ಕಲಬುರಗಿ: ಪೂಜಶ್ರೀ ಲಿಂಗರಾಜಪ್ಪ ಅಪ್ಪಾಜಿ ಅವರ ನೇತೃತ್ವದಲ್ಲಿ ನಡೆಯಲಿರುವ ಪೌರತ್ವ ಕಾಯ್ದೆ ಬೆಂಬಲಿಸಿ ನಡಿಗೆಗೆ ಹೆಚ್ಚಿನ ಪ್ರಚಾರ ನೀಡುವುದಕ್ಕಾಗಿ ಇಂದು ನಗರದಲ್ಲಿ ಆಟೋಗಳ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪೂಜ ಶ್ರೀ ರೇವಣಸಿದ್ಧ ಶಿವಾಚಾರ್ಯರು ಸ್ಟೇಷನ್ ಬಬಲಾದ ಚಾಲನೆ ನೀಡಿದ್ದು, ಶ್ರೀ ಗುರುಮೂರ್ತಿ ಶಿವಾಚಾರ್ಯರು ಪಾಳ, ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಲಿಂಗರಾಜಪ್ಪ ಅಪ್ಪ, ನಾಗರಿಕ ಸಮಿತಿ ಹಾಗೂ ವಕ್ತಾರರಾದ ಎಂ ಎಸ್ ಪಾಟೀಲ್ ನರಿಬೋಳ, ಮಂಜುನಾಥ ಕಾಳೆ, ಶರಣು ಸಜ್ಜನ, ಡಾ. ಶಂಬು ಪಾಟೀಲ ಬಳಬಟ್ಟಿ, ಚಂದ್ರಕಾಂತ ಕಾಳಗಿ, ಮಂಜುನಾಥ ಅಂಕಲಗಿ, ಮಲ್ಲು ಉದನೂರ, ಶರಣು ಅಂಬೆಸಿಂಗೆ, ಲಕ್ಷ್ಮೀಕಾಂತ ಜೋಳದ, ಸಿದ್ದಾರಾಜ ಬಿರಾದಾರ, ಶ್ವೇತಾ ಸಿಂಗ ಸೇರಿದಂತೆ ಸಮಿತಿಯ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.