15 ತಿಂಗಳ ಬಾಕಿ ವೇತನ ಬಿಡುಗಡೆ ಆಶಾ ಕಾರ್ಯಕರ್ತೆಯರ ಬ್ರಹತ್ ಪ್ರತಿಭಟನೆ

0
61

ಕಲಬುರಗಿ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಮಿತಿಯಿಂದ ಆಶಾ ಕಾರ್ಯಕರ್ತೆಯರ ಹದಿನೈದು ತಿಂಗಳ ಬಾಕಿ ವೇತನ ಬಿಡುಗಡೆ ಆಗ್ರಹಸಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ವಲ್ಲಭಬಾಯಿ ಪಟೇಲ್ ಚೌಕನಿಂದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆ ಉದ್ದೇಶಿಸಿ ಸಂಘದ ಜಿಲ್ಲಾ ಅಧ್ಯಕ್ಷರಾದ ವಿ.ಜಿ.ದೇಸಾಯಿ ಮಾತನಾಡಿ, ಆಶಾ ಕಾರ್ಯಕರ್ತರ ಬಾಕಿ ಇರುವ ಸಂಬಳ ಬಿಡುಗಡೆಗಾಗಿ  6 ತಿಂಗಳಿಂದ ವೇತನಕ್ಕಾಗಿ ಮನವಿ ಸಲ್ಲಿಸಲಾಗುತ್ತಿದ್ದು, ಈ ಬಗ್ಗೆ ಚಳುವಳಿಗಳು ನಡೆಯುತಿವೇ ಆದರೆ ಸರಕಾರ 15 ತಿಂಗಳ ಬಾಕಿ ವೇತನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ವೇತನ ಪ್ರೋತ್ಸಹಧನ ನೀಡುವವರೆಗೂ ಜಿಲ್ಲೆಯಲ್ಲಿ ಎಲ್ಲಾ ಆಶಾಗಳು ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸುವದಾಗಿ ಈ ಸಂದರ್ಭದಲ್ಲಿ  ತಿಳಿಸಿದರು. ನಂತರ ಎ.ಐ.ಯು.ಟಿ.ಯು.ಸಿ ನ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಎಂ.ಶರ್ಮಾ ರವರು ಮಾತನಾಡುತ್ತಾ, ಸರಕಾರವು ಆಶಾ ಕಾರ್ಯಕರ್ತೇಯರನ್ನು ನಿರ್ಲಕ್ಷಿಸುತ್ತಿದೆ. ಅವರ ನೋವಿಗೆ ಸ್ಪಂದಿಸುತ್ತಿಲ್ಲ. ಕೂಡಲೇ ಅವರ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಮನವಿ ಪತ್ರವನ್ನು ಸ್ವೀಕರಿಸಿ, ಜಿಲ್ಲೆಗೆ ಸಂಬಂದ ಪಟ್ಟ ವಿಷಯಗಳನ್ನು ಹತ್ತು ದಿನಗಳಲ್ಲಿ ಬಗೆಹರಿಸುವದಾಗಿ ತಿಳಿಸಿದರು ಅಲ್ಲದೆ ಎಂ.ಸಿ.ಟಿ.ಎಸ್. ಅನುದಾನದ ಬಗ್ಗೆ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ರಾಘವೇಂದ್ರ ಎಂ.ಜಿ. ಸಂತೋಷ ಹಿರವೆ, ಮಲ್ಲಿನಾಥ ಸಿಂಘೆ, ಶಿವಲಿಂಗಮ್ಮ, ಜ್ಯೋತಿ, ಸಾವಿತ್ರಿ, ಲಕ್ಷ್ಮೀ, ಮಹಾದೇವಿ, ಸೇರಿದಂತೆ ಸಾವಿರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here