕರು ಎನ್ನುವದಕ್ಕೆ ಸಾಕ್ಷಿಯೇ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಪ್ರಾತ್ಯಕ್ಷಿಕೆಯಾಗಿ ಅಸ್ಸಾಂ ರಾಜ್ಯದಲ್ಲಿ ನಾಗರಿಕ ನೋಂದಣಿ ಕಾರ್ಯವನ್ನು ಸುಮಾರು 16 ಸಾವಿರ ಕೋಟಿ ವೆಚ್ಚಮಾಡಿ ಮಾಡಲಾಗಿದೆ. ಆದರೆ ಅಲ್ಲಿ ಸುಮಾರು 19 ಲಕ್ಷ ಜನ ಈ ದೇಶದ ನಾಗರಿಕತ್ವವನ್ನೆ ಕಳೆದುಕೊಂಡಿದ್ದಾರೆ. ಪೌರತ್ವ ಕಾನೂನು ಜಾರಿಗೆ ತರುವ ಮೊದಲು ದೇಶದಲ್ಲಿ ಚಚರ್ೆಯಾಗಬೇಕಿತ್ತು. ಜನಾಭಿಪ್ರಾಯ, ತಜ್ಞರ ಅಭಿಪ್ರಾಯ ಸೇರಿದಂತೆ ಎಲ್ಲಾ ರೀತಿಯ ಆಯಾಮಗಳ ಕುರಿತಿ ಚಚರ್ೆ ನಡೆಯಬೇಕಿತ್ತು. ಆದರೆ ಅವರು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ತಮ್ಮದೇ ರೀತಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದಾರೆ.

ಮತ್ತೋಮ್ಮೆ ಪರಿಶೀಲನೆ ಮಾಡಬೇಕು. ಈಗ ಜಾರಿಗೆ ತಂದಿರುವ ಕಾಯ್ದೆ ಹಿಂಪಡೆದು ಹಿಂದು ಪರ ಕಾಯ್ದೆ ಎನ್ನುವದು ಸುಳ್ಳು ಮಾಡಬೇಕು ಇಲ್ಲವಾದರೆ ಅದು ಹಿಂದು ಪರ ಕಾಯ್ದೆ ಯಾಗುವದರೊಂದಿಗೆ ದೇಶಕ್ಕೆ ಮಾರಕವಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ್ತಿ ಕೆ. ನೀಲಾ, ಮಹೇಶ ರಾಠೋಡ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here