ಸುರಪುರ: ಕರ್ನಾಟಕ ಜಾನಪದ ಪರಿಷತ್ತು ಸರಕಾರದ ಪ್ರಾತಿನಿಧಿಕ ಮತ್ತು ಕಲಾವಿಧರ ಪೋಷಣಾ ಸಂಸ್ಥೆಯಾಗಿದ್ದು ಇನ್ನು ಹೆಚ್ಚಿನ ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಶ್ರೀ. ಸುರೇಶ ಆರ್ ಸಜ್ಜನ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಯಾದಗಿರಿ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಕಲಾವಿಧರಿಗಾಗಿ ಮಾಹಿತಿ ಕೋಶ ನಿಟ್ಟಿನಲ್ಲಿ ರಚಿಸಿರುವ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಕರ್ನಾಟಕ ಜಾನಪದ ಪರಿಷತ್ತು ಹೆಚ್.ಎಲ್.ನಾಗೇಗೌಡರು ಕಟ್ಟಿ ಬೆಳೆಸುವುದರ ಮೂಲಕ ಇದರ ಪೋಷಣೆ ಮಾಡಿದ್ದಾರೆ. ಇಂದು ರಾಜ್ಯದ ತುಂಬಾ ಜನಪದ ಕಲಾವಿಧರ ಕ್ಷೇಮಾಭಿವೃದ್ಧಿಗಾಗಿ ಪರಿಷತ್ತು ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಚಟುವಟಿಕೆಗಳು ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ ಕಲಾವಿಧರ ಏಳಿಗೆ, ಬೆಳವಣಿಗೆ, ಸಹಕಾರ, ಪೊಷಣೆಯ ಜೊತೆಗೆ ಮೂಲ ಕಲಾವಿಧರ ಕಲೆಗಳ ದಾಖಲಿಕರಣ, ಕ್ಷೇತ್ರಕಾರ್ಯ, ಸಂಶೋಧನೆ, ಕಲೆಗಳ ಬಳುವಿಕೆಗಾಗಿ ಕರ್ನಾಟಕ ಜಾನಪದ ಪರಿಷತ್ತು ಪ್ರಸ್ತುತ ಟಿ.ತಿಮ್ಮೆಗೌಡ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಎಸ್.ಎಂ.ಕನಕರೆಡ್ಡಿ, ತಾಲೂಕಾ ವೀರಶೈವ ಸಮಿತಿಯ ಕಾರ್ಯದರ್ಶಿ ವೀರಪ್ಪ ಅವಂಟಿ, ಪ್ರಮುಖರಾದ ಶಾಂತರಾಜ ಬಾರಿ, ಸುಮಿತ್ರಪ್ಪ ಅಂಗಡಿ ಕೆಂಭಾವಿ, ಸಂಗಣ್ಣಗೌಡ ಪಾಟೀಲ್, ಬಿ.ಎಲ್ ಹಿರೇಮಠ, ಬಸವರಾಜ ಬೂದಿಹಾಳ, ವಿರೇಶ ನಿಷ್ಠಿ ದೇಶಮುಖ, ಮಂಜುನಾಥ ಗುಳಗಿ, ಆದಿತ್ಯ ಪೋಲಿಸ್ ಪಾಟೀಲ್ ಕೆಂಭಾವಿ, ಡಿ.ಸಿ ಪಾಟೀಲ್ ಕೆಂಭಾವಿ ಸೇರಿದಂತೆ ಇತರರಿದ್ದರು.