ತನು ಮನ ಧನದಿಂದ ಪಟ್ಟಾಧಿಕಾರ ಮಹೋತ್ಸವ ಯಶಸ್ವಿಗೊಳಿಸಿ: ದೇವಾಪುರ ಶ್ರೀ

0
123

ಸುರಪುರ: ತಾಲೂಕಿನಲ್ಲಿ ಶ್ರೀಮಲ್ಲಿಕಾರ್ಜುನ ದೇವಸ್ಥಾನ ಹೆಸರುವಾಸಿಯಾಗಿದ್ದು ಭಕ್ತರು ಅಪಾಸಂಖ್ಯೆಯಲ್ಲಿರುವಿರಿ ತಾವೆಲ್ಲರು ಸೇರಿ ಬಸವಲಿಂಗದೇವರ ಪಟ್ಟಾಧಿಕಾರ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಯಶಸ್ಸುಗೊಳಿಸುವಂತೆ ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ತಾಲೂಕಿನ ಲಕ್ಷ್ಮೀಪುರದ ಶ್ರೀ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಶ್ರೀಗಿರಿ ಮಠದ ಆವರಣದಲ್ಲಿ ಬಸವಲಿಂಗ ದೇವರ ಪಟ್ಟಾಧಿಕಾರ ಮಹೊತ್ಸವದ ಅಂಗವಾಗಿ ಆರಂಭಗೊಂಡ ಹೆಮರಡ್ಡಿ ಮಲ್ಲನ ಪುರಾಣ ಆರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಕಾರ್ಯಕ್ರಮದಲ್ಲಿ ಅನೇಕ ಜಗದ್ಗುರುಗಳು ವಿವಿಧ ಮಠಾಧೀಶರು,ಅನೇಕ ಜನ ಧುರಿಣರು ಭಾಗವಹಿಸಲಿದ್ದು ತಾವೆಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದರು. ಅಲ್ಲದೆ ಹೆಮರಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನ ಪರಮ ಭಕ್ತಳಾಗಿದ್ದಳು,ಮಲ್ಲಮ್ಮನವರ ಭಕ್ತಿ ಇಂದಿಗೂ ಎಲ್ಲರಿಗೂ ಆದರ್ಶವಾಗಿದೆ. ಅಂತಹ ಹೆiರಡ್ಡಿ ಮಲ್ಲಮ್ಮನ ಪುರಾಣವನ್ನು ನಿತ್ಯ ಕೇಳುವ ಸೌಭಾಗ್ಯ ಇಲ್ಲಿಯ ಭಕ್ತಾದಿಗಳಿಗೆ ಲಭಿಸಿದ್ದು ಪುಣ್ಯದಕಾರ್ಯವಾಗಿದೆ ಎಂದರು.

Contact Your\'s Advertisement; 9902492681

ಮತ್ತೋರ್ವ ಸ್ವಾಮೀಜಿ ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ,ಲಕ್ಷ್ಮೀಪುರ ಮತ್ತು ಬಿಜಾಸಪುರ ಎರಡು ಶ್ರೀಗಿರಿ ಮಠದ ಎರಡು ಕಣ್ಣುಗಳಿದ್ದಂತೆ.ಭಕ್ತಾದಿಗಳು ತಾವೆಲ್ಲರೂ ನಿತ್ಯವು ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುರಾಣದ ಜೊತೆಗೆ ಪಟ್ಟಾಧಿಕಾರವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಹಿರಿಯ ಮುಖಂಡ ಬಸವರಾಜಪ್ಪ ನಿಷ್ಠಿ ದೇಶಮುಖ ಮಾತನಾಡಿ,ಬಸವಲಿಂಗ ದೇವರವರ ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ನಾವೆಲ್ಲರೂ ನಿಂತ ಯಶಸ್ವಿಗೊಳಿಸೋಣ.ಮಲ್ಲಿಕಾರ್ಜುನ ಭಕ್ತಾದಿಗಳು ನಾವೆಲ್ಲ ಅಪಾರ ಸಂಖ್ಯೆಯಲ್ಲಿದ್ದು ನಿತ್ಯವು ಪುರಾಣದಲ್ಲಿ ಭಾಗವಹಿಸಿ ಪುನಿತರಾಗೋಣ ಎಂದರು.ನಂತರ ಶರಣಕುಮಾರ ಹಿತ್ತಲಶಿರೂರ ಅವರಿಂದ ಹೆಮರಡ್ಡಿ ಮಲ್ಲಮ್ಮನವರ ಪುರಾಣ ಆರಂಭಿಸಲಾಯಿತು.ರಾಜಶೇಖರ ಗೆಜ್ಜಿ ಸಂಗೀತ ಸಾಥ್ ನೀಡಿದರು.

ಕಾರ್ಯಕ್ರಮದ ವೇದಿಕೆ ಮೇಲೆ ರುಕ್ಮಾಪುರ ಹಿರೇಮಠ ಗುರುಶಾಂತಮೂರ್ತಿ ಶಿವಾಚಾರ್ಯ,ಸಗರ ಒಕ್ಕಲಿಗರ ಮಠದ ಮಹಾಂತ ಶಿವಾಚಾರ್ಯ,ಸಗರ ಹಿರೇಮಠದ ಸೋಮಶೇಖರ ಸ್ವಾಮೀಜಿ,ಶಹಾಪುರ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ,ಶ್ರೀಗಿರಿ ಮಠದ ಬಸವಲಿಂಗ ದೇವರು, ಮುಖಂಡರಾದ ವೀರಪ್ಪ ಆವಂಟಿ,ಸಂಗನಬಸಪ್ಪ ಪಾಟೀಲ ಸುರೇಶ ಸಜ್ಜನ,ಸೂಗುರೇಶ ವಾರದ,ಲಕ್ಷ್ಮೀರಡ್ಡಿ ಬಿಜಾಸಪುರ,ಶರಣಗೌಡ ಆಲ್ದಾಳ,ವಿರೇಶ ನಿಷ್ಠಿ ದೇಶಮುಖ,ಸಂಗಣ್ಣ ಯಕ್ಕೆಳ್ಳಿ,ಮಂಜುನಾಥ ಗುಳಗಿ,ಅಮರೇಶ ಕುಂಬಾರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು. ಲಕ್ಷ್ಮೀಪುರ,ಬಿಜಾಸಪುರ,ಕೃಷ್ಣಾಪುರ ಮತ್ತಿತರೆ ಗ್ರಾಮಗಳ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here