ಸುರಪುರ: ಮುಂದೆ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸುರಪುರ ಶಾಸಕ ನರಸಿಂಹ ನಾಯಕ (ರಾಜುಗೌಡ)ರಿಗೆ ಸಚಿವ ಸ್ಥಾನ ಸಿಗಲೆಂದು ಐದು ಕಿಲೋ ಮೀಟರ್ ದೀಡ ನಮಸ್ಕಾರ ಹಾಕುವ ಹರಕೆ ಹೊತ್ತಿರುವುದಾಗಿ ರಾಜುಗೌಡರ ಅಭಿಮಾನಿ ದೇವಿಕೇರಾ ಗ್ರಾಮದ ಮಲ್ಲನಗೌಡ ಮಾಲಿ ಪಾಟೀಲ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಈ ಹಿಂದೆ ೨೦೦೩ ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲೆಂದು ಇದೇ ರೀತಿಯ ಹರಕೆಯೊತ್ತಿದ್ದೆ,ಅಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು.
ನಂತರ ೨೦೧೮ರ ಡಿಸೆಂಬರ್ ತಿಂಗಳಲ್ಲಿ ತಿಂಥಣಿ ಬ್ರೀಜ್ಲ್ಲಿರುವ ಕನಕಗುರು ಪೀಠದ ಬೀರಲಿಂಗೇಶ್ವರ ಗದ್ದುಗೆಗೆ ಪ್ರಾರ್ಥನೆ ಮಾಡಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲೆಂದು ಬೇಡಿಕೊಂಡು ಯಡಿಯೂರಪ್ಪ ಸಾಹೇಬರಿಗೆ ಕಂಬಳಿ ಹೊದಿಸಿ ಟಗರನ್ನು ಕಾಣಿಕೆ ನೀಡಲಾಗಿತ್ತು,ಅದರಂತೆ ಈಗ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ.
ಈ ಮೊದಲಿನಿಂದಲು ನಾನು ಯಡಿಯೂರಪ್ಪನವರ ಕಟ್ಟಾ ಅಭಿಮಾನಿಯಾಗಿದ್ದು ಅವರು ಕೆಜೆಪಿ ಪಕ್ಷ ಕಟ್ಟಿದಾಗ ಪಕ್ಷದಲ್ಲಿದ್ದು ಹಗಲಿರಳು ದುಡಿದಿದ್ದೇನೆ.ಆದ್ದರಿಂದ ಈಗ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪ ಸಾಹೇಬರು ನಮ್ಮ ಸುರಪುರ ಮತಕ್ಷೇತ್ರದ ಶಾಸಕರಾದ ನರಸಿಂಹ ನಾಯಕ (ರಾಜುಗೌಡ)ರು ಉತ್ತಮ ಆಡಳಿತಗಾರರಾಗಿದ್ದು ಹಿಂದೆ ಸಣ್ಣ ಕೈಗಾರಿಕೆ ಸಚಿವರಾಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ.
ರಾಜ್ಯದ ಜನತೆಯ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಬಲ್ಲವರಾಗಿದ್ದಾರೆ.ಆದ್ದರಿಂದ ಶಾಸಕ ರಾಜುಗೌಡರಿಗೆ ಸಚಿವಸ್ಥಾನ ನೀಡಬೇಕೆಂದು ಮನವಿ ಮಾಡುತ್ತೇನೆ. ಅದೀರೀತಿಯಾಗಿ ಈಗ ರಾಜುಗೌಡರಿಗೆ ಸಚಿವಸ್ಥಾನ ಸಿಗಲೆಂದು ಕನಕಗುರು ಪೀಠದ ಬೀರಲಿಂಗೇಶ್ವರ ಗದ್ದುಗೆಗೆ ಇದೇ ತಿಂಗಳ ೧೩ನೇ ತಾರೀಖು ಬೆಳಿಗ್ಗೆ ತಾಲೂಕಿನ ಶಾಂತಪೂರ ಕ್ರಾಸ್ನಿಂದ ಸುಮಾರು ಐದು ಕಿಲೋ ಮೀಟರ್ಗಳು ದೀಡ ನಮಸ್ಕಾರ ಹಾಕುವ ಮೂಲಕ ರಾಜುಗೌಡರಿಗೆ ಸಚಿವಸ್ಥಾನ ಸಿಗಲೆಂದು ಬೀರಲಿಂಗೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು.