ಚಿತ್ತಾಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದು ನಡೆದ ಭಾರತ ಬಂದ್ ಮುಷ್ಕರ ತಾಲೂಕಿನಲ್ಲಿ ಸಂಪೂರ್ಣ ವಿಫಲಗೊಂಡು ಬಂದ್ ಕೇವಲ ಪ್ರತಿಭಟನೆಗೆ ಸೀಮಿತಗೊಂಡಿತ್ತು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಭಾರತ ಬಂದ್ ಗೆ ಕರೆ ನೀಡಿತು ಇಂದು ಬೆಳಗ್ಗಿನಿಂದಲೇ ಶಾಲಾ-ಕಾಲೇಜುಗಳು, ವ್ಯಾಪಾರ-ವಹಿವಾಟು ಸೇರಿದಂತೆ ಸಾರಿಗೆ ಸಂಚಾರ ಯಥಾರೀತಿಯಲ್ಲಿ ನಡೆಯಿತು.
ಪಟ್ಟಣದ ಎಪಿಎಂಸಿ ಆವರಣದಿಂದ ತಾಲೂಕಿನ ಪ್ರಮುಖ ಬೀದಿಗಳ ಮುಖಾಂತರ ಆಗಮಿಸಿ ಪ್ರತಿಭಟನೆಯ ಮೆರವಣಿಗೆ ಬಸ್ ನಿಲ್ದಾಣದ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಾತನಾಡುತ್ತಾ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶದ ಪ್ರಜಾಪ್ರಭುತ್ವ ಆಶಯದ ವಿರುದ್ಧ ಆಡಳಿತ ನಡೆಸಿ ಕಾರ್ಮಿಕ ಕಾನೂನುಗಳನ್ನು ನಾಶ ಮಾಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಈರುಳ್ಳಿ ಪೆಟ್ರೋಲ್ ಸೇರಿದಂತೆ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಿ.ಕನಿಷ್ಠ ವೇತನ ರೂಪಾಯಿ 21000 ನಿಗದಿಪಡಿಸಿ. ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದುಪಡಿಸಿ. ಗುತ್ತಿಗೆ ಹಾಗೂ ಹೊರ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಿ. ಸಾರ್ವಜನಿಕ ಉದ್ಯಮಿಗಳ (ಪಿಎಸ್ ಯು) ಖಾಸಗೀಕರಣವನ್ನು ನಿಲ್ಲಿಸಿ. ಆಶಾ ಅಂಗನವಾಡಿ ಹಾಗೂ ಅಕ್ಷರ ದಾಸೋಹ ಸೇರಿದಂತೆ ಇತರೆ ಸ್ಕೀಂ ನೌಕರರನ್ನು ಕಾಯಂ ಮಾಡಿ.ರೈತರ ಕಲ್ಯಾಣಕ್ಕಾಗಿ ಕಾನೂನು ಮಾಡಿ.ಡಾ ಎಂಎಸ್ ಸ್ವಾಮಿನಾಥನ್ ಆಯೋಗದ ವರದಿ ಅನುಸರಿಸಿ ಭೂಮಿ ಬಾಡಿಗೆ ಕುಟುಂಬದ ಶ್ರಮ ನಿರ್ಧರಿಸಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ.ತೊಗರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸಿ ಹಾಗೂ ಸಬ್ಸಿಡಿ 1000 ರೂಪಾಯಿ ನೀಡಿ ರೈತರು ಬೆಳೆದಂತಹ ಸಂಪೂರ್ಣ ತೊಗರಿ ಖರೀದಿ ಮಾಡಬೇಕು.
ಉದ್ಯೋಗ ಖಾತ್ರಿ ಕೂಲಿಯನ್ನು 600 ರೂಪಾಯಿಗೆ ಹೆಚ್ಚಿಸಬೇಕು ಹಾಗೂ ಮೂರು ತಿಂಗಳಿಂದ ದುಡಿದ ಉದ್ಯೋಗಖಾತ್ರಿ ವೇತನದ ಹಣ ಬಿಡುಗಡೆ ಮಾಡಬೇಕು.ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದವರಿಗೆ ಪಿಂಚಣಿ ಹತ್ತು ಸಾವಿರ ರೂಪಾಯಿ ನೀಡಿ.ಜನವಿರೋಧಿ ಸಿಎಎ ಮತ್ತು ಎನ್ ಆರ್ ಸಿ ಹಾಗೂ ಎನ್ ಪಿ ಆರ್ ಕೂಡಲೇ ಹಿಂಪಡೆಯಿರಿ,ಮೂರರಿಂದ 9 ವರ್ಷ ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಕೈಬಿಡಬೇಕು.ಐಸಿಡಿಎಸ್ ಯೋಜನೆ 50% ರಷ್ಟು ಬಜೆಟ್ ಕಡಿತಗೊಳಿಸಿ ರುವುದನ್ನು ವಾಪಸಾಗಬೇಕು.ಬಿಸಿ ಊಟವನ್ನು ಖಾಸಗೀಕರಣಗೊಳಿಸುವ ಕೈಬಿಡಬೇಕು ಬಿಸಿಊಟದ ನೌಕರರನ್ನು ಕಾಯಂಗೊಳಿಸಿ ಕನಿಷ್ಠ ವೇತನ ಜಾರಿ ಮಾಡಬೇಕು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ (CITU) ಮತ್ತು ಕರ್ನಾಟಕ ಪ್ರಾಂತ ರೈತ ಸಂಘವು ಮಾನ್ಯ ರಾಷ್ಟ್ರಪತಿಗಳಿಗೆ ಬರೆದ ಪ್ರತಿಭಟನಾ ಮೆರವಣಿಗೆಯ ಮನವಿಯನ್ನು ತಹಸಿಲ್ದಾರ ಉಮಾಕಾಂತ್ ಹಳ್ಳೆ ಸ್ವೀಕರಿಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.
ಪ್ರತಿಭಟನೆಯಲ್ಲಿ ಶೇಖಮ್ಮ ಕುರಿ ಅಧ್ಯಕ್ಷರು ಸಿಐಟಿಯು, ದೇವಮ್ಮ ಅನ್ನದಾನಿ ಅಧ್ಯಕ್ಷೆ ಅಂಗನವಾಡಿ ನೌಕರರ ಸಂಘ, ಮಲ್ಲಣ್ಣ ಹೊನಗುಂಟಿ ಕಾರ್ಯದರ್ಶಿ ಗ್ರಾಂ ಪಂ ನೌಕರರ ಸಂಘ, ಶಾಮರಾವ್ ಸಂಗಾವಿ ಸಿಐಟಿಯು ಮುಖಂಡ, ಶಿವಪುತ್ರಪ್ಪ ಹೊಟ್ಟಿ ಸಿಐಟಿಯು ಕಾರ್ಯದರ್ಶಿ, ಸಂಗೀತ ಗುತ್ತೇದಾರ್ ಸಿಐಟಿಯು ಖಜಾಂಚಿ, ಚಿತ್ರಾಶೇಖರ್ ದೇವರಮನೆ, ವಿದ್ಯಾನಿಧಿ, ದೇವಿಂದ್ರಮ್ಮ, ಅಕ್ಕಮಾದೇವಿ,ಸೇರಿದಂತೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಇದ್ದರು.