ವಚನಗಳು ಸಾಹಿತ್ಯ ಲೋಕಕ್ಕೆ ವಿಶೇಷ ಸಂಪತ್ತಾಗಿವೆ-ಬಸಣ್ಣ ಶರಣ

0
71

ಸುರಪುರ: ವಚನ ಸಾಹಿತ್ಯ ಯಾವುದೇ ಕಾಲ್ಪನಿಕವಾಗಿ ರಚಿಸಿ ಬೆಳಸಿದ ಸಾಹಿತ್ಯ ವಲ್ಲ. ಶರಣರು ತಮ್ಮ ಜೀವನದಲ್ಲಿ ಅನುಭವಿಸಿದ ನುಡಿಗಳೆ ಮುಂದೆ ವಚನಗಳಾಗಿ, ತತ್ವಪದಗಳಾಗಿ ವಿಶಿಷ್ಟವಾದ ಮೌಲ್ಯ ಗಳನ್ನು ಹೊತ್ತು ಜಗತ್ತಿಗೆ ಚಿರಪರಿಚಿತ ಸಾಹಿತ್ಯವಾಗಿವೆ.ವಚನಗಳು ಕನ್ನಡ ಸಾಹಿತ್ಯ ಲೋಕದ ವಿಶೇಷ ಸಂಪತ್ತಾಗಿವೆ ಎಂದು ವಾಗಣಗೇರಾದ ಬಸಣ್ಣ ಶರಣ ನುಡಿದರು.

ತಾಲೂಕಿನ ರುಕ್ಮಾಪೂರದಲ್ಲಿ ಮಹರ್ಷಿ ವಾಲ್ಮೀಕಿ ಸೋಸಿಯೊ ಲಿಗಲ್ ಎಜುಕೇಶನ್ ಸೊಸೈಟಿ ಆವರಣದಲ್ಲಿ ವಿಶ್ವಗಂಗಾ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಆಯೋಜಿಸಿದ್ದ ಸಗರನಾಡಿನ ವಚನಕಾರರು ಹಾಗೂ ಶಿವಶರಣರು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಅಂದು ಧಾರ್ಮಿಕ ಕ್ಷೇತ್ರದಲ್ಲೂ ಭೂತವಾಗಿ ನಿಂತಿದ್ದ ಅಂಧ ಶ್ರದ್ದ, ಮೂಢನಂಬಿಕೆ , ವಿರುದ್ದ ಸೆಟೆದು ನಿಂತು ತಲೆ ಎತ್ತಿ ಮರೆದು ಪ್ರಭಾವಳಿಯನ್ನು ಪಡೆದರು. ಸಾಮಾಜಿಕ ರಂಗದಲ್ಲಿ ಗಂಡು ಹೆಣ್ಣು , ಮೇಲು ಕೀಳು , ಶ್ರೇಷ್ಠ ಕನಿಷ್ಠ, ಬಡವ-ಬಲ್ಲಿದ , ಜಾತಿ-ಮತ ಎಂಬ ಬೇಧವನ್ನು ಮಾಡದೆ ನಿರಂತರವಾಗಿ ಸಮಾಜದ ಏಳಿಗೆಗೆ ದುಡಿದು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

Contact Your\'s Advertisement; 9902492681

ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ರುಕ್ಮಾಪೂರ ಹಿರೇಮಠ ಸಂಸ್ಥಾನದ ಗುರುಶಾಂತ ಮೂರ್ತಿ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಎಷ್ಟೋ ಜನ ಹೆಣ್ಣು ಮಕ್ಕಳು ಶರಣೆಯರಾಗಿ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರು. ಹಲವಾರು ವಚನಗಳು ರಚಿಸಿ ಅನುಭವ ಮಂಪಟದಲ್ಲಿ ಪಾಲ್ಗೊಂಡು ಅನುಭವ ಪಡೆದರು.

ಸ್ವಂತ ಜನರ ಮದ್ಯ ಹೋಗಿ ಕಾಯಕದ ಭಾವನೆಗಳು ಬೆಳೆಸಿ ಕೆಟ್ಟ ನಿರ್ಣಯಗಳನ್ನು ಅಳಿಸಿ ಹಾಕಿ ಸನ್ಮಾರ್ಗಕ್ಕೆ ತರಲು ಪ್ರಯತ್ನಿಸಿದರು . ಹಾಗೇಯೆ ಜಾತಿ ಪದ್ದತಿಯಂತಹ ಅನಿಷ್ಠತೆ ವಿರುದ್ದ ಹೋರಾಡಿದರು ಎಂದು ತಿಳಿಸಿದರು.

ವೇದಿಕೆ ಮೇಲೆ ಸಗರನಾಡು ಶಿಕ್ಷಣ ಸಂಸ್ಥೆ ಪ್ರಧಾನಗುರು ಚಂದಪ್ಪ ಎಸ್. ಯಾದವ್ , ಮಹೇಶ್ ಕುಂಟೇಜ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಈರಪ್ಪ ಸಿಂಪಿ ಹಾಗೂ ಸ್ವಾಗತ ಮಹಾಂತೆಶ ಹೀರೆಮಠ ಹಾಗೂ ವಂದರ್ನಾಪಣೆ ಶರಣಪ್ಪ ಹೊಸಮನಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here