ಬಯಲಾಟ ಕಲಾವಿಧರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ -ಪ್ರಕಾಶ ಅಂಗಡಿ

0
44

ಸುರಪುರ: ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ. ಟಿ.ಬಿ. ಸೊಲಬಕ್ಕನವರಿಗೆ ಮನವಿ ಮಾಡಿ, ಉತ್ತರ ಕರ್ನಾಟಕ ಭಾಗದ ಜನಪ್ರಿಯ ಕಲೆಗಳಲ್ಲೊಂದಾದ ಬಯಲಾಟ ಇಂದು ಅಳುವಿನ ಅಂಚಿನಲ್ಲಿದ್ದು ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಮೂಲಕ ಹೊಸ ಯೋಜನೆಗಳು ರೂಪಗೊಳ್ಳಲಿ ಜೊತೆಗೆ ನಮ್ಮ ಯಾದಗಿರಿ ಜಿಲ್ಲೆಯ ಕಲಾವಿಧರಿಗೆ ಹೆಚ್ಚಿನ ಲಭಿಸಲಿ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.

ಬೆಂಗಳೂರಿನ ಅಧ್ಯಕ್ಷರ ನಿವಾಸದಲ್ಲಿ ಭೇಟಿಮಾಡಿ ಮನವಿಮಾಡಿದ ಅಂಗಡಿ ಬಯಲಾಟ ಪರಂಪರೆಗೆ ಯಾದಗಿರಿ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು ರಸ್ತಾಪುರದ ಭೀಮಕವಿ, ೨೦ ಕ್ಕು ಹೆಚ್ಚು ಬಯಲಾಟಗಳನ್ನು ರಚಿಸುವ ಮೂಲಕ ಬಯಲಾಟದ ಭೀಷ್ಮ ಎಂದು ಗುರುತಿಸಿಕೊಂಡಿದ್ದಾರೆ. ತಳವಾರಗೇರಿಯ ಬಸನಗೌಡರು ಬಯಲಾಟ ಪರಂಪರೆಗಾಗಿ ಬದುಕು ಸವಿಸಿದ್ದಾರೆ.

Contact Your\'s Advertisement; 9902492681

ಹೊಸ ತಲೆಮಾರಿನ ಅನೇಕ ಜನ ಬಯಲಾಟದ ಗುರುಗಳು, ಕಲಾವಿಧರು, ಹಿನ್ನೆಲೆ ಗಾಯಕರು, ಕಲೆಯ ಪೋಷಕರು ಸರಕಾರದ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಜಾಗೃತರಾಗಿಲ್ಲ. ಕಾರಣ ತಾವೊಬ್ಬ ಹಿರಿಯ ಬಯಲಾಟ ಕಲಾವಿಧರಾಗಿದ್ದು, ಜಾನಪದ ವಿದ್ವಾಂಸರಾಗಿದ್ದು ತಮ್ಮ ಅವಧಿಯಲ್ಲಿ ಹೆಚ್ಚಿನ ಕಾರ್ಯ ಆಗಲಿ ಎಂದು ಮನವಿಮಾಡಿದರು. ಈ ಸಂದರ್ಭದಲ್ಲಿ ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here