ಔರಂಗಜೇಬನ ಆಸ್ಥಾನದ ಕುರಿತಾದ ನಾಟಕ ರಸಗಂಗಾ ಪ್ರದರ್ಶನ: ರಾಜಾ ಮದನಗೋಪಾಲ ನಾಯಕ

0
86

ಸುರಪುರ: ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಂದ ಅಭಿನಯಿಸಲ್ಪಡುವ ನಾಟಕ ಔರಂಗಜೇಬನ ಆಸ್ಥಾನದಲ್ಲಿಯ ಕುರಿತಾದ ಕಥಾಹಂದರವುಳ್ಳ ನಾಟಕ ರಸಗಂಗವಾಗಿದೆ,ವಿದ್ಯಾರ್ಥಿಗಳಿಗೆ ಪಠ್ಯವಾಗಿರುವುದರಿಂದ ಇದನ್ನು ವಿದ್ಯಾರ್ಥಿಗಳು ನೋಡಲೆಬೇಕಿದೆ ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಈ ತಿಂಗಳ ೧೬ನೇ ತಾರೀಖಿನಂದು ಸಂಜೆ ೬:೩೦ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ,ನಾಟಕ ವೀಕ್ಷಣೆ ಉಚಿತವಾಗಿದ್ದು ಎಲ್ಲರು ಬಂದು ನಾಟಕ ವೀಕ್ಷಿಸುವಂತೆ ಕರೆ ನೀಡಿದರು.ಮತ್ತೋರ್ವ ಮುಖಂಡ ಬುದ್ಧಘೋಷ ದೇವಿಂದ್ರಪ್ಪ ಹೆಗ್ಗಡೆ ಮಾತನಾಡಿ,ರಸಗಂಗಾ ತುಂಬಾ ಮನೋಜ್ಞವಾದ ನಾಟಕವಾಗಿದ್ದು,ವಿಕ್ರಂ ವಿಸಾಜಿಯವರು ಬರೆದಿದ್ದಾರೆ.ಇದರ ನಿರ್ದೇಶನವನ್ನು ಕಲ್ಯಾಣ ಕರ್ನಾಟಕ ಭಾಗದ ಹೆಸರಾಂತ ರಂಗಕಮಿ ಶಂಕ್ರಯ್ಯ ಗಂಟಿ ನಿರ್ದೇಶಿಸಲಿದ್ದಾರೆ.ಈ ನಾಟಕವು ಈಗಾಗಲೆ ನಾಡಿನ ಅನೇಕ ಕಡೆಗಳಲ್ಲಿ ಪ್ರದರ್ಶನಗೊಂಡಿದೆ ಅಲ್ಲದೆ ಬಿ.ಎ ದ್ವತೀಯ ವರ್ಷದ ಎರಡನೇ ಸೆಮಿಸ್ಟ್ರರ್‌ನಲ್ಲಿಯೂ ಪಠ್ಯವಾಗಿದ್ದು ಔರಂಗಜೇಬನ ಕಾಲದಲ್ಲಿನ ಆಸ್ಥಾನದಲ್ಲಿಯ ಆಡಳಿತದ ಕುರಿತು ಅದ್ಭುತವಾಗಿದೆ ರಚಿಸಿದ್ದಾರೆ ಎಂದರು.

Contact Your\'s Advertisement; 9902492681

ಸಿದ್ದಯ್ಯಸ್ವಾಮಿ ಸ್ಥಾವರಮಠ ಮಾತನಾಡಿ,ಈಗಾಗಲೇ ನಾಟಕ ವೀಕ್ಷಿಸಲು ಆಗಮಿಸುವಂತೆ ಎಲ್ಲಾ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ.ಅಲ್ಲದೆ ನಾಟಕ ಪ್ರದರ್ಶನಕ್ಕೆ ಎಲ್ಲಾ ದಲಿತ ಪ್ರಗತಿಪರ ಸಂಘಟನೆಗಳು ಭಾಗವಹಿಸಲಿವೆ. ನಾಟಕ ಪ್ರದರ್ಶನದ ಕಾರ್ಯಕ್ರಮವನ್ನು ಮಾಜಿ ಸಚಿವರಾದ ರಾಜಾ ಮದನಗೋಪಾಲ ನಾಯಕ ಉದ್ಘಾಟಿಸಲಿದ್ದು, ಬುದ್ಧಘೋಷ ದೇವಿಂದ್ರಪ್ಪ ಹೆಗ್ಡೆ ನೇತೃತ್ವ ವಹಿಸಲಿದ್ದಾರೆ.

ಅಲ್ಲದೆ ಮುಖ್ಯ ಅತಿಥಿಗಳಾಗಿ ತಹಸೀಲ್ದಾ ನಿಂಗಣ್ಣ ಬಿರೆದಾರ,ದಿವಾಯ್‌ಎಸ್‌ಪಿ ವೆಂಕಟೇಶ ಹೊಗಿಬಂಡಿ,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಹಾಗು ಅತಿಥಿಗಳಾಗಿ ಮಲ್ಲಿಕಾರ್ಜುನ ಕ್ರಾಂತಿ,ಮಲ್ಲಯ್ಯ ಕಮತಗಿ,ವೆಂಕಟೇಶ ಹೊಸ್ಮನಿ,ಅಹ್ಮದ ಪಠಾಣ ವೇದಿಕೆ ಮೇಲಿರಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಲ್ಲಯ್ಯ ಕಮತಗಿ, ರಾಘವೇಂದ್ರ ಹಾರಣಗೇರಾ,ಬಲಭೀಮ ದೇಸಾಯಿ,ಅಹ್ಮದ ಪಠಾಣ,ಮೂರ್ತಿ ಬೊಮ್ಮನಹಳ್ಳಿ ಇತರರಿದ್ದರು.ಇದೇ ಸಂದರ್ಭದಲ್ಲಿ ಸ್ಥಳಿಯ ಶಾಸಕ ನರಸಿಂಹ ನಾಯಕ(ರಾಜುಗೌಡ)ರ ತಾಯಿಯವರ ನಿಧನಕ್ಕೆ ಸಂತಾಪ ಸೂಚಿಸಿ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೋರಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here