ಸುರಪುರ: ಜನೆವರಿ 8 ರಂದು ಕಾರ್ಮಿಕ ಮತ್ತು ರೈತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸುರಪುರ ಬೆಂಬಲಘೋಷಿದರು.
ಮಂಗಳವಾರ ಬೆಳಿಗ್ಗೆ ನಗರದ ಡಾ:ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಮುಖಂಡರು,ದೇಶದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರ ಕಾರ್ಮಿಕರು ಮತ್ತು ರೈತರನ್ನು ಸಂಪೂರ್ಣ ಕಡೆಗಣಿಸಿ ಬಂಡವಾಳಶಾಹಿಗಳ ಸರಕಾರವಾಗಿದೆ.ಕಾರ್ಮಿಕರ ಮತ್ತು ರೈತರ ಯಾವ ಬೇಡಿಕೆಗಳಿಗೂ ಸ್ಪಂಧಿಸದೆ ನಿರ್ಲಕ್ಷ್ಯ ತೋರುವ ಮೂಲಕ ದೇಶವನ್ನು ಅಧೋಗತಿಗೆ ಕೊಂಡೊಯ್ಯುತ್ತಿದೆ. ಇದನ್ನು ಖಂಡಿಸಿ ಕಾರ್ಮಿಕ ಮತ್ತು ರೈತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಭಾರತೀಯ ಪೌರತ್ವ ಕಾಯಿದೆ ಮತ್ತು ಎನ್, ಆರ್,ಸಿ ವಿರೋಧಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟವು ಬೆಂಬಲಿಸಿ ಮುಷ್ಕರದಲ್ಲಿ ಭಾಗವಹಿಸಲಿದೆ ಎಂದು ತಿಳಿಸಿದರು.
ದೇಶದಲ್ಲಿ ಗಂಭಿರವಾದ ಸಮಸ್ಯೆಗಳಾಗಿರುವ ಜೆಎಸ್‍ಟಿ,ಬೆಲೆ ಏರಿಕೆ,ನೋಟಬ್ಯಾನ್ ನಂತಹ ಅನೇಕ ವಾಣಿಜ್ಯ ಮತ್ತು ವ್ಯಾಪಾರಕ್ಕೂ ಹೊರೆಯಾಗಿರುವ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸುವ ಈ ಹೋರಾಟಕ್ಕೆ ಎಲ್ಲಾ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಭಾಗವಹಿಸಿ ಸಹಕರಿಸಲು ತಿಳಿಸಿದರು.ಪತ್ರಿಕಾಗೋಷ್ಟಿಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುರೇಖಾ ಕುಲಕರ್ಣಿ,ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ,ಹೋರಾಟಗಾರರಾದ ನಾಗಣ್ಣ ಕಲ್ಲದೇವನಹಳ್ಳಿ,ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ,ಸಿದ್ದಯ್ಯ ಸ್ಥಾವರಮಠ,ರಾಹುಲ್ ಹುಲಿಮನಿ,ಭೀಮರಾಯ ಸಿಂಧಗೇರಿ,ಮಾಳಪ್ಪ ಕಿರದಳ್ಳಿ,ವೆಂಕಟೇಶ ಹೊಸ್ಮನಿ,ಖಲೀಲ ಅಹ್ಮದ ಅರಕೇರಿ, ರಮೇಶ ದೊರೆ ಆಲ್ದಾಳ,ಬಸ್ಸಮ್ಮ ಆಲ್ಹಾಳ,ಶಂಕರ ಬೊಮ್ಮನಹಳ್ಳಿ,ಪ್ರಕಾಶ ಆಲ್ಹಾಳ,ಮೂರ್ತಿ ಬೊಮ್ಮನಹಳ್ಳಿ,ನಸೀಮಾ ಮುದ್ನೂರ,ರಾಧಾಬಾಯಿ ಲಕ್ಷ್ಮೀಪುರ,ರಾಜು ಬೋನಾಳ,ರಫೀಕ ಸುರಪುರ,ವೆಂಕಟೇಶ ಬೇಟೆಗಾರ,ಗಂಗಾಧರ ನಾಯಕ,ಅಹ್ಮದ ಪಠಾಣ,ಚಂದಪ್ಪ ಪಂಚಮ್ ಸೇರಿದಂತೆ ಅನೇಕರಿದ್ದರು.