ಸುರಪುರ ಶಾಸಕ ರಾಜುಗೌಡ ಅವರಿಗೆ ಮಾತೃ ವಿಯೋಗ: ಸಂತಾಪ

0
247

ಕಲಬುರಗಿ: ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಅವರ ತಾಯಿ ತಿಮ್ಮಮ್ಮ ಗಂ.ಶಂಭನಗೌಡ ನಾಯಕ ನಿಧನ ಹೊಂದಿದ್ದಾರೆ.

ದಿವಂಗತರು ಸುಪುತ್ರ, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ನರಸಿಂಹ ನಾಯಕ್ (ರಾಜುಗೌಡ) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸುರಪುರ ತಾಲ್ಲೂಕಿನ ಸ್ವಗ್ರಾಮ ಕೋಡೆಕಲನಲ್ಲಿ ಮಂಗಳವಾರ ಮಧ್ಯಾಹ್ನ 12:30ಕ್ಕೆ ಸುಮಾರಿಗೆ ಜರುಗಲಿದೆ.

Contact Your\'s Advertisement; 9902492681

ಸಂತಾಪ: ಮ್ರತರ ಕುಟುಂಬಕ್ಕೆ ಭಗವಂತ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಶಕ್ಷ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳˌ ಪ್ರಥಮ ದರ್ಜೆ ಗುತ್ತಿಗೆದಾರ ಬಸನಗೌಡ ಹಾರಣಗೇರಾ, ತಿರುಪತಿ ಸಾಹು ಶೇರಿ, ಮಲ್ಲನಗೌಡ ಕೊಡಮನಹಳ್ಳಿ, ಗೌಡಪ್ಪಗೌಡ ಬಿರಾದಾರ, ಬಿಜೆಪಿ ಯುವ ಮುಖಂಡ ಅರುಣ್ ರೆಡ್ಡಿ ಶಿವಪೂರ, ಸುರೇಶ ಪಾಟೀಲ ನೇದಲಗಿ, ಸಂತೋಷ್ ರೆಡ್ಡಿ ಕರಣಗಿ, ರುದ್ರಯ್ಯ ಹಿರೇಮಠ್, ಫಯಾಜ್ ಪಟೇಲ್, ಗಂಗಾರಾಮ್ ರಾಥೋಡ ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here