ಕಲಬುರಗಿ: ಪೌರತ್ವ ಕಾಯ್ದೆ ಬೆಂಬಲಿಸಿ ಕೇಂದ್ರ ಸರ್ಕಾರದ ನಿರ್ದಾರ ಸ್ವಾಗತಿಸಿ ಪೌರತ್ವ ಕಾಯ್ದೆ ಜಾಗೃತಿ ಅಭಿಯಾನ ಜಿಲ್ಲೆಯ ಮಠಾದೀಶರು ಸಹಸ್ರಾರು ಜನರ ನಡಿಗೆಗೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಜನಪ್ರತಿನಿದಿಗಳು ಪಕ್ಷಭೇದ ಮರೆತು ಪಾಲ್ಗೊಳ್ಳಲು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಕರೆ ನೀಡಿದ್ದಾರೆ.
ಇಂದು ನಗರದ ಕಲಾ ಮಂಡಳದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ ಇತ್ತೀಚಿಗೆ ದೇಶದ ಹಿತದೃಷ್ಟಿಯಿಂದ ದೇಶದ ಜನರ ಹಿತದೃಷ್ಟಿಯಿಂದ ದೇಶದ ಭದ್ರತ ದೃಷ್ಟಿಯಿಂದ ದೇಶದ ಯುವಜನತೆಯ ಭವಿಶ್ಯದ ದೃಷ್ಟಿಯಿಂದ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ಬೆಂಬಲಿಸಿ ಬೇಕಾದದ್ದು, ಸ್ವಾಗತಿಸಬೇಕಾದದ್ದು ನಮ್ಮ ಕರ್ತವ್ಯ, ಇದರಿಂದ ದೇಶದ ಯಾರಿಗೂ ಕೂಡಾ ತೊಂದರೆ ಇಲ್ಲ ಎಂದು ತಿಳಿಸಿದರು.
ರಾಜಕೀಯವಾಗಿ ಗೊಂದಲ ಮೂಡಿಸಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಬಾರದು, ವಿಶೇಷವಾಗಿ ಈ ನಡಿಗೆಯಲ್ಲಿ ಮುಸ್ಲೀಂ ಬಂದುಗಳಿಗೂ ಕಾಯ್ದೆಯ ಕುರಿತು ಮಾಹಿತಿ ನೀಡಿ ರಾಜಕೀಯ ಮಾತುಗಳಿಗೆ ಕಿವಿಗೊಡಬೇಡಿ, ದೇಶದ ಯಾವುದೇ ಕೋಮಿನವರಿಗೂ ಅನ್ಯಾಯವಾಗುವುದಿಲ್ಲ, ಅನ್ಯಾಯವಾಗಲೂ ನಾನು ಬಿಡುವುದಿಲ್ಲ, ಈ ಕಾಯ್ದೆ ದೇಶದ ಹಿತದೃಷ್ಟಿಯಿಂದ ಮುಖ್ಯವಾದದ್ದು, ಅವಶ್ಯಕವಾದದ್ದು ಎಂದು ತಿಳಿಸಿ ಸಾರ್ವಜನಿಕರು ಕಾಯ್ದೆಗೆ ಬೆಂಬಲಿಸಿ ನಡಿಗೆಯಲ್ಲಿ ಪಾಲ್ಗೊಳ್ಳಲುವ ಮೂಲಕ ದೇಶದ ಎಳಿಗೆಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಲಿಂಗರಾಜಪ್ಪ ಅಪ್ಪಾ, ಚಂದು ಪಾಟಿಲ ಇದ್ದರು. ನಾಗರೀಕ ಸಮಿತಿಯ ವಕ್ತಾರರಾದ ಎಂ.ಎಸ್. ಪಾಟಿಲ ನರಿಬೋಳ ನಾಗರಿಕ ಸಮಿತಿಯ ಶರಣಬಸಪ್ಪ ಅಂಬೆಸಿಂಗೆ ರವಿಂದ್ರ ಮುತ್ತಿನ, ಸಿದ್ದು ಹಿರೇಮಠ, ಸಿದ್ರರಾಜ ಬಿರಾದಾರ, ಮಂಜುನಾಥ ಕಾಳೆ, ಅಪ್ಪು ಗುಬ್ಬ್ಯಾಡ, ಪ್ರಶಾಂತ ಗುಡ್ಡಾ, ಶರಣು ಸಜ್ಜನ, ಚಂದ್ರಕಾಂತ ಕಾಳಗಿ, ಲಕ್ಷ್ಮೀಕಾಂತ ಜೋಳದ, ಅಶ್ವೀನ ಡಿ, ಮನೀಶ ಪಾಂಡೇ, ಮಹೇಶ ಕೆ. ಪಾಟಿಲ್, ಮಂಜುನಾಥ ಅಂಕಲಗಿ, ಗಿರೀಶ ಗೌಡ, ಸಾಗರ ರಾಠೋಡ, , ಸೇರಿ ಇನ್ನಿತರರು ಇದ್ದರು.
I seaport